ಇಂಗ್ಲೆಂಡ್ ಟೆಸ್ಟ್ ನಾಯಕರಾಗಿ ಜೋ ರೂಟ್ ಆಯ್ಕೆ

Posted By:
Subscribe to Oneindia Kannada

ಲಂಡನ್, ಫೆಬ್ರವರಿ 13: ಇಂಗ್ಲೆಂಡ್ ಟೆಸ್ಟ್ ನಾಯಕತ್ವವನ್ನು ಅಲಿಸ್ಟರ್ ಕುಕ್ ತ್ಯಜಿಸಿದ ಬಳಿಕ ನಿರೀಕ್ಷೆಯಂತೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಜೋ ರೂಟ್ ಅವರು ನಾಯಕರಾಗಿ ಆಯ್ಕೆಯಾಗಿದ್ದಾರೆ. ಕಳೆದ ವಾರ ಅತ್ಯಂತ ಯಶಸ್ವಿ ನಾಯಕ ಕುಕ್ ಅವರು ನಾಯಕತ್ವ ತೊರೆದಿದ್ದರು.

26 ವರ್ಷ ವಯಸ್ಸಿನ ಯಾರ್ಕ್ ಶೈರ್ ಮೂಲದ ಬ್ಯಾಟ್ಸ್ ಮನ್ ಜೋ ರೂಟ್ ಅವರು ಇಂಗ್ಲೆಂಡಿನ 80ನೇ ಟೆಸ್ಟ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಸ್ಫೋಟಕ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರು ಉಪ ನಾಯಕರಾಗಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ) ಸೋಮವಾರ(ಫೆಬ್ರವರಿ 13) ಪ್ರಕಟಿಸಿದೆ.[ನಾಯಕತ್ವ ತೊರೆದ ಅಲಿಸ್ಟರ್ ಕುಕ್!]

Joe Root named England's new Test captain; Ben Stokes is vice-captain

2012ರ ಡಿಸೆಂಬರ್ ನಲ್ಲಿ ಟೆಸ್ಟ್ ವೃತ್ತಿ ಬದುಕು ಆರಂಭಿಸಿದ ರೂಟ್ ಅವರು 2015ರಲ್ಲಿ ಕುಕ್ ನಾಯಕತ್ವದ ತಂಡಕ್ಕೆ ಉಪ ನಾಯಕರಾಗಿದ್ದರು. 2013ರಲ್ಲಿ ಮೊದಲ ಶತಕ ಬಾರಿಸಿದ ರೂಟ್ ಇಲ್ಲಿ ತನಕ 11 ಶತಕ ಗಳಿಸಿದ್ದಾರೆ. 53 ಟೆಸ್ಟ್ ಪಂದ್ಯಗಳಲ್ಲಿ 52.80ರನ್ ಸರಾಸರಿಯಂತೆ 4,594 ರನ್ ಗಳಿಸಿದ್ದು, ಸದ್ಯ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Middle order batsman Joe Root was today (February 13) appointed as England's new Test captain. He replaced Alastair Cook, who last week, stepped down from the position.
Please Wait while comments are loading...