ಟೆಸ್ಟ್‌ ಶ್ರೇಯಾಂಕ: ನಂ.1ಸ್ಥಾನದಲ್ಲಿ ಜಡೇಜ. 2ನೇ ಸ್ಥಾನಕ್ಕೇರಿದ ಅಶ್ವಿನ್

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 01 : ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್ ಬೌಲಿಂಗ್ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಂಗಳವಾರ ಬಿಡುಗಡೆ ಮಾಡಿದ್ದು, ಟೀಂ ಇಂಡಿಯಾದ ಆಲ್‌ ರೌಂಡರ್ ರವೀಂದ್ರ ಜಡೇಜ ನಂಬರ್‌ ಒನ್ ಸ್ಥಾನಕ್ಕೆ ಜಿಗಿದಿದ್ದಾರೆ.

ಲಿಲ್ಲಿ ದಾಖಲೆ ಮುರಿದ ರವಿಚಂದ್ರನ್ ಅಶ್ವಿನ್

ಭಾರತದ ಮತ್ತೊಬ್ಬ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್ ಅವರು ಶ್ರೀಲಂಕಾದ ಸ್ಪಿನ್ನರ್ ರಂಗನಾ ಹೆರತ್ ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

Jadeja top, R Ashwin leapfrogs Herath to second spot in ICC Test rankings

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 190 ರನ್ ಗಳ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ 39ನೇ ಸ್ಥಾನದಿಂದ 21ನೇ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದ್ದಾರೆ.

ICC test ranking Jadeja and Ashwin in top two positions | Oneindia Kannada

ಭಾರತ ವಿರುದ್ಧ ಮೊದಲ ಟೆಸ್ಟ್ ನಲ್ಲಿ 80 ರನ್ ಗಳಿಸಿದ ಶ್ರೀಲಂಕಾದ ಮ್ಯಾಥ್ಯೂಸ್ 2 ಸ್ಥಾನ ಏರಿಕೆ ಕಂಡಿದ್ದು, 17ನೇ ಸ್ಥಾನದಲ್ಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Gain for Indian players
English summary
The thumping victory Virat Kohli and his band scored over Sri Lanka in the opening Test at Galle helped several Indian players gain vital points and rise in the latest ICC Test rankings releasde on Tuesday (August 1). Off-spinner Ravichandran Ashwin has leapfrogged Sri Lanka's Rangana Herath to wrest back the second position among bowlers.
Please Wait while comments are loading...