ಕ್ರಿಕೆಟರ್ ಶ್ರೀಶಾಂತ್ ಮೇಲಿನ ನಿಷೇಧ ರದ್ದು

Posted By:
Subscribe to Oneindia Kannada

ತಿರುವನಂತಪುರಂ, ಆಗಸ್ಟ್ 07:ಕ್ರಿಕೆಟರ್ ಶ್ರೀಶಾಂತ್ ಮೇಲೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆಯುವಂತೆ ಕೇರಳದ ಹೈಕೋರ್ಟ್ ಸೋಮವಾರದಂದು ಆದೇಶಿಸಿದೆ.

ಬಿಜೆಪಿ ಸೇರಿದ ಕ್ರಿಕೆಟಿಗ ಶ್ರೀಶಾಂತ್, ಚುನಾವಣೆಗೆ ಸ್ಪರ್ಧೆ?

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್ ನಲ್ಲಿ ತೊಡಗಿದ್ದ ಆರೋಪದ ಮೇಲೆ ಕೇರಳ ಮೂಲದ ವೇಗಿ, ರಾಜಸ್ಥಾನ್ ರಾಯಲ್ಸ್ ತಂಡದ ಮಾಜಿ ಆಟಗಾರ ಶ್ರೀಶಾಂತ್ ಮೇಲೆ ಕ್ರಿಕೆಟ್ ನಿಂದ ದೂರವುಳಿಯುವಂತೆ ಆಜೀವ ನಿಷೇಧ ಹೇರಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆದೇಶ ಹೊರಡಿಸಿತ್ತು.

Kerala HC lifts ban on cricketer Sreesanth imposed by BCCI

ಟೀಂ ಇಂಡಿಯಾದ ವೇಗಿ ಎಸ್ ಶ್ರೀಶಾಂತ್ ಮೇಲೆ ಹೇರಿರುವ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಜೀವಾವಧಿ ನಿಷೇಧವನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಕೇರಳ ಹೈಕೋರ್ಟ್ ಗೆ ಏಪ್ರಿಲ್ ನಲ್ಲಿ ಸ್ಪಷ್ಟಪಡಿಸಿತ್ತು.

ಶ್ರೀಶಾಂತ್ ಸೇರಿ ಮೂವರು ಆರೋಪ ಮುಕ್ತ

ದೆಹಲಿ ಉಚ್ಚ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿದ್ದರೂ ಕ್ರಿಕೆಟ್ ಮಂಡಳಿಯ ಆಂತರಿಕ ಸಮಿತಿ ಅದಕ್ಕೆ ಒಪ್ಪುವುದಿಲ್ಲ. ಮಂಡಳಿಯ ನಿಯಮಗಳನ್ನು ಉಲ್ಲಂಘಿಸುವವರನ್ನು ಸಹಿಸಿಕೊಳ್ಳಲಾಗದು" ಎಂದು ತಿಳಿಸಿತ್ತು

Sreesanth a Tragedy | Oneindia Kannada video

ರಾಜಸ್ತಾನ ರಾಯಲ್ಸ್ ತಂಡದ ಆಟಗಾರರರಾಗಿದ್ದ ಶ್ರೀಶಾಂತ್ 2013ರ ಐಪಿಎಲ್ ವೇಳೆ ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ನಿಷೇಧಕ್ಕೆ ಗುರಿಯಾಗಿದ್ದರು. ಸಾಕ್ಷ್ಯಾಧಾರದ ಕೊರತೆಯಿಂದಾಗಿ 2015ರಲ್ಲಿ ದೆಹಲಿ ನ್ಯಾಯಾಲಯ ಕೇರಳದ ಕ್ರಿಕೆಟಿಗನನ್ನು ದೋಷಮುಕ್ತಗೊಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kerala High Court lifts ban on cricketer Sreesanth imposed by BCCI
Please Wait while comments are loading...