ಬಾಸ್ಕೆಟ್ ಬಾಲ್ ಸ್ಟಾರ್ ಜತೆ ವೇಗಿ ಇಶಾಂತ್ ನಿಶ್ಚಿತಾರ್ಥ

Posted By:
Subscribe to Oneindia Kannada

ನವದೆಹಲಿ, ಜೂನ್ 20: ಟೀಂ ಇಂಡಿಯಾದ ಮತ್ತೊಬ್ಬ ಕ್ರಿಕೆಟರ್ ಮದುವೆ ಹಸೆಮಣೆ ಏರಲು ಸಿದ್ಧರಾಗಿದ್ದಾರೆ. ಆಲ್ ರೌಂಡರ್ ಯುವರಾಜ್ ಸಿಂಗ್ ನಿಶ್ಚಿತಾರ್ಥದ ಸುದ್ದಿ ನಂತರ ಈಗ ಟೀಂ ಇಂಡಿಯಾದ ವೇಗಿ ಇಶಾಂತ್ ಶರ್ಮ ಅವರು ಭಾನುವಾರ ಉಂಗುರ ಬದಲಾಯಿಸಿಕೊಂಡಿದ್ದಾರೆ.[ಅದೃಷ್ಟದ ಹುಡುಗಿ ಸೋಲಂಕಿ ವರಿಸಿದ ರವೀಂದ್ರ ಜಡೇಜ]

ಭಾರತದ ಬಾಸ್ಕೆಟ್​ಬಾಲ್ ತಂಡದ ಪರ ಆಡಿದ್ದ ಸ್ಟಾರ್ ಆಟಗಾರ್ತಿ ಪ್ರತಿಮಾ ಸಿಂಗ್ಅವರು ಟೀಂ ಇಂಡಿಯಾದ ವೇಗಿ ಇಶಾಂತ್ ಅವರ ಮದುವೆ ನಿಶ್ಚಿತಾರ್ಥ ಸಮಾರಂಭ ದೆಹಲಿಯ ಉಪ್ಪಲ್ ಆರ್ಕಿಡ್ ನಲ್ಲಿ ಭಾನುವಾರ ನಡೆದಿದೆ. ಈ ಸುದ್ದಿಯನ್ನು ಕ್ರಿಕೆಟರ್ ರೋಹಿತ್ ಶರ್ಮ ಅವರು ಟ್ವೀಟ್ ಮಾಡುವ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ.[ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾಗೆ ಚೆಂದದ ಸೀಮಂತ]

See pic: Pacer Ishant Sharma gets engaged to India's basketball star Pratima Singh

ವಾರಣಾಸಿಯ ಶಿವ್ ಪುರದ ನಿವಾಸಿ ಪ್ರತಿಮಾ ಸಿಂಗ್ ಅವರದ್ದು ದೊಡ್ಡ ಕುಟುಂಬ ಐವರು ಸೋದರಿಯರ ಪೈಕಿ ಈಕೆಯೇ ಕಿರಿಯವಳು, ಅಥ್ಲೀಟ್ ಗಳ ಕುಟುಂಬದಲ್ಲಿ ಬೆಳೆದ ಪ್ರತಿಮಾ ಅವರು ಭಾರತ ತಂಡವನ್ನು ಬಾಸ್ಕೆಟ್ ಬಾಲ್ ಆಟದಲ್ಲಿ ಪ್ರತಿನಿಧಿಸಿದ್ದಾರೆ.[ರೋಹಿತ್ ಶರ್ಮ- ರಿತಿಕಾ ಮದುವೆ ಸಂಭ್ರಮ]

ಪ್ರತಿಮಾ ಅವರ ಸೋದರಿಯರ ಪೈಕಿ ಪ್ರಶಾಂತಿ, ದಿವ್ಯಾ ಹಾಗೂ ಆಕಾಂಕ್ಷ ಕೂಡಾ ಬಾಸ್ಕೆಟ್​ಬಾಲ್ ಆಟಗಾರ್ತಿಯರು, ಮತ್ತೊಬ್ಬರು ಪ್ರಿಯಾಂಕಾ ಬಾಸ್ಕೆಟ್​ಬಾಲ್ (ಎನ್ ಐಎಚ್) ಕೋಚ್. 2006ರಲ್ಲಿ ಟೀಂ ಇಂಡಿಯಾ ಜ್ಯೂನಿಯರ್ ತಂಡಕ್ಕೆ ಆಯ್ಕೆಯಾಗಿದ್ದ ಪ್ರತಿಮಾ ಅವರು 2008ರಲ್ಲಿ ತಂಡದ ನಾಯಕಿಯಾದರು. 2010ರಲ್ಲಿ 'ಸಿಂಗ್ ಸಿಸ್ಟರ್ಸ್' ಏಷ್ಯನ್ ಗೇಮ್ಸ್​ನಲ್ಲೂ ಆಡಿದರು.[ರೈನಾ ಪುತ್ರಿ ಹೆಸರು ಶ್ರೇಯಾಂಶಿ ಅಲ್ಲ ಗ್ರೇಸಿಯಾ!]


ಜಿಂಬಾಬ್ವೆ ಪ್ರವಾಸದಲ್ಲಿರುವ ರಾಷ್ಟ್ರೀಯ ಏಕದಿನ ತಂಡದಿಂದ ವಿಶ್ರಾಂತಿ ಪಡೆದಿರುವ 27 ವರ್ಷದ ಇಶಾಂತ್ ಶರ್ಮ ವೆಸ್ಟ್ ಇಂಡೀಸ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಆಡಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After left handed batsman Yuvraj Singh, another Team India player Ishant Sharma got engaged on Sunday (June 19) and entered the list of cricketers who exchanged rings with their soul mates.
Please Wait while comments are loading...