ಟಿ20ಯಲ್ಲಿ ಹೊಸ ದಾಖಲೆ ಬರೆದ ಭಾರತದ ವೇಗಿ ಜಸ್ ಪ್ರೀತ್ ಬೂಮ್ರಾ

By: ಕ್ರೀಡಾ ಡೆಸ್ಕ್
Subscribe to Oneindia Kannada

ಮುಂಬೈ, ಆಗಸ್ಟ್ 31: ಅಮೆರಿಕದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವೇಗದ ಬೌಲರ್ ಜಸ್ ಪ್ರೀತ್ ಬೂಮ್ರಾ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಮಾದರಿಯಲ್ಲಿ ಒಂದೇ ವರ್ಷದಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸಿದ ಆಟಗಾರ ಎಂಬ ದಾಖಲೆ ಬೂಮ್ರಾ ಹೆಸರಿಗೆ ಸೇರ್ಪಡೆಯಾಗಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 26 ರನ್ ನೀಡಿ 2 ವಿಕೆಟ್ ಪಡೆಯುವ ಮೂಲಕ ಬೂಮ್ರಾ ಈ ಸಾಧನೆ ಮಾಡಿದರು.

Jasprit Bumrah Breaks Nannes' T20I Record for Wickets in a Calendar Year

ಗುಜರಾತ್ ಮೂಲದ ಬಲಗೈ ವೇಗಿ ಇದೇ ವರ್ಷ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯಕ್ಕೆ ಪಾದಾರ್ಪಣೆ ಮಾಡಿರುವ ಬೂಮ್ರಾ 2016ರಲ್ಲಿ ಒಟ್ಟು 21 ಪಂದ್ಯಗಳಲ್ಲಿ 28 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾದ ಡರ್ಕ್ ನ್ಯಾನ್ಸ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಬೂಮ್ರಾ ಮುರಿದಿದ್ದಾರೆ.

ಆಸ್ಟ್ರೇಲಿಯದ ವೇಗಿ ಡರ್ಕ್ನ್ಯಾನ್ಸ್ 2010ರಲ್ಲಿ 14 ಪಂದ್ಯಗಳನ್ನಾಡಿ ಒಂದೇ ವರ್ಷದಲ್ಲಿ 27 ವಿಕೆಟ್ ಪಡೆದ ಆಟಗಾರ ಎಂಬ ದಾಖಲೆ ಮಾಡಿದ್ದರು. ಆದರೆ, ಈಗ ಭಾರತದ ವೇಗಿ ಬೂಮ್ರಾ ಒಂದೇ ವರ್ಷದಲ್ಲಿ (2016) 28 ವಿಕೆಟ್ ಪಡೆಯುವ ಮೂಲಕ ನಾನ್ನೆಸ್ ಅವರನ್ನು ಹಿಂದಿಕ್ಕಿದ್ದಾರೆ. ಬೂಮ್ರಾ ಪಾದಾರ್ಪಣೆ ಮಾಡಿದ ವರ್ಷವೇ ಈ ದಾಖಲೆ ನಿರ್ಮಿಸಿರುವುದು ವಿಶೇಷವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Jasprit Bumrah now has 28 wickets for India in 21 T20Is in 2016 and he went past former Australia quick Dirk Nannes' record of taking highest number of wickets in the shortest format of the game in a calendar year.
Please Wait while comments are loading...