ಬೆಂಗಳೂರಿಗೆ ಹಿಂದಿರುಗಿದ ಕರ್ನಾಟಕ ಪ್ರೀಮಿಯರ್ ಲೀಗ್

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 3: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾದರಿಯಲ್ಲಿ ರಾಜ್ಯದಲ್ಲಿ ಪ್ರತಿ ವರ್ಷ ನಡೆಯುವ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಕ್ರಿಕೆಟ್ ಪಂದ್ಯಾವಳಿಯ ಈ ವರ್ಷದ ಆವೃತ್ತಿಯನ್ನು (6ನೇ ಆವೃತ್ತಿ) ಸೆಪ್ಟಂಬರ್ ನಲ್ಲಿ ನಡೆಸಲಾಗುವುದು ಎಂದು ಕರ್ನಾಟಕ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ) ಹೇಳಿದೆ. ಅಲ್ಲದೆ, ಇದೇ ತಿಂಗಳ 6ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಅದು ತಿಳಿಸಿದೆ.

ಗುರುವಾರ (ಆಗಸ್ಟ್ 3), ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಕೆಪಿಎಲ್ ಪಂದ್ಯಗಳು ನಡೆಯುವ ಸ್ಥಳಗಳ ಬಗ್ಗೆ ಮಾಹಿತಿ ನೀಡಿತು.

50ನೇ ಟೆಸ್ಟ್ ನಲ್ಲಿ ಶತಕ ಸಿಡಿಸಿದವರ ಪಟ್ಟಿ: ಪೂಜಾರಗೆ 7ನೇ ಸ್ಥಾನ

arnataka Premier League return to Bengaluru

ಈ ಬಾರಿ ಹೊಸ ತಂಡ: ಕಳೆದ ವರ್ಷದವರೆಗೆ ಕೆಪಿಎಲ್ ನಲ್ಲಿ ಆಡಿದ್ದ ಉದ್ಯಮಿ ಅಶೋಕ್ ಖೇಣಿ ಒಡೆತನದ ರಾಕ್ ಸ್ಟಾರ್ ತಂಡವು ಈ ಬಾರಿಯ ಕೆಪಿಎಲ್ ನಿಂದ ಹೊರಗುಳಿಯಲಿದೆ. ಈ ಬಾರಿ ಕೆಪಿಎಲ್ ಗೆ ಹೊಸ ತಂಡ 'ಕಲ್ಯಾಣಿ ಬ್ಲಾಸ್ಟರ್ಸ್ ಬೆಂಗಳೂರು' ಹೆಸರಿನ ಹೊಸ ಫ್ರಾಂಚೈಸಿಯು ಕಾಲಿಡಲಿದೆ. ಬೆಂಗಳೂರಿನಲ್ಲಿ ಖಾಸಗಿ ಕಾರು ಕಂಪನಿಯ ಡೀಲರ್ ಶಿಪ್ ಹೊಂದಿರುವ ಕಲ್ಯಾಣಿ ಮೋಟರ್ಸ್ ಸಂಸ್ಥೆ ಇದರ ಮಾಲೀಕತ್ವ ಹೊಂದಿದೆ.

Karnataka Premier League return to Bengaluru, players auction on August 6, 2017

ಈ ಬಾರಿಯ ಕೆಪಿಎಲ್ ಪಂದ್ಯಗಳು ಬೆಂಗಳೂರಿಗೆ ವಾಪಸ್ಸಾಗಿವೆ. ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್ ಏರ್ ಸಿಸ್ಟಂ ವ್ಯವಸ್ಥೆ ಅಳವಡಿಸಬೇಕಿದ್ದರಿಂದಾಗಿ ಕ್ರೀಡಾಂಗಣದ ಮೈದಾನವನ್ನು ಸಂಪೂರ್ಣವಾಗಿ ಅಗೆಯಲಾಗಿತ್ತು. ಹಾಗಾಗಿ, ಕಳೆದ ವರ್ಷದ ಕೆಪಿಎಲ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆದಿರಲಿಲ್ಲ. ಈ ಬಾರಿ, ಇಲ್ಲಿ ಉದ್ಘಾಟನಾ ಪಂದ್ಯ ಸೇರಿದಂತೆ ಕೆಲವಾರು ಪಂದ್ಯಗಳು ನಡೆಯಲಿವೆ.

ದೇವೇಂದ್ರ, ಸರ್ದಾರ್ ಸಿಂಗ್ ಗೆ ಖೇಲ್ ರತ್ನ!

Karnataka Premier League return to Bengaluru, players auction on August 6, 2017

6ರಂದು ಹರಾಜು ಪ್ರಕ್ರಿಯೆ: ಈ ಬಾರಿಯ ಕೆಪಿಎಲ್ ಗಾಗಿ ಆಟಗಾರರ ಹರಾಜು ಪ್ರಕ್ರಿಯೆಯು ಆಗಸ್ಟ್ 6ರಂದು ನಡೆಯಲಿದೆ ಎಂದು ಕೆಎಸ್ ಸಿಎ ತಿಳಿಸಿದೆ. ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿಯೇ ಈ ಹರಾಜು ಪ್ರಕ್ರಿಯೆ ನಡೆಯುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಬೆಂಗಳೂರು, ಹುಬ್ಬಳ್ಳಿ, ಮೈಸೂರಿನಲ್ಲಿ ಪಂದ್ಯಗಳು ನಡೆಯಲಿವೆ. ಕೆಪಿಎಲ್ ಸೇರಿದಂತೆ ಕೆಲವಾರು ಮಹತ್ವದ ಪಂದ್ಯಗಳಿಗೆ ಆತಿಥ್ಯ ವಹಿಸಿದ್ದ ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣವನ್ನು ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಕೆಎಸ್ ಸಿಎ ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Premier League (KPL) will return to Bengaluru this year. This time Chinnaswamy stadium will host inaugural several matches says Karnataka State Cricket Association (KSCA). Tournament will commence in September this year.
Please Wait while comments are loading...