ಹಿಂಸಾಚಾರ ಕೈಬಿಡಿ, ಜಾಟ್ ಸಮುದಾಯಕ್ಕೆ ಯುವಿ, ವೀರು ಕರೆ

Posted By:
Subscribe to Oneindia Kannada

ನವದೆಹಲಿ, ಫೆ. 21: ದೇಶದ ಹಲವು ರಾಜ್ಯಗಳ ದೈನಂದಿನ ಬದುಕು ತತ್ತರಿಸುವಂತೆ ಮಾಡಿರುವ ಜಾಟ್ ಸಮುದಾಯದ ಉಗ್ರ ಸ್ವರೂಪದ ಪ್ರತಿಭಟನೆ ಬಗ್ಗೆ ಕ್ರಿಕೆಟರ್ ಗಳಾದ ಯುವರಾಜ್ ಸಿಂಗ್ ಹಾಗೂ ವೀರೇಂದ್ರ ಸೆಹ್ವಾಗ್ ಪ್ರತಿಕ್ರಿಯಿಸಿದ್ದಾರೆ. ಹಿಂಸಾಚಾರ ಕೈಬಿಟ್ಟು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಇಬ್ಬರು ಕ್ರಿಕೆಟರ್ಸ್ ಮನವಿ ಮಾಡಿಕೊಂಡಿದ್ದಾರೆ.

ಹರಿಯಾಣದಲ್ಲಿ ಒಬಿಸಿ ಮೀಸಲಾತಿಗಾಗಿ ಆಗ್ರಹಿಸಿ ಜಾಟ್ ಸಮುದಾಯ ಉಗ್ರ ಸ್ವರೂಪದ ಹೋರಾಟ ನಡೆಸುತ್ತಿದೆ. ಹತ್ತಾರು ಮಂದಿ ಸಾವನ್ನಪ್ಪಿದ್ದು, ಲಕ್ಕವಿಲ್ಲದಷ್ಟು ಜನರಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ತೊಂದರೆಯಾಗಿದೆ. ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ನೀರು ಪೂರೈಕೆ ಇಲ್ಲದೆ ದೆಹಲಿಯ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಶಾಂತಿ ಮಾತುಕತೆಗೆ ಜಾಟ್ ಸಮುದಾಯದ ನಾಯಕರು ಮುಂದಾಗದಿರುವುದು ಆತಂಕಕ್ಕೆ ಕಾರಣವಾಗಿದೆ. [ಜಾಟ್ ಹಿಂಸಾಚಾರ ಬಿಸಿ, ಭಾರತದ ರಾಜಧಾನಿಯಲ್ಲಿ ನೀರಿಗೆ ಬರ!]

ಹಿಂಸಾತ್ಮಕ ಹೋರಾಟ ತೊರೆದು ಶಾಂತಿ ಮತ್ತು ಅಹಿಂಸೆಯಿಂದ ಸಂವಿಧಾನಬದ್ಧವಾಗಿ ಬೇಡಿಕೆ ಪೂರೈಕೆಗೆ ಶ್ರಮಿಸೋಣ ಎಂದು ವೀರೇಂದ್ರ್ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. ನಮ್ಮ ಸಮುದಾಯದವರು ಉದ್ಧಾರಕರಾಗಬೇಕೆ ಹೊರತು ವಿಧ್ವಂಸಕರಾಗಬಾರದು ಎಂದು ಜಾಟ್ ಸಮುದಾಯಕ್ಕೆ ಅವರು ವಿನಂತಿ ಮಾಡಿದ್ದಾರೆ.

ಹರಿಯಾಣದಲ್ಲಿ ಹಿಂಸೆ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ನಿವಾಸದಲ್ಲಿ ತುರ್ತು ಸಭೆ ನಡೆಸಲಾಯಿತು. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಗೃಹ ಖಾತೆಯ ಸಹಾಯಕ ಸಚಿವ ಕಿರಣ್ ರಿಜಿಜು, ವಿತ್ತ ಸಚಿವ ಅರುಣ್ ಜೇಟ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಯುವರಾಜ್ ಸಿಂಗ್ ಹಾಗೂ ವೀರೇಂದ್ರ ಸೆಹ್ವಾಗ್ ಮಾಡಿಕೊಂಡ ಮನವಿ ಮುಂದಿದೆ ಓದಿ...

ಪ್ರತಿಭಟನೆ ನಿಲ್ಲಿಸಿ ಎಂದು ಕರೆ ನೀಡಿದ ಕ್ರಿಕೆಟರ್ಸ್

ಪ್ರತಿಭಟನೆ ನಿಲ್ಲಿಸಿ ಎಂದು ಕರೆ ನೀಡಿದ ಕ್ರಿಕೆಟರ್ಸ್

ಒಬಿಸಿ ವರ್ಗದಡಿ ಪರಿಗಣಿಸಿ ಮೀಸಲಾತಿ ನೀಡಬೇಕು ಎಂಬ ಜಾಟ್ ಸಮುದಾಯದವರ ಬೇಡಿಕೆಯನ್ನು ಒಪ್ಪಲಾಗಿದೆ ಎಂದು ಹರಿಯಾಣ ಸರ್ಕಾರ ಘೊಷಿಸಿದೆ. ಮನವಿಗೆ ಸ್ಪಂದಿಸಲಾಗುವುದು. ಪ್ರತಿಭಟನೆ ನಿಲ್ಲಿಸಿ ಎಂದು ಸಿಎಂ ಮನೋಹರ್ ಲಾಲ್ ಖಟ್ಟರ್ ಕೂಡಾ ಪ್ರತಿಭಟನಾನಿರತರಲ್ಲಿ ಮನವಿ ಮಾಡಿದ್ದಾರೆ. ಮುಂದಿನ ಅಸೆಂಬ್ಲಿಯಲ್ಲಿ ಈ ಬಗ್ಗೆ ವಿಧೇಯಕ ಮಂಡನೆಯಾಗಲಿದೆ. ಹಿಂಸಾಚಾರದಿಂದ ದೂರ ಉಳಿಯುವಂತೆ ತಮ್ಮ ಸಮುದಾಯದವರಿಗೆ ಕ್ರಿಕೆಟರ್ಸ್ ಮನವಿ ಮಾಡಿಕೊಂಡಿದ್ದಾರೆ.

 ಶಾಂತಿಯುತವಾಗಿ ಹೋರಾಟ ಮಾಡಿ

ಶಾಂತಿಯುತವಾಗಿ ಹೋರಾಟ ಮಾಡಿ

ದೇಶದ ಎಲ್ಲಾ ವಿಭಾಗಗಳಲ್ಲಿ ಜಾಟ್ ಪಂಗಡ ಸೇವೆ ಸಲ್ಲಿಸುತ್ತಿದ್ದು ಶಾಂತಿಯುತವಾಗಿ ಹೋರಾಟ ಮಾಡಿ. ಪರಿಸ್ಥಿತಿ ಬಿಗಡಾಯಿಸಿರುವ ರೋಹ್ಟಕ್, ಜಿಂದ್, ಭಿವಾನಿ, ಝಾಜರ್ ಮತ್ತು ಹಿಸಾರ್ ಪ್ರದೇಶಗಳಲ್ಲಿ ಅಸ್ತವ್ಯಸ್ಥಗೊಂಡಿರುವ ಜನ ಜೀವನ ಸಹಜ ಸ್ಥಿತಿಗೆ ತರುವಂತೆ ಶ್ರಮಿಸಿ ಎಂದು ಕೋರಿದ್ದಾರೆ.

ಸೋದರರೇ ದೇಶಕ್ಕಾಗಿ ದುಡಿಯೋಣ

ಸೋದರರೇ ದೇಶಕ್ಕಾಗಿ ದುಡಿಯೋಣ, ದೇಶಕ್ಕೆ ನಮ್ಮ ಸಮುದಾಯ ಯೋಧರನ್ನು ಕ್ರಿಕೆಟರ್ಸ್ ಗಳನ್ನು ನೀಡಿದೆ. ಸಮಸ್ಯೆಯನ್ನು ಮಾತಿನ ಮೂಲಕ ಬಗೆಹರಿಸಿಕೊಳ್ಳಬಹುದು ಎಂದ ಸೆಹ್ವಾಗ್.

ನಾವು ರಕ್ಷಕರು, ಹಿಂಸಕರಲ್ಲ ಎಂದ ಯುವಿ

ಸಂವಿಧಾನಾತ್ಮಕ ರೀತಿಯಲ್ಲಿ ಸಮಸ್ಯೆಗೆ ಪರಿಹರಿಸಿಕೊಳ್ಳಬಹುದು. ನಾವು ರಕ್ಷಕರು, ಹಿಂಸಕರಲ್ಲ ಎಂದ ಯುವರಾಜ್ ಸಿಂಗ್.

ನಮ್ಮ ಕೋಪ, ಶಕ್ತಿ ಉತ್ತಮ ಹೋರಾಟಕ್ಕಿರಲಿ

ನಮ್ಮ ಕೋಪ, ಶಕ್ತಿ ಉತ್ತಮ ಹೋರಾಟಕ್ಕೆ ಮೀಸಲಾಗಿರಲಿ. ಮೀಸಲಾತಿ ಬಗ್ಗೆ ಸರ್ಕಾರದೊಡನೆ ಮಾತನಾಡುವ ಬೇರೆ ವಿಧಾನಗಳಿವೆ.

ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ

ಹರ್ಯಾಣ, ದೆಹಲಿ ಭಾಗದ ಸುಮಾರು 1000 ರೈಲುಗಳ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ವೈಷ್ಣೋದೇವಿ ಯಾತ್ರಾರ್ಥಿಗಳಿಗೂ ಪ್ರತಿಭಟನೆ ಬಿಸಿ ತಟ್ಟಿದೆ.

ಎಕ್ಸ್ ಪ್ರೆಸ್ ವೇ, ಹೆದ್ದಾರಿ ಎಲ್ಲವೂ ಬಂದ್

ದೆಹಲಿ -ಲಕ್ನೋ ಎಕ್ಸ್ ಪ್ರೆಸ್ ವೇ, ರಾಷ್ಟ್ರೀಯ ಹೆದ್ದಾರಿ 8 ಎಲ್ಲವನ್ನು ಪ್ರತಿಭಟನಾಕಾರರು ಬಂದ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India cricketer Yuvraj Singh and former Indian cricketer Virender Sehwag on Sunday appealed to protestors, who have been rampaging in Haryana demanding reservation for the Jat community, to shun violence.
Please Wait while comments are loading...