ಕೆವಿನ್ ಪೀಟರ್ಸನ್ ಐಪಿಎಲ್ 10ರಿಂದ ಹೊರಕ್ಕೆ!

Posted By:
Subscribe to Oneindia Kannada

ಲಂಡನ್, ಫೆಬ್ರವರಿ 03: ಇಂಗ್ಲೆಂಡ್ ಮೂಲದ ಸ್ಫೋಟಕ ಬ್ಯಾಟ್ಸ್ ಮನ್ ಕೆವಿನ್ ಪೀಟರ್ಸನ್ ಅವರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ನೇ ಆವೃತ್ತಿಯಲ್ಲಿ ಆಡುತ್ತಿಲ್ಲ. ಈ ತಿಂಗಳಲ್ಲಿ ನಡೆಯಲಿರುವ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಿಂದ ಹೊರಗುಳಿದಿರುವುದಾಗಿ ಕೆವಿನ್ ಪೀಟರ್ಸನ್ ಟ್ವೀಟ್ ಮಾಡಿದ್ದಾರೆ.[ನಮ್ಮ ಬೆಂಗಳೂರಿನಲ್ಲಿ ಐಪಿಎಲ್ 10 ರ ಹರಾಜು]

ಬಿಡುವಿಲ್ಲದ ವೈಯಕ್ತಿಕ ಕಾರ್ಯಕ್ರಮಗಳ ವೇಳಾಪಟ್ಟಿಯಿಂದಾಗಿ ನಾನು ಈ ಬಾರಿ ಐಪಿಎಲ್ ನಲ್ಲಿ ಭಾಗವಹಿಸದೇ ಇರುವ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಪೀಟರ್ಸನ್ ಟ್ವೀಟ್ ಮಾಡಿದ್ದಾರೆ.[ಯಾವ ತಂಡದಿಂದ ಯಾವ ಕ್ರಿಕೆಟರ್ ಗೆ ಕೊಕ್!]

Kevin Pietersen pulls out of IPL 2017

ಆಸ್ಟ್ರೇಲಿಯಾದ ಬಿಗ್‌ಬಾಶ್ ಟ್ವೆಂಟಿ-20 ಟೂರ್ನಿಯಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಪರ ಆಡಿದ್ದರು. ದಕ್ಷಿಣ ಆಫ್ರಿಕ ಕ್ರಿಕೆಟ್ ಲೀಗ್‌ನಲ್ಲಿ ಹಾಲಿವುಡ್‌ ಬೆಟ್ಸ್ ಡಾಲ್ಫಿನ್ಸ್ ತಂಡದ ಪರ ಅಡಿದ್ದಾರೆ.[ಯಾವ ತಂಡದಲ್ಲಿ ಯಾವ ಆಟಗಾರರನ್ನು ಉಳಿದುಕೊಂಡಿದ್ದಾರೆ?]

ಐಪಿಎಲ್ ನಲ್ಲ್ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಆಡುತ್ತಿದ್ದ ಕೆಪಿ ಅವರು 2016ರಲ್ಲಿ ಕೇವಲ ನಾಲ್ಕು ಪಂದ್ಯಗಳನ್ನಾಡಿ 73ರನ್ ಗಳಿಸಿದ್ದರು, ನಂತರ ಗಾಯಗೊಂಡು ಟೂರ್ನಿಯಿಂದ ಹೊರಗುಳಿದಿದ್ದರು. ಪೀಟರ್ಸನ್ ಒಟ್ಟು 40 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಒಟ್ಟು 1,074 ರನ್ ಗಳಿಸಿದ್ದಾರೆ. 1 ಶತಕ, 3 ಅರ್ಧಶತಕ ಗಳಿಸಿರುವ ಅವರು 3 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kevin Pietersen will not play the 2017 season of the IPL, citing a busy winter as a reason for not entering the player auction scheduled for later this month.
Please Wait while comments are loading...