ಕೆಪಿಎಲ್ 2016: ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ ತಂಡ ಪ್ರಕಟ

Written By: Ramesh
Subscribe to Oneindia Kannada

ಬೆಂಗಳೂರು, ಸೆ.15 : ಕೆಪಿಎಲ್ ಐದನೇ ಆವೃತ್ತಿಗೆ ಕಿಚ್ಚ ಸುದೀಪ್ ನೇತೃತ್ವದ ರಾಕ್ಸ್ಟಾರ್ ತಂಡವನ್ನು ಪ್ರಕಟಿಸಲಾಗಿದೆ. ಐದನೇ ಆವೃತ್ತಿಯ ಪಂದ್ಯಗಳಲ್ಲಿ ರಾಕ್ಸ್ಟಾರ್ ತಂಡ ಸಿನಿ ತಾರೆಗಳನ್ನು ಸೇರಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಮೆರಗು ನೀಡಲಿದೆ.

ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬಿಜಾಪುರ ಬುಲ್ಸ್ ತಂಡವನ್ನು ರಾಕ್ ಸ್ಟಾರ್ ತಂಡ ಸೆ. 17 ರಂದು ಎದುರಿಸಲಿದೆ. ಟೂರ್ನಿ ಸೆಪ್ಟೆಂಬರ್ 17 ರಿಂದ ಆರ೦ಭವಾಗಲಿದ್ದು, ಅಕ್ಟೋಬರ್ 1 ರ ಬದಲು 2ರ೦ದು ಮುಕ್ತಾಯಗೊಳ್ಳಲಿದೆ. [ಕಾವೇರಿ ಗಲಭೆ: ಕೆಪಿಎಲ್ ಪಂದ್ಯಗಳ ವೇಳಾಪಟ್ಟಿ ಬದಲು]

Kiccha sudeep

ತಂಡದ ಸಹ ಮಾಲೀಕ ರಾಜುಗೌಡ, ಕನ್ನಡ ಸಿನಿ ತಾರೆಗಳಾದ ಪ್ರದೀಪ್ ರಾಜೀವ್, ರಾಹುಲ್, ಮಹೇಶ್, ಧ್ರುವ ಶರ್ಮಾ, ತೆಗಲು ನಟ ಚರಣ್ ತೇಜಾ, ಮಲಯಾಳಂ ತಾರೆ ಮದನ್ ಮೋಹನ್ ತಂಡದಲ್ಲಿದ್ದಾರೆ. [ಕೆಪಿಎಲ್ ತಂಡದ ಪರಿಚಯ: ಚಾಂಪಿಯನ್ ಬಿಜಾಪುರ್ ಬುಲ್ಸ್]

ವಿಕೆಟ್ ಕೀಪರ್ ನಿತೀನ್ ಭಿಲ್ಲೆ, ಬಿ.ಆರ್ ಶರತ್, ವೇಗಿ ಎನ್.ಸಿ ಅಯ್ಯಪ್ಪ ರಾಕ್ ಸ್ಟಾರ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಕಳೆದ ಕೆಪಿಎಲ್ ಆವೃತ್ತಿಯಲ್ಲಿ ಕಿಚ್ಚ ಸುದೀಪ್ ನಾಯಕತ್ವದ ರಾಕ್ ಸ್ಟಾರ್ ತಂಡ ಒಂದೇ ಒಂದು ಪಂದ್ಯ ಗೆಲ್ಲಲು ಸಾಧ್ಯವಾಗಿರಲಿಲ್ಲ.

ಆದರೆ ಸಿನಿಮಾ ಹಾಗೂ ಕ್ರಿಕೆಟ್ ಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿ ಶತಾಗತಯವಾಗಿ ಪ್ರಶಸ್ತಿ ಗೆಲ್ಲಲು ನಾಯಕ ಸುದೀಪ್ ತಂಡಕ್ಕೆ ಹೊಸ ಮುಖಗಳನ್ನು ಕರೆತಂದಿದ್ದಾರೆ. [ಐದನೇ ಕೆಪಿಎಲ್ ಸಮರ ಸಂಪೂರ್ಣ ವೇಳಾಪಟ್ಟಿ]

ರಾಕ್ಸ್ಟಾರ್ ತಂಡ ಇಂತಿದೆ: ಸುದೀಪ್ (ನಾಯಕ), ನಿತೀನ್ ಭಿಲ್ಲೆ, ಬಿ.ಆರ್ ಶರತ್, ಎನ್.ಸಿ ಅಯ್ಯಪ್ಪ, ರಾಜೀವ್, ಧ್ರುವ ಶರ್ಮಾ, ಚರಣ್ ತೇಜಾ, ರಾಜುಗೌಡ, ರಿತೇಶ್ ಭಟ್ಕಳ್ , ದೈವಿಕ್ ವಿಶ್ವನಾಥ್, ಪ್ರದೀಪ್ ಬೊಗಾಡಿ, ಸಂದೀಪ್ ಯಾದವ್, ದನ್ ಮೋಹನ್, ಸಂದೀಪ್ ನಾಯಕ್, ಮಹೇಶ್.ವಿ, ವಿಹಾನ್ ರಾಜೀವ್, ವಿಷ್ಣು ಪ್ರಿಯನ್, ರಾಜಕುಮಾರ್, ರಾಹುಲ್ ಆರ್.ಕೆ, ನವೀನ್ ಬಿ,

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
twenty-two yards in the KPL se, are the Celebrity Rockstars team, led by Karnataka movie-star Kiccha Sudeep.
Please Wait while comments are loading...