ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುವ ಕ್ರಿಕೆಟರ್ಸ್ ಡಬ್ಬಲ್ ಧಮಾಕ, 403ರನ್ ಜೊತೆಯಾಟ

By Mahesh

ಬೆಂಗಳೂರು, ಜೂ.9: ಕರ್ನಾಟಕದ ಪವನ್ ದೇಶಪಾಂಡೆ ಹಾಗೂ ಅನಿರುದ್ಧ್ ಜೋಶಿ ಅವರು ಡಬ್ಬಲ್ ಸೆಂಚುರಿ ಹೊಡೆದು, 403ರನ್ ಗಳ ದಾಖಲೆ ಜೊತೆಯಾಟ ಸಾಧಿಸಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ ಸಿಎ) ನ ಡಿವಿಷನ್ 1 ಲೀಗ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಇಬ್ಬರ ಪೈಕಿ ಅನಿರುದ್ಧ್ ಜೋಶಿ ಅವರು ಮಾಜಿ ಕ್ರಿಕೆಟರ್ ಸುನಿಲ್ ಜೋಶಿ ಅವರ ಸೋದರನ ಮಗ ಎಂಬುದು ಗಮನಾರ್ಹ.

Karnataka batsmen hit double tons, set partnership record of 403

ವಲ್ಚರ್ಸ್ ಕ್ರಿಕೆಟ್ ಕ್ಲಬ್ ಹಾಗೂ ಸೋಷಿಯಲ್ ಕ್ರಿಕೆಟರ್ಸ್ ನಡುವಿನ 2 ದಿನಗಳ ಪಂದ್ಯದಲ್ಲಿ 5ನೇ ವಿಕೆಟ್ ಗೆ ಈ ಜೋಡಿ 403ರನ್ ಕಲೆ ಹಾಕಿದೆ.

25 ವರ್ಷ ವಯಸ್ಸಿನ ಎಡಗೈ ಬ್ಯಾಟ್ಸ್ ಮನ್ ದೇಶಪಾಂಡೆ ತಂಡದ ನಾಯಕರಾಗಿದ್ದು, ಅಜೇಯ 204 ರನ್ (258 ಎಸೆತ, 3X6, 24X4), 27 ವಯಸ್ಸಿನ ಬಲಗೈ ಬ್ಯಾಟ್ಸ್ ಮನ್ ಜೋಶಿ ಅವರು 212 ನಾಟೌಟ್ (199 ಎಸೆತ, 8X6, 23X4)ಗಳಿಸಿದರು. ಇವರಿಬ್ಬರ ದಾಖಲೆ ಜೊತೆಯಾಟದಿಂಡ 90 ಓವರ್ ಗಳಲ್ಲಿ ವಲ್ಚರ್ಸ್ ಕ್ರಿಕೆಟರ್ಸ್ ತಂಡ 458/5 ಸ್ಕೋರ್ ಮಾಡಿತು. ತಂಡದ ಮೊತ್ತ 18.3 ಓವರ್ ಗಳಲ್ಲಿ 55/4 ಆಗಿದ್ದಾಗ ಇವರಿಬ್ಬರು ಕ್ರೀಸ್ ಗೆ ಬಂದಿದ್ದರು.

ಇಬ್ಬರು ದ್ವಿಶತಕ ಬಾರಿಸಿರುವುದು ಹಾಗೂ 403ರನ್ ಜೊತೆಯಾಟ ಎರಡು ಕೆಎಸ್ ಸಿಎ ಡಿವಿಷನ್ ಕ್ರಿಕೆಟ್ ನಲ್ಲಿ ಹೊಸ ದಾಖಲೆಯಾಗಿದೆ. ಕರ್ನಾಟಕದ ರಣಜಿ ಆಟಗಾರ ತ್ರಿಶತಕ ವೀರ ಕರುಣ್ ನಾಯರ್ ಅವರು ಕೂಡಾ ವಲ್ಚರ್ ಕ್ರಿಕೆಟರ್ಸ್ ಪರ ಆಡಿದ್ದರು. ಆದರೆ, 4 ರನ್ ಗಳಿಸಿ ಔಟಾದರು. ಸ್ಕೋರ್ ಕಾರ್ಡ್ ಹೀಗಿದೆ.

Karnataka batsmen hit double tons

ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದ ಕೆಸಿ ಕಾರಿಯಪ್ಪ ಅವರು ಸೋಷಿಯಲ್ ಕ್ರಿಕೆಟರ್ಸ್ ಪರ ಆಡಿ ಅನಿರುಧ್ ಹಾಗೂ ಪವನ್ ದಾಖಲೆ ಬಾರಿಸುವುದನ್ನು ನೋಡಬೇಕಾಯಿತು. ಕಾರಿಯಪ್ಪ 30 ಓವರ್ ಎಸೆದು 1/130 ನೀಡಿದರು.

ಸಂಕ್ಷಿಪ್ತ ಸ್ಕೋರ್ : ಸೋಷಿಯಲ್ ಕ್ರಿಕೆಟರ್ಸ್ 327/9, 90 ಓವರ್ಸ್, ವಲ್ಚರ್ಸ್ ಕ್ರಿಕೆಟರ್ಸ್ ಕ್ಲಬ್ 458/4, 90 ಓವರ್ಸ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X