ಐಪಿಎಲ್: ಫೈನಲ್ ಗೆ ಕನ್ನಡಿಗ ಜಾವಗಲ್ ಶ್ರೀನಾಥ್‌ ರೆಫರಿ

Posted By:
Subscribe to Oneindia Kannada

ನವದೆಹಲಿ, ಮೇ 14 : ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಕನ್ನಡಿಗ ಜಾವಗಲ್ ಶ್ರೀನಾಥ್‌ ಅವರು ಇಂಡಿಯನ್‌ ಪ್ರೀಮಿಯರ್ ಲೀಗ್‌ (ಐಪಿಎಲ್) ಹತ್ತನೇ ಆವೃತ್ತಿಯ ಮೊದಲ ಕ್ವಾಲಿಫೈಯರ್ ಮತ್ತು ಫೈನಲ್‌ ಪಂದ್ಯಗಳ ರೆಫರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಮೇ 16ರಿಂದ 21ರ ವರೆಗೆ 'ಪ್ಲೇ ಆಫ್‌' ಪಂದ್ಯ ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ (ಅಂಪೈರ್) ಪಟ್ಟಿಯನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಬಿಡುಗಡೆ ಮಾಡಿದ್ದು ಜಾವಗಲ್ ಎಕ್ಸ್ ಪ್ರೆಸ್ ಶ್ರೀನಾಥ್‌ ಅವರನ್ನು ಮುಂಬೈನಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್ ಹಾಗೂ ಹೈದರಾಬಾದ್ ನಲ್ಲಿ ನಡೆಯಲಿರುವ ಫೈನಲ್ ಪಂದ್ಯಗಳ ರೆಫರಿಯಾನ್ನಗಿ ನೇಮಿಸಿದೆ.[ಐಪಿಎಲ್ ನಿಂದ ಜಾವಗಲ್ ಶ್ರೀನಾಥ್ ಗೆಸಿಕ್ಕ ಸಂಬಳವೆಷ್ಟು?]

Javagal Srinath to be match referee of IPL 2017 final

ಎಸ್‌. ರವಿ, ಸಿ. ಷಂಸುದ್ದೀನ್, ಒ. ನಂದನ್, ಯಶವಂತ್ ಬರ್ದೆ, ಅನಿಲ್‌ ಚೌಧರಿ, ನಿತಿನ್ ಮೆನನ್, ಎ. ನಂದ ಕಿಶೋರ್, ಕೆ.ಎನ್‌. ಅನಂತ ಪದ್ಮ ನಾಭನ್ ಮತ್ತು ನಿಗೆಲ್ ಲಾಂಗ್‌ ಅವರು ಮೈದಾನದ (on-field) ಅಂಪೈರ್ ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BCCI announces match officials for IPL 2017 playoffs. Javagal Srinath will be the match referee for the first qualifier and the final of the 10th Indian Premier League (IPL), which will conclude on May 21.
Please Wait while comments are loading...