ರಾಜಾರೋಷವಾಗಿ ಕ್ರಿಕೆಟ್ ಬೆಟ್ಟಿಂಗ್ ಮಾಡಬಹುದು?

Subscribe to Oneindia Kannada

ನವದೆಹಲಿ, ಜನವರಿ, 05: ಬಿಸಿಸಿಐಗೆ ಆಡಳಿತಾತ್ಮಕ ಸುಧಾರಣೆಗಳನ್ನು ಶಿಫಾರಸು ಮಾಡಿರುವ ನ್ಯಾಯಮೂರ್ತಿ ಆರ್‌. ಎಂ. ಲೋಧಾ ಸಮಿತಿ ಸರ್ವೋಚ್ಚ ನ್ಯಾಯಾಲಯಕ್ಕೆ ವರದಿಯೊಂದನ್ನು ಸಲ್ಲಿಕೆ ಮಾಡಿದೆ. ಆಡಳಿತಾತ್ಮಕ ಬದಲಾವಣೆ, ಬೆಟ್ಟಿಂಗ್ ಕಾನೂನುಬದ್ಧ, ರಾಜ್ಯಕ್ಕೆ ಒಂದು ಕ್ರಿಕೆಟ್ ಮಂಡಳಿ, ಬಿಸಿಸಿಐ ಆಡಳಿತ ಮತ್ತು ಐಪಿಎಲ್ ಆಡಳಿತ ಬೇರೆ ಬೇರೆಯಾಗಿರಬೇಕು ಎಂಬ ಅನೇಕ ಅಂಶಗಳನ್ನು ವರದಿಯಲ್ಲಿ ಹೇಳಿದೆ.

ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಬಗ್ಗೆ ತನಿಖೆ ನಡೆಸಲು ನೇಮಕವಾಗಿದ್ದ ಸಮಿತಿಯೇ ಕ್ರಿಕೆಟ್ ಬೆಟ್ಟಿಂಗ್ ಕಾನೂನುಬದ್ಧ ಮಾಡಬೇಕು ಎಂದು ಹೇಳಿರುವುದು ಮಾತ್ರ ವಿಚಿತ್ರವಾಗಿದೆ. ಸತತ ವರ್ಷಗಳ ಕಾಲ ಮಾಹಿತಿ ಕಲೆಹಾಕಿದ ಸಮಿತಿ ಅಂತಿಮವಾಗಿ ಜನವರಿ 4 ರಂದು ತನ್ನ ಶಿಫಾರಸುಗಳನ್ನು ಸಲ್ಲಿಕೆ ಮಾಡಿದೆ.

ಬಿಸಿಸಿಐನ ಅಧ್ಯಕ್ಷ ಹುದ್ದೆಯಿಂದ ಹಿಡಿದು ಪದಾಧಿಕಾರಿಗಳವರೆಗಿನ ಹುದ್ದೆಗೆ ರಾಜಕಾರಣಿಗಳು ಕಾಲಿಡಬಾರದು. ವೃತ್ತಿಪರ ವ್ಯಕ್ತಿಗಳ ಕೈಯಲ್ಲಿ ಬಿಸಿಸಿಐ ಇರಬೇಕು. ಬಿಸಿಸಿಐ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಅಧಿಕಾರಾವಧಿ, ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಬೇಕಿದೆ ಎಂದು ಸಹ ತಿಳಿಸಿದೆ.[ಐಪಿಎಲ್ ಆಟಕ್ಕೆ ಸಲ್ಲದವರು ಇವರು]

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದ ನಂತರ ಸಲ್ಲಿಕೆ ಮಾಡಿರುವ ಸಮಗ್ರ ವರದಿ ಇದಾಗಿದ್ದು ಅನೇಕ ವಿರೋಧಾಭಾಸಗಳು ಕಂಡುಬಂದಿವೆ. 158 ಪುಟಗಳ ಸಮಗ್ರ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಬಳಿಕ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್‌ಎಂ ಲೋಧಾ, ವರದಿ ಅಂತಿಮಗೊಳಿಸುವ 38 ಸಭೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು. ವರದಿಯ ಶಿಫಾರಸುಗಳನ್ನು ಮುಂದಕ್ಕೆ ನೋಡಿ...

ರಾಜ್ಯಕ್ಕೆ ಒಂದೇ ಸಂಸ್ಥೆ

ರಾಜ್ಯಕ್ಕೆ ಒಂದೇ ಸಂಸ್ಥೆ

ಒಂದು ರಾಜ್ಯಕ್ಕೆ ಒಂದೇ ಕ್ರೀಡಾ ಸಂಸ್ಥೆಯನ್ನು ಮಾಡಿ, ಅದೇ ಬಿಸಿಸಿಐನಲ್ಲಿ ಒಂದು ರಾಜ್ಯವನ್ನು ಪ್ರತಿನಿಧಿಸುವಂತೆ ಮಾಡಬೇಕೆಂದೂ ಹೇಳಲಾಗಿದೆ. ಸದ್ಯ ಬಿಸಿಸಿಐನಲ್ಲಿ 34 ಅಂಗ ಸಂಸ್ಥೆಗಳಿವೆ. ಮಹಾರಾಷ್ಟ್ರ, ಗುಜರಾತ್‌ನಂತಹ ರಾಜ್ಯಗಳು ತಲಾ 3 ಅಂಗಸಂಸ್ಥೆಗಳನ್ನು ಹೊಂದಿವೆ. ಇದರ ಪರಿಣಾಮ ಈ ರಾಜ್ಯಗಳ ಮಾತಿಗೆ ಬಿಸಿಸಿಐನಲ್ಲಿ ಹೆಚ್ಚಿನ ತೂಕವಿರುತ್ತದೆ.

ರಾಜಕಾರಣಿಗಳಿಗಿಲ್ಲ ಪ್ರವೇಶ

ರಾಜಕಾರಣಿಗಳಿಗಿಲ್ಲ ಪ್ರವೇಶ

ರಾಜಕೀಯ ಮುಖಂಡರು ಕ್ರಿಕೆಟ್ ಆಡಳಿತದಲ್ಲಿ ಭಾಗವವಹಿಸಬಾರದು ಎಂದು ಹೇಳಿರುವ ಸಮತಿ ಬಿಸಿಸಿಐ ಅಧ್ಯಕ್ಷರಿಗೆ 3 ವರ್ಷಗಳ 2 ಅವಧಿ, ಪದಾಧಿಕಾರಿಗಳಿಗೆ 3 ವರ್ಷಗಳ 3 ಅವಧಿ ಇರಬೇಕೆಂದು ಸೂಚಿಸಿದೆ.

ಕಾನೂನುಬದ್ಧ ಬೆಟ್ಟಿಂಗ್‌

ಕಾನೂನುಬದ್ಧ ಬೆಟ್ಟಿಂಗ್‌

ಬೆಟ್ಟಿಂಗ್‌ ಭಾರತದ ಕ್ರೀಡೆಯಲ್ಲಿ ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಆದ್ದರಿಂದ ಅದನ್ನು ಕಾನೂನುಬದ್ಧಗೊಳಿಸಿ ಎಂದು ಲೋಧಾ ಸಮಿತಿ ಸಲಹೆ ನೀಡಿರುವುದು ಮಾತ್ರ ವಿಚಿತ್ರ ಎನಿಸಿದೆ. ಆದರೆ ಯಾವ ಬಗೆಯಲ್ಲಿ ಎಂಬ ವಿವರಣೆಯನ್ನು ನೀಡಿಲ್ಲ.

ಬಿಸಿಸಿಐ ಆರ್‌ಟಿಐ ವ್ಯಾಪ್ತಿಗೆ

ಬಿಸಿಸಿಐ ಆರ್‌ಟಿಐ ವ್ಯಾಪ್ತಿಗೆ

ಇದುವರೆಗೆ ಬಿಸಿಸಿಐ ಮಾಹಿತಿ ಹಕ್ಕು ಕಾಯ್ದೆಯಿಂದ ಹೊರಗಿತ್ತು. ತನ್ನ ಸ್ವಾಮ್ಯಕ್ಕೆ ಧಕ್ಕೆಯಾಗಿರುವುದರಿಂದ ಈ ವ್ಯಾಪ್ತಿಗೆ ಸೇರಲು ವಿರೋಧಿಸಿತ್ತು. ಆದರೆ ಬಿಸಿಸಿಐ ಸಾರ್ವಜನಿಕ ಸಂಸ್ಥೆಯಂತಿರುವುದರಿಂದ ಆರ್‌ಟಿಐ ವ್ಯಾಪ್ತಿಗೆ ಬರಬೇಕು ಎಂಬ ವಾದ ಮುಂದಿಟ್ಟಿದೆ.

ಮತಾಧಿಕಾರ ಬೇಡ

ಮತಾಧಿಕಾರ ಬೇಡ

ಈವರೆಗೆ ಬಿಸಿಸಿಐ ಅಧ್ಯಕ್ಷರಿಗೆ 3 ಮತ ಚಲಾಯಿಸಲು ಅವಕಾಶವಿತ್ತು. ತನ್ನ ರಾಜ್ಯ ಸಂಸ್ಥೆಯನ್ನು ಪ್ರತಿನಿಧಿಸುವ ಮೂಲಕ 1 ಮತ, ಸಭೆಯ ಮುಖ್ಯಸ್ಥನಾಗಿ 1 ಮತ, ನಿರ್ಣಾಯಕ ಸಂದರ್ಭದಲ್ಲಿ 1 ಮತ ಚಲಾಯಿಸುವ ಅವಕಾಶವನ್ನು ಬಿಸಿಸಿಐ ಅಧ್ಯಕ್ಷರು ಹೊಂದಿರುತ್ತಾರೆ. ಇನ್ನು ಮುಂದೆ ಸಭೆ ಮುಖ್ಯಸ್ಥನಾಗಿ ಹೊಂದಿರುವ ಮತದಾನದ ಹಕ್ಕನ್ನು ರದ್ದು ಮಾಡಬೇಕು ಎಂದು ಸಮಿತಿ ಹೇಳಿದೆ.

 ಆಟಗಾರರ ಸಂಘ ಅಗತ್ಯ

ಆಟಗಾರರ ಸಂಘ ಅಗತ್ಯ

ಬಿಸಿಸಿಐನಲ್ಲಿ ಕ್ರಿಕೆಟಿಗರಿಗೂ ಹೆಚ್ಚಿನ ಪಾಲುದಾರಿಕೆ ನೀಡುವ ದೃಷ್ಟಿಯಿಂದ ಆಟಗಾರರ ಸಂಘವನ್ನು ಸ್ಥಾಪಿಸಬೇಕೆಂದು ಹೇಳಿದೆ. ಅದರಲ್ಲಿ ಎಲ್ಲ ಪ್ರಥಮದರ್ಜೆ ಕ್ರಿಕೆಟಿಗರು ಸದಸ್ಯರಾಗಿರಬಹುದು. ಈ ಸಂಸ್ಥೆಯ ಅಭಿಪ್ರಾಯಗಳಿಗೆ ಬಿಸಿಸಿಐ ನಿರ್ಧಾರಗಳಲ್ಲಿ ಮನ್ನಣೆಯಿರಬೇಕೆಂದು ಸಮಿತಿ ಹೇಳಿದೆ.

9 ಜನರ ಸಮಿತಿ

9 ಜನರ ಸಮಿತಿ

ಬಿಸಿಸಿಐಗೆ 9 ಮಂದಿಯ ಉನ್ನತ ಸಮಿತಿ ರಚನೆಯಾಗಬೇಕು. ಅದರಲ್ಲಿ ಐವರನ್ನು ಚುನಾಯಿಸಬೇಕು. ಇಬ್ಬರನ್ನು ಆಟಗಾರರ ಸಂಘದಿಂದ ಪ್ರತಿನಿಧಿಗಳಾಗಿ ನೇಮಿಸಬೇಕು. ಒಬ್ಬರು ಮಹಿಳಾ ಪ್ರತಿನಿಧಿಯಿರಬೇಕು ಎಂದು ಲೋಧಾ ಸಮಿತಿ ಹೇಳಿದೆ. ದಿನನಿತ್ಯದ ವ್ಯವಹಾರಗಳನ್ನು ನಡೆಸುವುದಕ್ಕೆ ಒಬ್ಬ ಸಿಇಒ ಇರಬೇಕು. ಆತನಿಗೆ 6 ಮಂದಿ ವ್ಯವಸ್ಥಾಪಕರಿರಬೇಕು ಎಂಬ ಸಲಹೆಯನ್ನು ಮುಂದೆ ಇಟ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Supreme Court-appointed Lodha Committee today recommended sweeping reforms for the controversy-ridden BCCI, suggesting a bar on ministers from occupying positions, putting a cap on the age and tenure of the office-bearers and legalising betting.
Please Wait while comments are loading...