ಭಾರತ ಮಹಿಳಾ ಕ್ರಿಕೆಟರ್ ಜೂಲನ್ ಗೋಸ್ವಾಮಿಗೆ ನಂ.1 ಪಟ್ಟ!

Written By: Ramesh
Subscribe to Oneindia Kannada

ಬೆಂಗಳೂರು, ಅಕ್ಟೋಬರ್. 28: ಭಾರತ ವನಿತೆಯರ ಕ್ರಿಕೆಟ್ ತಂಡದ ಮಾಜಿ ನಾಯಕಿ ಜೂಲನ್ ಗೋಸ್ವಾಮಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನಿಲ್ಸ್ (ಐಸಿಸಿ) ಬೌಲರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯನ್ನು ಗುರುವಾರ(ಅಕ್ಟೋಬರ್ 27) ಪ್ರಕಟಿಸಲಾಗಿದ್ದು, ವೆಸ್ಟ್ ಇಂಡೀಸ್ ನ ವೇಗದ ಬೌಲರ್ ಸ್ಟೆಫಿನ್ ಟೇಲರ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. 730 ಅಂಕಗಳೊಂದಿಗೆ ಎರಡು ವರ್ಷದ ಬಳಿಕ ನಂ.1 ಐಸಿಸಿ ವೇಗದ ಬೌಲರ್ ಎನಿಸಿಕೊಂಡರು.

Jhulan Goswami becomes No.1 bowler in ICC rankings, dreams top spot for India

ವೆಸ್ಟ್ ಇಂಡೀಸ್ ನ ವೇಗಿ ಸ್ಟೆಫಿನ್ ಟೇಲರ್ ಅವರು 659 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಜಾರಿದರು. ಈ ಸಾಧನೆ ಬಗ್ಗೆ ಪ್ರತಿಕ್ರಿಯಿಸಿರುವ ಬಂಗಾಲದ ವೇಗದ ಬೌಲರ್ 33 ವರ್ಷದ ಜೂಲನ್ ಗೋಸ್ವಾಮಿ ಅವರು ಐಸಿಸಿ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವುದು ತುಂಬ ಸಂತೋಷವಾಗಿದೆ.

ಆದರೆ ಭಾರತ ತಂಡವನ್ನು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿಸುವುದೇ ನನ್ನ ಕನಸು ಹಾಗೂ ಗುರಿ ಕೂಡ. ಇದರಿಂದ ಮುಂಬರುವ ವೆಸ್ಟ್ ಇಂಡೀಸ್ ಮತ್ತು ಏಷ್ಯಕಪ್ ಟೂರ್ನಿಗೆ ಹೆಚ್ಚು ತಯಾರಿ ನಡೆಸಿದ್ದೇನೆ ಎಂದರು.

ಭಾರತ ಮಹಿಳಾ ಕ್ರಿಕೆಟ್ ತಂಡ ಸಧ್ಯ ಅಂತರಾಷ್ಟ್ರೀಯ ಕ್ರಿಕೆಟ್ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಜೂಲನ್ ಗೋಸ್ವಾಮಿ ಅವರು ವರ್ಷದ ಐಸಿಸಿ ಆಟಗಾರ್ತಿ ಎಂಬ ಪ್ರಶಸ್ತಿಗೆ ಪಾತ್ರವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jhulan Goswami, the rookie fast bowler and former captain of Indian women’s cricket team, has once again earned a laurel.
Please Wait while comments are loading...