ಇಶಾಂತ್ ಗೆ ಚಿಕೂನ್ ಗುನ್ಯ, ಮೊದಲ ಟೆಸ್ಟ್ ನಿಂದ ಔಟ್!

Written By: Ramesh
Subscribe to Oneindia Kannada

ಕಾನ್ಪುರ, ಸೆ. 21 : ಟೀಂ ಇಂಡಿಯಾದ ವೇಗದ ಬೌಲರ್‌ ಇಶಾಂತ್ ಶರ್ಮಾ ಅವರು ಚಿಕೂನ್ ಗುನ್ಯದಿಂದ ಬಳಲುತ್ತಿದ್ದಾರೆ.ಇದರಿಂದ ನ್ಯೂಜಿಲೆಂಡ್ ವಿರುದ್ಧ ಸೆ.22 ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್‌ ಕ್ರಿಕೆಟ್‌ ಪಂದ್ಯದಿಂದ ಹೊರ ಉಳಿಯಲಿದ್ದಾರೆ.

ಇಶಾಂತ್ ಶರ್ಮಾ ಅವರು ಚಿಕೂನ್ ಗುನ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆಎಂದು ಭಾರತ ಕ್ರಿಕೆಟ್‌ ತಂಡದ ಕೋಚ್ ಕನ್ನಡಿಗ ಅನಿಲ್‌ ಕುಂಬ್ಳೆ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಖಚಿತಪಡಿಸಿದ್ದಾರೆ.

Ishant Sharma

ಆದ್ದರಿಂದ ಸೆ.22 ರಿಂದ ಗ್ರೀನ್ ಪಾರ್ಕ್ ಕಾನ್ಪುರದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಆಡುತ್ತಿಲ್ಲ. ಅವರ ಬದಲು ಬೇರೆ ಆಟಗಾರನನ್ನು ಆಯ್ಕೆ ಮಾಡುವಂತೆ ಬಿಸಿಸಿಐಯನ್ನು ಕೇಳಿಲ್ಲ, ಇರುವ ಆಟಗಾರರಲ್ಲಿಯೇ ಅಂತಿಮ ಹನ್ನೊಂದರ ತಂಡವನ್ನು ಆಯ್ಕೆ ಮಾಡಲಾಗುವುದು ಎಂದು ಕುಂಬ್ಳೆ ಹೇಳಿದರು.

28 ವರ್ಷದ ಬಲಗೈ ವೇಗಿ ಇಶಾಂತ್ 72 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು ಒಟ್ಟು 209 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ 4 ವೇಗಿಗಳನ್ನು ಆಯ್ಕೆ ಮಾಡಲಾಗಿತ್ತು.

ಆದರೆ ಇಶಾಂತ್ ಮೊದಲ ಪಂದ್ಯದಿಂದ ಹೊರ ಉಳಿಯುವುದರಿಂದ ಇನ್ನುಳಿದ ವೇಗಿಗಳಾದ ಮೊಹಮ್ಮದ್ ಶಮಿ, ಉಮೇಶ್ ಯಾದವ್, ಮತ್ತು ಭುವನೇಶ್ವರ ಕುಮಾರ್‌ ಮೇಲೆ ಹೆಚ್ಚು ಜವಾಬ್ದಾರಿಯಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian fast bowler Ishant Sharma was today (September 20) ruled out of the 1st Test against New Zealand, which starts here Thursday (September 22). The paceman is recovering from chikungunya.
Please Wait while comments are loading...