ನಟಿ ಜಯಲಲಿತಾ ಮೋಹಿಸಿದ್ದ ಕ್ರಿಕೆಟರ್ ಯಾರು?

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 06: ತಮಿಳುನಾಡಿನ ಆರಾಧ್ಯ ದೈವ ಜೆ ಜಯಲಲಿತಾ ಅವರು ನಟಿಯಾಗಿದ್ದ ಕಾಲದಲ್ಲಿ ಮೋಹಿಸಿದ್ದ ಕ್ರಿಕೆಟರ್ ಯಾರು ಎಂಬುದನ್ನು 90ರ ದಶಕದಲ್ಲಿ ಬಹಿರಂಗ ಪಡಿಸಿದ್ದರು. ಸಂದರ್ಶನವೊಂದರಲ್ಲಿ ಜಯಾ ಅವರು ತಮ್ಮ ನೆಚ್ಚಿನ ಕ್ರಿಕೆಟರ್ ಬಗ್ಗೆ ಹೇಳಿಕೊಂಡಿದ್ದರು. ಈ ಸವಿ ಮೆಲುಕು ಇಲ್ಲಿದೆ...

90ರ ದಶಕದಲ್ಲಿ ಜಯಲಲಿತಾ ಅವರು ನಟಿ ಕಮ್ ನಿರೂಪಕಿ ಸಿಮಿ ಗೆರೆವಾಲ್ ಅವರ ಟಾಕ್ ಶೋ ನೀಡಿದ ಸಂದರ್ಶನ ಈಗ ಮತ್ತೊಮ್ಮೆ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ಈ ಸಂದರ್ಶನದಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ನಾರಿ ಕಂಟ್ರಾಕ್ಟರ್ ಮೇಲೆ ಮೋಹವಿತ್ತು ಎಂದು ಹೇಳಿಕೊಂಡಿದ್ದಾರೆ. [ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]

ಬೆಂಗಳೂರಿನ ಬಿಷನ್ ಕಾಟನ್ ಶಾಲೆಯಲ್ಲಿ ಓದುವಾಗ ನಿಮ್ಮ ಕನಸೇನಿತ್ತು? ಯಾರ ಮೇಲೆ 'ಕ್ರಶ್' ಆಗಿತ್ತು ಎಂದು ಸಿಮಿ ಅವ ರು ಕೇಳುತ್ತಾರೆ. ಆಗ ನಸು ನಗುತ್ತಾ ಉತ್ತರಿಸಿದ ಜಯಾ, ಕ್ರಿಕೆಟರ್ ನಾರಿ ಕಂಟ್ರಾಕ್ಟರ್ ಹಾಗೂ ಬಾಲಿವುಡ್ ನಟ ಶಮ್ಮಿ ಕಪೂರ್ ಅವರ ಹೆಸರು ಹೇಳಿದ್ದಾರೆ.[ಜಯಾ ಹಾಗೂ ಕರುಣಾನಿಧಿ ನಡುವಿನ ಗೆಳೆತನ ಹಾಗೂ ಹಗೆತನ]

ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಡಿಸೆಂಬರ್ 05 (ಸೋಮವಾರ) ರಾತ್ರಿ 11.30ರ ವೇಳೆಗೆ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದರು.

ನಾರಿ ಕಂಟ್ರಾಕ್ಟರ್ ನೋಡುವುದೇ ಆನಂದ ಎಂದಿದ್ದ ಜಯಾ

ನಾರಿ ಕಂಟ್ರಾಕ್ಟರ್ ನೋಡುವುದೇ ಆನಂದ ಎಂದಿದ್ದ ಜಯಾ

ನಾರಿ ಕಂಟ್ರಾಕ್ಟರ್ ಅವರು ಟೆಸ್ಟ್ ಪಂದ್ಯದಲ್ಲಿ ಆಡುವುದನ್ನು ನೋಡುವುದೇ ಕಣ್ಣಿಗೆ ಆನಂದ. ಅವಕಾಶ ಸಿಕ್ಕಾಗಲೆಲ್ಲ ಪಂದ್ಯ ನೋಡಲು ಹೋಗುತ್ತಿದ್ದೆ. ಅದೇ ರೀತಿ ಶಮ್ಮಿ ಕಪೂರ್ ಅವರ ಸಿನಿಮಾ ತಪ್ಪದೇ ನೋಡುತ್ತಿದ್ದೆ ಎಂದು ಹೇಳಿದ್ದಾರೆ.

ಸಿಮಿ ಗೆರೆವಾಲ್ ಸಂದರ್ಶನ:

90ರ ದಶಕದಲ್ಲಿ ಜಯಲಲಿತಾ ಅವರು ನಟಿ ಕಮ್ ನಿರೂಪಕಿ ಸಿಮಿ ಗೆರೆವಾಲ್ ಅವರ ಟಾಕ್ ಶೋ ನೀಡಿದ ಸಂದರ್ಶನ ಈಗ ಮತ್ತೊಮ್ಮೆ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೆಯಾಗುತ್ತಿದೆ.

ರಾಜದೀಪ್ ಸರ್ದೇಸಾಯಿ

ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರು ಜಯಾ ಅವರ ಬಗ್ಗೆ ಟ್ವೀಟ್ ಮಾಡಿ, ನಮ್ಮಿಬ್ಬರಿಗೂ ಸಮಾನ ಆಸಕ್ತಿಗಳಿತ್ತು. ರಸ್ಕಿನ್ ಬಾಂಡ್ ಪುಸ್ತಕ, ಕ್ರಿಕೆಟ್ ಅದರಲ್ಲೂ ನಾರಿ ಕಂಟ್ರಾಕ್ಟರ್ ಆಟ ನೋಡುವುದೇ ಆನಂದ ಎಂದರು.

ನಾರಿ ಕಂಟ್ರಾಕ್ಟರ್ ಯಾರು

ಭಾರತ ಪರ 31 ಟೆಸ್ಟ್ ಪಂದ್ಯವಾಡಿರುವ ನಾರಿ ಕಂಟ್ರಾಕ್ಟರ್ ಅವರು 1955ರಲ್ಲಿ ಮೊದಲ ಪಂದ್ಯವಾಡಿದ್ದು, 1962ರಲ್ಲಿ ಕೊನೆ ಪಂದ್ಯವಾಡಿದರು. 82 ವರ್ಷ ವಯಸ್ಸಿನ ಕಂಟ್ರಾಕ್ಟರ್ ಅವರ ಅಂತಾರಾಷ್ಟ್ರೀಯ ವೃತ್ತಿ ಬದುಕು ದುರಂತ ಅಂತ್ಯ ಕಂಡಿತು.

ಸಿನಿಮಾ ರಂಗದಲ್ಲಿ ಶೋಬನ್ ಬಾಬು ಇಷ್ಟ

ಸಿನಿಮಾ ರಂಗದಲ್ಲಿ ಶೋಬನ್ ಬಾಬು ಇಷ್ಟ

ಎಂಜಿಆರ್ ಅವರು ಎಐಎಡಿಎಂಕೆ ಪಕ್ಷ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದ ಕಾಲದಲ್ಲಿ ಯುವ ನಟರ ಜತೆ ನಟಿಸಲು ಆರಂಭಿಸಿದ್ದ ಜಯಾ ಅವರಿಗೆ ತೆಲುಗಿನ ಶೋಬನ್ ಬಾಬು ತುಂಬಾ ಇಷ್ಟವಾಗಿದ್ದರು. ತಮ್ಮ ಮನೆ ಹತ್ತಿರವೇ ಇದ್ದ ಶೋಬನ್ ಬಾಬು ಅವರನ್ನು ದುರ್ಬೀನು ಮೂಲಕ ಕದ್ದು ನೋಡುತ್ತಿದ್ದರಂತೆ. ಇಬ್ಬರಿಗೂ ಮದುವೆ ಕೂಡಾ ಆಗಿತ್ತು ಎಂಬ ಸುದ್ದಿ ಹಬ್ಬಿತ್ತು. ಆದರೆ, ಯಾವುದೂ ದೃಢಪಡಲಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
J Jayalalithaa had a connection with cricket and one player in particular. An interview of hers in the 1990s has gone viral on social media where Jayalalithaa talks about her "great crush" on a cricketer.
Please Wait while comments are loading...