ಕೆವಿನ್ ಪೀಟರ್ಸನ್ ಔಟ್, ಧೋನಿ ಪಡೆಗೆ ಇನ್ನೊಂದು ಆಘಾತ!

Posted By:
Subscribe to Oneindia Kannada

ಪುಣೆ, ಏಪ್ರಿಲ್ 25: ಸತತ ಸೋಲಿನ ಸುಳಿಯಲ್ಲಿ ಸಿಲುಕಿರುವ ಎಂಎಸ್ ಧೋನಿ ನೇತೃತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡಕ್ಕೆ ಮತ್ತೊಂದು ಆಘಾತವಾಗಿದೆ. ಸ್ಟಾರ್ ಬ್ಯಾಟ್ಸ್ ಮನ್ ಕೆವಿನ್ ಪೀಟರ್ಸನ್ ಅವರು ಗಾಯದ ಸಮಸ್ಯೆಯಿಂದ ಗುಣಮುಖರಾಗದ ಕಾರಣ ಐಪಿಎಲ್ 9ರಿಂದ ಹೊರ ಬಿದ್ದಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

35 ವರ್ಷದ ಇಂಗ್ಲೆಂಡ್ ಆಟಗಾರ ಕೆವಿನ್ ಪೀಟರ್ಸನ್ ಅವರು ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದ ವೇಳೆ ಮೀನುಖಂಡದ ಸೆಳೆತಕ್ಕೆ ಸಿಲುಕಿ ಮೈದಾನದಿಂದ ಹೊರ ನಡೆದಿದ್ದರು. ಪುಣೆ ವಿರುದ್ಧ ಆರ್ ಸಿಬಿ ಜಯಭೇರಿ ಬಾರಿಸಿತ್ತು. [ಕೆವಿನ್ ಗೆ ದಕ್ಷಿಣ ಆಫ್ರಿಕಾ ಪರ ಬ್ಯಾಟ್ ಬೀಸುವಾಸೆ!]

Kevin Pietersen ruled out IPL with calf injury

ಈ ಬಾರಿಯ ಐಪಿಎಲ್ ನಲ್ಲಿ 119.67 ಸ್ಟ್ರೈಕ್ ರೇಟ್ ಹಾಗೂ 36.50 ರನ್ ಸರಾಸರಿಯಂತೆ ನಾಲ್ಕು ಇನ್ನಿಂಗ್ಸ್ ನಿಂದ 73ರನ್ ಗಳಿಸಿದ್ದಾರೆ, ಸೂಪರ್ ಜೈಂಟ್ಸ್ ತಂಡ ತನ್ನ ಚೊಚ್ಚಲ ಸೀಸನ್ ನಲ್ಲಿ ಸತತ ನಾಲ್ಕು ಸೋಲಿನ ನಂತರ ಅಂಕ ಪಟ್ಟಿಯಲ್ಲಿ ಕುಸಿಯುತ್ತಿದೆ.

'ಗಾಯ ಗಂಭೀರವಾಗಿದ್ದು, ಭಾರತದಿಂದ ನಿರ್ಗಮಿಸುತ್ತಿದ್ದೇನೆ. ಗಾಯಗಳಾಗುವುದು ವೃತ್ತಿಪರ ಕ್ರೀಡಾಪಟುಗಳ ಜೀವನದ ಅವಿಭಾಜ್ಯ ಅಂಗ' ಎಂದು 35 ವರ್ಷದ ಕೆಪಿ ತಮ್ಮ ಇನ್ಸ್​ಟಾಗ್ರಾಂ ಪುಟದಲ್ಲಿ ಬರೆದುಕೊಂಡಿದ್ದಾರೆ.

ವಿಮಾನದಲ್ಲಿ ಆರ್ಸೆನಲ್(ಇಂಗ್ಲೀಷ್ ಪ್ರೀಮಿಯರ್ ಲೀಗ್ ಫುಟ್ಬಾಲ್ ತಂಡ) ವಿರೋಧಿ ಮಗುವೊಂದು ಪ್ರಯಾಣಿಸುತ್ತಿದೆ. ಆವಾಗಿನಿಂದ ಅಳುತ್ತಿದೆ ಎಂದು ಪ್ರಯಾಣದ ವೇಳೆ ಟ್ವೀಟ್ ಮಾಡಿದ್ದಾರೆ.


(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former England batting star Kevin Pietersen has been ruled out of the remainder of the Indian Premier League 9 owing to a calf injury, dealing a blow to Rising Pune Supergiants' hopes of reviving their stuttering campaign.
Please Wait while comments are loading...