ಮಿಶ್ರಾ ಬದಲಿಗೆ ಜಯಂತ್ ಎಂಟ್ರಿ ಏಕೆ, ಟ್ವಿಟ್ಟರ್ ನಲ್ಲಿ ಪ್ರಶ್ನೆ

Posted By:
Subscribe to Oneindia Kannada

ವಿಶಾಖಪಟ್ಟಣಂ, ನವೆಂಬರ್ 17: ಹರ್ಯಾಣದ ಯುವ ಆಫ್ ಸ್ಪಿನ್ನರ್ ಜಯಂತ್ ಯಾದವ್ ಅವರು ಗುರುವಾರ ಇಲ್ಲಿ ಟೆಸ್ಟ್ ವೃತ್ತಿ ಬದುಕು ಆರಂಭಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಯಂತ್ ಎಂಟ್ರಿ ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಏನು ಚರ್ಚೆಯಾಗುತ್ತಿದೆ ಇಲ್ಲಿ ಓದಿ...

ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಬದಲಿಗೆ ಜಯಂತ್ ಯಾದವ್ ಹಾಗೂ ಗೌತಮ್ ಗಂಭೀರ್ ಬದಲಿಗೆ ಕೆಎಲ್ ರಾಹುಲ್ ಅವರನ್ನು ಆಡುವ XIಗೆ ಸೇರಿಸಿಕೊಳ್ಳಲಾಗಿದೆ.

ಇದೇ ಮೈದಾನದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ನಡೆದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಜಯಂತ್ ತಮ್ಮ ಚೊಚ್ಚಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. ಈಗ ಟೆಸ್ಟ್ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಾಜಿ ನಾಯಕ ರವಿಶಾಸ್ತ್ರಿ ಅವರು ಜಯಂತ್ ಅವರಿಗೆ ಕ್ಯಾಪ್ ನೀಡಿ ಸ್ವಾಗತಿಸಿದರು.

ಜಯಂತ್ ಇಲ್ಲಿತನಕದ ಸಾಧನೆ

ಜಯಂತ್ ಇಲ್ಲಿತನಕದ ಸಾಧನೆ

ಜಯಂತ್ ಅವರು ಇಲ್ಲಿತನಕ 117 ಪ್ರಥಮ ದರ್ಜೆವಿಕೆಟ್ ಗಳನ್ನು ಪಡೆದಿದ್ದು ಇವರ ಬ್ಯಾಟಿಂಗ್ ರನ್ ಸರಾಸರಿ 28ರಷ್ಟಿದೆ. ಆರ್ ಅಶ್ವಿನ್ ಜತೆಗೆ ಜಯಂತ್ ಯಾದವ್ ಅವರು ಆಫ್ ಸ್ಪಿನ್ನರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಆಟಗಾರರನ್ನು ಸನ್ಮಾನಿಸಿದ ಆಂಧ್ರ ಸಿಎಂ

ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ಹಾಗೂ ಇಂಗ್ಲೆಂಡ್ ಆಟಗಾರರನ್ನು ಸನ್ಮಾನಿಸಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು.

rn

ಇದೇ ಮೈದಾನದಲ್ಲಿ ಚೊಚ್ಚಲ ಪಂದ್ಯವಾಡಿದವರು

ಇದೇ ಮೈದಾನದಲ್ಲಿ ಚೊಚ್ಚಲ ಪಂದ್ಯವಾಡಿದವರು ಯಾರು ಯಾರು? ಟೆಸ್ಟ್ ಹಾಗೂ ಏಕದಿನ ವೃತ್ತಿ ಬದುಕಿಗೆ ಎಂಟ್ರಿ ಕೊಟ್ಟವರು ಮಣೀಂದರ್ ಸಿಂಘ್, ಬಿ ಅರುಣ್, ಎನ್ ಕುಲಕರ್ಣಿ, ಎಂಎಸ್ ಕೆ ಪ್ರಸಾದ್, ಶ್ರೀಶಾಂತ್, ವರುಣ್ ಅರೋನ್, ಭುವನೇಶ್ವರ್ ಕುಮಾರ್, ಜಯಂತ್ ಯಾದವ್

rn

ಮಿಶ್ರಾ ಬದಲಿಗೆ ಜಯಂತ್ ಯಾಕೆ

ಮಿಶ್ರಾ ಬದಲಿಗೆ ಜಯಂತ್ ಯಾಕೆ ಎಂದು ರವಿಶಾಸ್ತ್ರಿಯನ್ನು ಕಳೆದ ಸಂಜೆ ಪ್ರಶ್ನಿಸಿದ್ದೆ. ಆದರೆ, ಈಗ ಆ ಪ್ರಶ್ನೆ ಕೇಳುವುದಿಲ್ಲ.

ರವಿಶಾಸ್ತ್ರಿಯಿಂದ ಟೆಸ್ಟ್ ಕ್ಯಾಪ್ ಪಡೆದ ಜಯಂತ್

ಮಾಜಿ ನಾಯಕ ರವಿಶಾಸ್ತ್ರಿಯಿಂದ ಟೆಸ್ಟ್ ಕ್ಯಾಪ್ ಪಡೆದ ಜಯಂತ್ ಯಾದವ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Young Haryana off-spinner Jayant Yadav on Thursday made his Test debut for India in the second Test match against England at Visakhapatnam
Please Wait while comments are loading...