ಕೆವಿನ್ ಗೆ ದಕ್ಷಿಣ ಆಫ್ರಿಕಾ ಪರ ಬ್ಯಾಟ್ ಬೀಸುವಾಸೆ!

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 11: ದಕ್ಷಿಣ ಆಫ್ರಿಕಾ ಮೂಲಕದ ಇಂಗ್ಲೆಂಡಿನ ಬ್ಯಾಟ್ಸ್ ಮನ್ ಕೆವಿನ್ ಪೀಟರ್ಸೆನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಡಲು ಬಯಸಿದ್ದಾರೆ. ಆದರೆ, ಈ ಬಾರಿ ಇಂಗ್ಲೆಂಡ್ ಬದಲಿಗೆ ದಕ್ಷಿಣ ಆಫ್ರಿಕಾ ತಂಡದ ಕದ ತಟ್ಟುತ್ತಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಪುಣೆ ಸೂಪರ್ ಜೈಂಟ್ಸ್ ತಂಡದ ಪರ ಐಪಿಎಲ್​ನಲ್ಲಿ ಆಡುತ್ತಿರುವ 35 ವರ್ಷದ ಪೀಟರ್ಸನ್ ಅವರು ತಮ್ಮ ಕ್ರಿಕೆಟ್ ಬದುಕಿನ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ.[ಗೇಲ್-ಪೀಟರ್ ಸನ್ ಸಿಕ್ಸರ್ ವಾರ್]

'ದಕ್ಷಿಣ ಆಫ್ರಿಕಾ ತಂಡಕ್ಕೆ ಆಡುವ ಅರ್ಹತೆ ನನಗೆ ಈಗಲೂ ಇದೆ. ಹೀಗಾಗಿ, ಒಂದು ಆಯ್ಕೆ ಇರಲಿದೆ ಮತ್ತು ಸದಾ ಎಂಜಾಯ್ ಮಾಡುವ ನಾನು ಜೀವನವನ್ನು ವಿಪರೀತ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅಕಸ್ಮಾತ್ ಇದು ಆದರೂ ಆಗಬಹುದು ಅಥವಾ ಆಗದೆಯೂ ಇರಬಹುದು' ಎಂದು ಹೇಳಿದ್ದಾರೆ.

Kevin Pietersen

ಆದರೆ ಪೀಟರ್ಸೆನ್ 2018ರಲ್ಲಷ್ಟೇ ದಕ್ಷಿಣ ಆಫ್ರಿಕಾ ಪರ ಆಡಲು ಸಾಧ್ಯ. ಆಗ ಅವರಿಗೆ 37 ವರ್ಷ ವಯಸ್ಸಾಗಿರುತ್ತದೆ. ಇಂಗ್ಲೆಂಡ್ ಪರ ಆಡುವುದಕ್ಕಾಗಿ 2004ರಲ್ಲಿ ತವರು ನೆಲ ತ್ಯಜಿಸಿದ್ದ ಪೀಟರ್ಸನ್, 104 ಟೆಸ್ಟ್​ಗಳಲ್ಲಿ 23 ಶತಕ ಸಹಿತ 47.28 ರನ್ ಸರಾಸರಿ 8,181 ರನ್ ಗಳಿಸಿದ್ದಾರೆ.[ದ್ರಾವಿಡ್ ರನ್ನು ಕೆವಿನ್ ಪೀಟರ್ಸನ್ ಹೊಗಳಿದ್ದೇಕೆ?]

2013-14ರ ಆಷ್ಯಸ್ ಸರಣಿ ನಂತರ ಕೆವಿನ್ ಅವರನ್ನು ತಂಡದಿಂದ ಹೊರ ಹಾಕಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡಿಗೆ ಮತ್ತೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಯಾವುದೇ ಇರಾದೆ ಇಲ್ಲ.

ಐಪಿಎಲ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಪರ ಆಡುತ್ತಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Former England batsman Kevin Pietersen is eyeing a return to international cricket by playing for his country of birth, South Africa, saying it is "definitely still an option".
Please Wait while comments are loading...