ಸಚಿನ್ ಕುರಿತ ಚಿತ್ರದ ಟೀಸರ್ ಗೆ ಕಾದಿದ್ದೇನೆ: ಕೊಹ್ಲಿ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮುಂಬೈ, ಏಪ್ರಿಲ್ 14: ಕ್ರಿಕೆಟ್ ದಿಗ್ಗಜ ಭಾರತ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಆತ್ಮಕಥೆಯ ಚಿತ್ರ "ಸಚಿನ್ ಎ ಬಿಲಿಯನ್ ಡ್ರೀಮ್ಸ್" ಗುರುವಾರ ಏಪ್ರಿಲ್ 14 ರಂದು ಟೀಸರ್ ಬಿಡುಗಡೆಗೊಳ್ಳಲಿದ್ದು, ಈ ಚಿತ್ರದ ಎರಡನೇ ಪೋಸ್ಟರ್ ನ್ನು ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಶೇರ್ ಮಾಡಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

"55 ಡೇಸ್ ದಿ ಟ್ರೈನಿಂಗ್ ಒನ್ ಪೇರ್ ಆಫ್ ಟ್ರಸರ್ಸ್ ದಿ ಸಚಿನ್ ಸ್ಟೋರಿ" ಆಧಾರಿತ ಸಚಿನ್ ಚತ್ರದ ಮೊದಲ ಪೋಸ್ಟರ್ ನ್ನು ಹಲವು ಕ್ರಿಕೆಟ್ ಆಟಗಾರರು ಹಾಗೂ ಫಿಲ್ಮ್ ಸ್ಟಾರ್ಸ್ ಗಳು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.

It's time to relive our legend, one and only Sachin: Virat Kohli on Tendulkar documentary

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಆತ್ಮಕಥೆಯ ಚಿತ್ರದ ಟೀಸರ್ ನ್ನು ನಾಳೆ 1 ಗಂಟೆಗೆ ನೋಡಿ ಯಾವುದೇ ಕಾರಣಕ್ಕು ಮರೆಯದರಿ ಎಂದು ವಿರಾಟ್ ಟ್ವಿಟ್ ಮಾಡಿದ್ದಾರೆ. ಇನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರೇ ತಮ್ಮದೇ ಚಿತ್ರದ ಪೋಸ್ಟರ್ ನ್ನು ಏಪ್ರಿಲ್ 11 ರಂದು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದರು.

It's time to relive our legend, one and only Sachin: Virat Kohli on Tendulkar documentary

ಸುಮಾರು 30 ತಿಂಗಳು ಕಾಲ 5 ದೇಶಗಳಲ್ಲಿ ಚಿತ್ರೀಕರಣಗೊಂಡಿರುವ ಸಚಿನ್ ಎ ಬಿಲಿಯನ್ ಡ್ರೀಮ್ಸ್ ಚಿತ್ರಕ್ಕೆ ಜೇಮ್ಸ್ ಇರಸ್ಕಿನ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. [ಸಚಿನ್ ತೆಂಡೂಲ್ಕರ್ ಫ್ಯಾನ್ಸ್ಗಳಿಂದ ಪ್ರತಿಕ್ರಿಯೆ]


ರವಿ ಭಾಗ್ಚಂದಕ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಚಿನ್ ಅವರ ಕುರಿತಾದ ಚಿತ್ರದ ಟೀಸರ್ ಇಂದು ಗುರುವಾರ ಏಪ್ರಿಲ್ 14 ರಂದು ಬಿಡುಗಡೆಗೊಳ್ಳಲಿದ್ದು. ಈ ಚಿತ್ರದ ಬಿಡುಗಡೆಗಾಗಿ ಇಡೀ ವಿಶ್ವವೇ ಎದುರು ನೋಡುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A day before the teaser release of documentary on India's cricket legend Sachin Tendulkar, Team India's Test skipper, Virat Kohli, on Wednesday shared the second poster of 'Sachin A Billion Dreams'
Please Wait while comments are loading...