ವಾರಣಾಸಿಯಲ್ಲಿ ವೇಗಿ ಇಶಾಂತ್ ಶರ್ಮ ಮದುವೆ!

Posted By:
Subscribe to Oneindia Kannada

ವಾರಣಾಸಿ, ನವೆಂಬರ್ 03: ಟೀಂ ಇಂಡಿಯಾದ ವೇಗಿ ಇಶಾಂತ್ ಶರ್ಮ ಅವರ ಮದುವೆ ದಿನಾಂಕ, ಸ್ಥಳ ನಿಗದಿಯಾಗಿದೆ. ಕಳೆದ ಜೂನ್ ತಿಂಗಳಿನಲ್ಲಿ ಉಂಗುರ ಬದಲಾಯಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದ ಇಶಾಂತ್ ಅವರು ವಾರಣಾಸಿಯ ನಿವಾಸಿ ಪ್ರತಿಮಾ ಸಿಂಗ್ ರನ್ನು ಡಿಸೆಂಬರ್ ನಲ್ಲಿ ಮದುವೆಯಾಗಲಿದ್ದಾರೆ.

ಇಶಾಂತ್ ಶರ್ಮ ಹಾಗೂ ಪ್ರತಿಮಾ ಸಿಂಗ್ ಅವರ ಮದುವೆ ವಾರಣಾಸಿಯಲ್ಲಿ ಡಿಸೆಂಬರ್ 9ರಂದು ನಡೆಯಲಿದೆ. 27 ವರ್ಷದ ಇಶಾಂತ್ ಶರ್ಮ ವೆಸ್ಟ್ ಇಂಡೀಸ್ ಪ್ರವಾಸದ ಟೆಸ್ಟ್ ಸರಣಿ ಬಳಿಕ ಗಾಯಗೊಂಡಿದ್ದರು. ಬುಧವಾರದಂದು ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದರು.

Ishant Sharma to Marry Pratima Singh on December 9 Varanasi

ಮದುವೆ ದಿನಾಂಕದ ಬಗ್ಗೆ ಪ್ರತಿಮಾ ಸಿಂಗ್ ಅವರ ತಾಯಿ ಊರ್ಮಿಳಾ ಸಿಂಗ್ ಅವರು ಮಾಹಿತಿ ನೀಡಿ, ಮಂಗಳವಾರದಂದು ಇಶಾಂತ್ ಶರ್ಮ ಹಾಗೂ ಅವರ ಕುಟುಂಬದೊಡನೆ ನಾವು ಗಂಗಾ ಅರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆವು. ಇದಾದ ಬಳಿಕ ಶುಭ ಮುಹೂರ್ತ ನಿಶ್ಚಿಯಿಸಲಾಯಿತು ಎಂದಿದ್ದಾರೆ.ದೆಹಲಿ ಹಾಗೂ ವಾರಣಾಸಿಯಲ್ಲಿ ಕೆಲವು ಸಂಪ್ರದಾಯಗಳನ್ನು ನೆರವೇರಿಸಲಾಗುವುದು

ಭಾರತದ ಬಾಸ್ಕೆಟ್ ಬಾಲ್ ತಾರೆ ವಾರಣಾಸಿಯ ಶಿವ್ ಪುರದ ನಿವಾಸಿ ಪ್ರತಿಮಾ ಸಿಂಗ್ ಅವರದ್ದು ದೊಡ್ಡ ಕುಟುಂಬ ಐವರು ಸೋದರಿಯರ ಪೈಕಿ ಈಕೆಯೇ ಕಿರಿಯವಳು, ಅಥ್ಲೀಟ್ ಗಳ ಕುಟುಂಬದಲ್ಲಿ ಬೆಳೆದ ಪ್ರತಿಮಾ ಅವರು ಭಾರತ ತಂಡವನ್ನು ಬಾಸ್ಕೆಟ್ ಬಾಲ್ ಆಟದಲ್ಲಿ ಪ್ರತಿನಿಧಿಸಿದ್ದಾರೆ.

ಪ್ರತಿಮಾ ಅವರ ಸೋದರಿಯರ ಪೈಕಿ ಪ್ರಶಾಂತಿ, ದಿವ್ಯಾ ಹಾಗೂ ಆಕಾಂಕ್ಷ ಕೂಡಾ ಬಾಸ್ಕೆಟ್​ಬಾಲ್ ಆಟಗಾರ್ತಿಯರು, ಮತ್ತೊಬ್ಬರು ಪ್ರಿಯಾಂಕಾ ಬಾಸ್ಕೆಟ್​ಬಾಲ್ (ಎನ್ ಐಎಚ್) ಕೋಚ್. 2006ರಲ್ಲಿ ಟೀಂ ಇಂಡಿಯಾ ಜ್ಯೂನಿಯರ್ ತಂಡಕ್ಕೆ ಆಯ್ಕೆಯಾಗಿದ್ದ ಪ್ರತಿಮಾ ಅವರು 2008ರಲ್ಲಿ ತಂಡದ ನಾಯಕಿಯಾದರು. 2010ರಲ್ಲಿ 'ಸಿಂಗ್ ಸಿಸ್ಟರ್ಸ್' ಏಷ್ಯನ್ ಗೇಮ್ಸ್​ನಲ್ಲೂ ಆಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Team India player Ishant Sharma to marry Pratima Singh on december 9 at Varanasi. Ishant Sharma got engaged on Sunday (June 19)
Please Wait while comments are loading...