ವಿಶ್ವ ಟಿ20: ಕಿವೀಸ್ ತಂಡಕ್ಕೆ ವಿಲಿಯಮ್ಸನ್ ಕ್ಯಾಪ್ಟನ್

Posted By:
Subscribe to Oneindia Kannada

ವೆಲ್ಲಿಂಗ್ಟನ್, ಫೆ.02: ಭಾರತದಲ್ಲಿ ನಡೆಯಲಿರುವ ಐಸಿಸಿ ವಿಶ್ವಟಿ20 ಟೂರ್ನಿಗೆ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಸ್ಪಿನ್ ಪಿಚ್​ಗಳ ಲಾಭ ಪಡೆಯಲು 15 ಮಂದಿಯ ತಂಡದಲ್ಲಿ ಮೂವರು ಸ್ಪಿನ್ನರ್​ಗಳಿಗೆ ಅವಕಾಶ ನೀಡಲಾಗಿದೆ. ಕೇನ್ ವಿಲಿಯಮ್ಸನ್ ನಾಯಕರಾಗಿದ್ದಾರೆ.

ಅನುಭವಿ ಆಲ್ ರೌಂಡರ್ ನಥಾನ್ ಮೆಕ್ಕಲಂ, ಮಿಚೆಲ್ ಸ್ಯಾಂಟ್ನರ್ ಹಾಗೂ ಲೆಗ್ ಸ್ಪಿನ್ನರ್ ಇಶ್ ಸೋಧಿ ತಂಡದಲ್ಲಿರುವ ಮೂವರು ಸ್ಪಿನ್ನರ್​ಗಳಾಗಿದ್ದಾರೆ. ಗ್ರಾಂಟ್ ಎಲಿಯೋಟ್ ಹಾಗೂ ಕಾಲಿನ್ ಮುನ್ರೋ ಕೂಡಾ ಬೌಲಿಂಗ್ ವಿಭಾಗಕ್ಕೆ ನೆರವಾಗಬಲ್ಲರು.

Kane Williamson

ಟ್ರೆಂಟ್ ಬೌಲ್ಟ್, ಟಿಮ್ ಸೌಥಿ, ಆಡಂ ಮಿಲ್ನೆ ಹಾಗೂ ಮಿಚ್ ಮೆಕ್ ಕ್ಲೆನಾಘನ್ ಅಲ್ಲದೆ ಕೋರೆ ಆಂಡರ್ಸನ್ ಅವರು ವೇಗಿಗಳಾಗಿ ಕಣಕ್ಕಿಳಿಯಲಿದ್ದಾರೆ.[ಅಮಾನತಾಗಿರುವ ಸುನಿಲ್ ಗೆ ವಿಂಡೀಸ್ ತಂಡದಲ್ಲಿ ಸ್ಥಾನ!]

ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ ಹಾಗೂ ಅರ್ಹತಾ ತಂಡವಿರುವ ಗುಂಪಿನಲ್ಲಿ ನ್ಯೂಜಿಲೆಂಡ್ ಇದೆ. ಮಾರ್ಚ್ 3ಕ್ಕೆ ದುಬೈಗೆ ತೆರಳಿ ತಯಾರಿ ನಡೆಸಲಿರುವ ನ್ಯೂಜಿಲೆಂಡ್ ತಂಡ ಮೇಲ್ನೋಟಕ್ಕೆ ಸಮರ್ಥವಾಗಿದ್ದರೂ ಗಾಯಾಳು ಸಮಸ್ಯೆಯಿಂದ ಬಳಲುತ್ತಿದೆ. [ಭಾರತ ಪ್ರವಾಸಕ್ಕೆ ಶ್ರೀಲಂಕಾ ತಂಡ ಪ್ರಕಟ, ಮಾಲಿಂಗ ಇಲ್ಲ]

ನ್ಯೂಜಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಕೋರಿ ಆಂಡರ್​ಸನ್, ಟ್ರೆಂಟ್ ಬೌಲ್ಟ್, ಗ್ರಾಂಟ್ ಎಲಿಯಟ್, ಮಾರ್ಟಿನ್ ಗುಪ್ಟಿಲ್, ಆಡಂ ಮಿಲ್ನೆ, ಮಿಚೆಲ್ ಮೆಕ್ಲೀನಘನ್, ಕಾಲಿನ್ ಮುನ್ರೋ, ನಥಾನ್ ಮೆಕ್ಕಲಂ, ಹೆನ್ರಿ ನಿಕೋಲಾಸ್, ಲ್ಯೂಕ್ ರಾಂಚಿ, ಮಿಚೆಲ್ ಸ್ಯಾಂಟ್ನೆರ್, ಇಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್. (ಎಪಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
New Zealand have named untested batsman Henry Nicholls and three spinners in its 15-man squad for next month's World Twenty20 tournament in India.
Please Wait while comments are loading...