3ನೇ ಟೆಸ್ಟ್: ಶಿಖರ್ ಧವನ್ ಸ್ಥಾನಕ್ಕೆ ಕರುಣ್ ನಾಯರ್!

Written By: Ramesh
Subscribe to Oneindia Kannada

ನವದೆಹಲಿ, ಅಕ್ಟೋಬರ್. 04 : ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದ ಆರಂಭಿಕ ಆಟಗಾರನಾಗಿ ಶಿಖರ್ ದವನ್ ಬದಲಿಗೆ ಕರುಣ್ ನಾಯರ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ.

ಕೆಎಲ್ ರಾಹುಲ್ ನಂತರ ಶಿಖರ್ ಧವನ್ ಅವರು ಕೂಡಾ ಗಾಯಾಳುವಾಗಿ ಪಂದ್ಯದಿಂದ ಹೊರ ಬಿದ್ದಿದ್ದಾರೆ. ಮೂರನೇ ಟೆಸ್ಟ್ ಪಂದ್ಯಕ್ಕೆ ಶಿಖರ್ ಧವನ್ ಅಲಭ್ಯರಾಗಿದ್ದಾರೆ. ಇದರಿಂದ ಶಿಖರ್ ಅವರ ಸ್ಥಾನಕ್ಕೆ ಯುವ ಬ್ಯಾಟ್ಸ್ ಮನ್ ಕರುಣ್ ನಾಯರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿ ಅಜಯ್ ಶಿರ್ಕೆ ಅಕ್ಟೋಬರ್ 3ರಂದು ಪ್ರಕಟಿಸಿದರು. [250ನೇ ಟೆಸ್ಟ್ ಗೆದ್ದ ಭಾರತಕ್ಕೆ ಕಿವೀಸ್ ವಿರುದ್ಧ ಸರಣಿ]

Karun Nair

ಭಾನುವಾರದಂದು ಟ್ರೆಂಟ್ ಬೌಲ್ಟ್ ಅವರ ಎಸೆತವನ್ನು ಎದುರಿಸುವಾಗ ಧವನ್ ಅವರು ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಧವನ್ ಅವರಿಗೆ 15 ದಿನಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ಬಿಸಿಸಿಐ ತಿಳಿಸಿದೆ. [ಮೂರನೇ ಟೆಸ್ಟ್ ಪಂದ್ಯಕ್ಕೆ ಹೊಸ ಆರಂಭಿಕ ಆಟಗಾರ]

ಶನಿವಾರ (ಅಕ್ಟೋಬರ್ 8)ರಂದು ಇಂದೋರ್ ನಲ್ಲಿ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಭಾರತ ಈಗಾಗಲೇ 2-0ರ ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Board of Control for Cricket in India (BCCI) on Monday announced promising young batsman Karun Nair as a replacement for injured Shikhar Dhawan.
Please Wait while comments are loading...