ಜಾಧವ್ ವಿಕೆಟ್ ಕಿತ್ರು, ಕಾಮೆಂಟೆಟರ್ ಸ್ಕಾಟ್ ಕಾಲ್ಕಿತ್ರು!

Posted By:
Subscribe to Oneindia Kannada

ಮೊಹಾಲಿ, ಅಕ್ಟೋಬರ್ 24: ನ್ಯೂಜಿಲೆಂಡ್ ನ ಮಾಜಿ ಆಲ್ ರೌಂಡರ್ ಸ್ಕಾಟ್ ಸ್ಟೈರಿಸ್ ಅವರು 'ಬಲವಂತ' ವಾಗಿ ಕಾಮೆಂಟ್ರಿ ಬಾಕ್ಸಿನಿಂದ ಕಾಲ್ಕಿತ್ತ ಘಟನೆ ಬೆಳಕಿಗೆ ಬಂದಿದೆ. ಮೊಹಾಲಿ ನಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ಇಂಥದ್ದೊಂದು ಘಟನೆ ಸಂಭವಿಸಿದೆ.

ಮೊಹಾಲಿ ಪಂದ್ಯದ ವೇಳೆ ಆಫ್ ಸ್ಪಿನ್ನರ್ ಕೇದಾರ್ ಜಾಧವ್ ಅವರು ಬೌಲಿಂಗ್ ಗೆ ಬಂದಾಗ ಕಾಮೆಂಟ್ರಿ ಬಾಕ್ಸಿನಲ್ಲಿ ರವಿಶಾಸ್ತ್ರಿ, ಸುನಿಲ್ ಗವಾಸ್ಕರ್ ಹಾಗೂ ಸ್ಕಾಟ್ ಸ್ಟೈರಿಸ್ ಇದ್ದರು.

ಟಾಸ್ ಗೆದ್ದ ಧೋನಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು, ಮಾರ್ಟಿನ್ ಗಪ್ಟಿಲ್ ಹಾಗೂ ಟಾಮ್ ಲಾಥಮ್ ಒಳ್ಳೆ ಆರಂಭ ನೀಡಿದ್ದರು. ಗಪ್ಟಿಲ್ ಅವರು 46ರನ್ ಗಳಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ನಾಯಕ ಕೇನ್ ವಿಲಿಯಮ್ಸನ್ ಬಂದರು. ಮೊದಲ ಹತ್ತು ಓವರ್ ಗಳಲ್ಲಿ 64ರನ್ ಗಳಿಸಿದ್ದ ಕಿವೀಸ್ ಉತ್ತಮ ಸ್ಥಿತಿಯಲ್ಲಿತ್ತು.

ಜಾಧವ್ ಬೌಲಿಂಗ್ ಗೆ: ಪಂದ್ಯದ 13ನೇ ಓವರ್ ಸಂದರ್ಭದಲ್ಲಿ ಜಾಧವ್ ಗೆ ಬೌಲಿಂಗ್ ಮಾಡುವಂತೆ ಧೋನಿ ಸೂಚಿಸಿದರು. ಕಿವೀಸ್ ಆರಂಭ ಕಂಡು ಸಕತ್ ಖುಷಿಗೊಂಡ ಸ್ಕಾಟ್, ಒಂದು ವೇಳೆ ಜಾಧವ್ ಏನಾದರೂ ವಿಕೆಟ್ ಕಿತ್ತರೆ ನಾನು ಕಾಮೆಂಟ್ರಿ ಬಾಕ್ಸ್ ತೊರೆಯುತ್ತೇನೆ ಎಂದು ಗವಾಸ್ಕರ್ ಹಾಗೂ ಶಾಸ್ತ್ರಿ ಎದುರು ಕೊಚ್ಚಿಕೊಂಡರು.

ಅದೇ ಓವರ್ ನಲ್ಲಿ ಜಾಧವ್ ವಿಕೆಟ್ ಕಿತ್ತರು

ಅದೇ ಓವರ್ ನಲ್ಲಿ ಜಾಧವ್ ವಿಕೆಟ್ ಕಿತ್ತರು

ಅದೇ ಓವರ್ ನಲ್ಲಿ ಜಾಧವ್ ಅವರು ಕೇನ್ ವಿಲಿಯಮ್ಸನ್ ವಿಕೆಟ್ ಕಿತ್ತರು. ಜಾಧವ್ ಎಲ್ ಬಿ ಬಲೆಗೆ ವಿಲಿಯಮ್ಸನ್ ಬೀಳುತ್ತಿದ್ದಂತೆ ಅತ್ತ ಕಾಮೆಂಟ್ರಿ ಬಾಕ್ಸಿನಲ್ಲಿ ಮುಜುಗರಕ್ಕೀಡಾದ ಸ್ಕಾಟ್ ಕಾಲ್ಕಿತ್ತರು. ಗವಾಸ್ಕರ್ ಹಾಗೂ ಶಾಸ್ತ್ರಿ ನಗೆ ಕಡಲಲ್ಲಿ ಮುಳುಗಿದರು

ಜಸ್ಟ್ ಫಾರ್ ಲಾಫ್, ಸ್ಕಾಟ್ ಎಲ್ಲಿಗೆ ಹೊರಟ್ರಿ!

ಜಸ್ಟ್ ಫಾರ್ ಲಾಫ್, ಸ್ಕಾಟ್ ಎಲ್ಲಿಗೆ ಹೊರಟ್ರಿ! ಎಂದು ಕೇಳಿದ ಶಾಸ್ತ್ರಿ, ಹೇಳಿದಂತೆ ನಡೆದುಕೊಳ್ಳುತ್ತಿದ್ದೇನೆ. ಜಾಧವ್ ವಿಕೆಟ್ ಪಡೆದರು. ನಾನು ಕಾಮೆಂಟ್ರಿ ಬಾಕ್ಸ್ ಬಿಡುತ್ತಿದೇನೆ ಎಂದ ಸ್ಕಾಟ್. ಸ್ಕಾಟ್ ಕಾಮೆಂಟ್ರಿ ಬಾಕ್ಸಿನಿಂದ ಹೊರಕ್ಕೆ ಹೋಗುವ ದೃಶ್ಯದ ತುಣುಕು ಟ್ವೀಟ್ ಮಾಡಿದ ಬಿಸಿಸಿಐ.

ಟ್ವಿಟ್ಟರ್ ನಲ್ಲಿ ಸ್ಕಾಟ್ ಕಾಲೆಳೆದ್ರು

ಟ್ವಿಟ್ಟರ್ ನಲ್ಲಿ ಸ್ಕಾಟ್ ಕಾಲೆಳೆಯಲು ಸಾರ್ವಜನಿಕರು ಆರಂಭಿಸುತ್ತಿದ್ದಂತೆ. Hiding ಎಂದು ಸ್ವತಃ ಸ್ಕಾಟ್ ಟ್ವೀಟ್ ಮಾಡಿದ್ದು ಹುಬ್ಬೇರಿಸುವಂತೆ ಮಾಡಿತು. ಕೆಲವರು ಸ್ಕಾಟ್ ಪರ ಸಹನೂಭೂತಿ ಟ್ವೀಟ್ ಮಾಡಿದರು.

ಕೇದಾರ್ ಜಾಧವ್ ಸರಣಿಯಲ್ಲಿ ಉತ್ತಮ ಆಟ

ಕೇದಾರ್ ಜಾಧವ್ ಸರಣಿಯಲ್ಲಿ ಉತ್ತಮ ಆಟ

ಮೊದಲ ಎರಡು ಪಂದ್ಯಗಳಲ್ಲೂ ಆಫ್ ಸ್ಪಿನ್ನರ್ ಆಗಿ ಕೇದಾರ್ ಜಾಧವ್ ಅವರು ಉತ್ತಮ ನಿರ್ವಹಣೆ ತೋರಿ ವಿಕೆಟ್ ಕಿತ್ತಿದ್ದರು. ಜಾಧವ್ ಅವರ ಪ್ರದರ್ಶನ ನನಗೂ ಅಚ್ಚರಿ ಮೂಡಿಸಿದೆ. ಆಲ್ ರೌಂಡರ್ ಗಳ ಕೊರತೆಯನ್ನು ಜಾಧವ್ ಕೂಡಾ ನೀಗಿಸುತ್ತಿದ್ದಾರೆ. ಪಂದ್ಯದ ಮಹತ್ವದ ಸಂದರ್ಭಗಳಲ್ಲಿ ವಿಕೆಟ್ ಉದುರಿಸಿದ್ದಾರೆ ಎಂದು ಧೋನಿ ಅವರು ಮೊಹಲಿ ಪಂದ್ಯದ ನಂತರ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former New Zealand all-rounder Scott Styris was 'forced' to leave the commentary box red faced during the India Vs New Zealand third ODI at Mohali.
Please Wait while comments are loading...