ಸೆಪ್ಟೆಂಬರ್ 16ರಿಂದ ಕೆಪಿಎಲ್ 5ನೇ ಸೀಸನ್ ಶುರು

Posted By:
Subscribe to Oneindia Kannada

ಬೆಂಗಳೂರು, ಜುಲೈ 30: ಐದನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್ ) ಟ್ವೆಂಟಿ20 ಟೂರ್ನಮೆಂಟ್ ಸೆಪ್ಟೆಂಬರ್ 16 ರಿಂದ ಅಕ್ಟೋಬರ್ 01 ರ ತನಕ ನಡೆಯಲಿದೆ.

ಕೆಪಿಎಲ್ ನ ಆಯೋಜಕರಾದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್ ಸಿಎ) ಶುಕ್ರವಾರದಂದು ಪ್ರಕಟಣೆ ಹೊರಡಿಸಿದ್ದು, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಪಂದ್ಯಾವಳಿಗಳು ನಡೆದಿವೆ. [ಕೆಪಿಎಲ್ 2015: ರಾಬಿನ್, ಸಾದಿಕ್, ಕಾರ್ಯಪ್ಪ ಸ್ಟಾರ್ಸ್]

ಹುಬ್ಬಳ್ಳಿಯಲ್ಲಿ ಈ ಬಾರಿ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ. ಸೆಪ್ಟೆಂಬರ್ 22ರಿಂದಲೇ ಮೈಸೂರಿನ ಒಡೆಯರ್ ಮೈದಾನದಲ್ಲಿ ಆರಂಭಿಕ ಹಂತದ ಪಂದ್ಯಗಳು ನಡೆಯಲಿವೆ. [ಹುಬ್ಬಳ್ಳಿ ಟೈಗರ್ಸ್ ಮಣಿಸಿದ ಬಿಜಾಪುರ ಬುಲ್ಸ್ ಚಾಂಪಿಯನ್ಸ್]

ಒಟ್ಟು 8 ತಂಡಗಳು ಟ್ರೋಫಿಗಾಗಿ ಕಾದಾಡಲಿದ್ದು, ಆಟಗಾರರ ಹರಾಜು ಪ್ರಕ್ರಿಯೆ ಆಗಸ್ಟ್ 10ರಂದು ನಡೆಯಲಿದೆ. ಪ್ರತಿ ತಂಡಗಳು ನಾಲ್ಕು ಹಳೆ ಆಟಗಾರರನ್ನು ಉಳಿಸಿಕೊಳ್ಳಬಹುದು ಹಾಗೂ ಪ್ರತಿ ತಂಡದಲ್ಲಿ 18 ಮಂದಿ ಆಟಗಾರರಿರಬಹುದ ಎಂದು ಕೆಎಸ್ ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಹೇಳಿದರು.

ಸ್ಟಾರ್ ಆಟಗಾರರು

ಸ್ಟಾರ್ ಆಟಗಾರರು

ಕೆಎಲ್ ರಾಹುಲ್, ಮಾಯಾಂಕ್ ಅಗರವಾಲ್, ಮನೀಶ್ ಪಾಂಡೆ, ಕರುಣ್ ನಾಯರ್, ಶ್ರೇಯಸ್ ಗೋಪಾಲ್,ಶಿವಿಲ್ ಕೌಶಿಕ್, ಕೆಸಿ ಕಾರ್ಯಪ್ಪ, ಜೆ ಸುಚಿತ್, ಪ್ರವೀಣ್ ದುಬೇ, ಕಿಶೋರ್ ಕಾಮತ್, ಪ್ರಸಿಧ್ ಕೃಷ್ಣರಿಂದ ಡೇವಿಡ್ ಮಥಾಯಿಸ್ ತನಕ ಹಲವರು ಯುವಪ್ರತಿಭೆಗಳು ಪಾಲ್ಗೊಳ್ಳಲಿದ್ದಾರೆ.

ಎಲ್ಲಿ ಪ್ರಸಾರ

ಎಲ್ಲಿ ಪ್ರಸಾರ

ದಕ್ಷಿಣ ಆಫ್ರಿಕಾದ (ಸೂಪರ್ ಸ್ಫೋರ್ಟ್ಸ್ ಟಿವಿ), ಯುಎಸ್ಎ (ವಿಲ್ಲೋ ಟಿವಿ)ಯಲ್ಲೂ ಪ್ರಸಾರವಾಗಲಿದೆ. ಕಾರ್ಬನ್ ಸ್ಮಾರ್ಟ್ ಈ ವರ್ಷವೂ ಐಪಿಎಲ್ ನ ಮುಖ್ಯ ಪ್ರಾಯೋಜಕತ್ವ ವಹಿಸಿಕೊಂಡಿದೆ. ಚಿತ್ರದಲ್ಲಿ : ಬ್ರಿಜೇಶ್ ಪಟೇಲ್

ತಂಡಗಳು

ತಂಡಗಳು

ಬಿಜಾಪುರ ಬುಲ್ಸ್, ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್, ಹುಬ್ಳಿ ಟೈಗರ್ಸ್, ಮಂಗಳೂರು ಯುನೈಟೆಡ್, ಮೈಸೂರು ವಾರಿಯರ್ಸ್, ನಮ್ಮ ಶಿವಮೊಗ್ಗ ಹಾಗೂ ರಾಕ್ ಸ್ಟಾರ್ಸ್.

ಈ ಹಿಂದಿನ ಚಾಂಪಿಯನ್ಸ್

ಈ ಹಿಂದಿನ ಚಾಂಪಿಯನ್ಸ್

2009 : ಪ್ರಾವಿಡೆಂಟ್ ಬೆಂಗಳೂರು (ಗ್ರಾಮೀಣ)
2010 : ಮಂಗಳೂರು ಯುನೈಟೆಡ್
2014 : ಮೈಸೂರು ವಾರಿಯರ್ಸ್
2015 : ಬಿಜಾಪುರ್ ಬುಲ್ಸ್

* 2011 ರಿಂದ 2013ರ ತನಕ ಟೂರ್ನಮೆಂಟ್ ನಡೆಯಲಿಲ್ಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The 5th edition of Karnataka Premier League (KPL) Twenty20 tournament will be played from September 16 to October 1.
Please Wait while comments are loading...