ಭಗ್ನ ಪ್ರೇಮಿ ವಿರಾಟ್ ಕೊಹ್ಲಿಗೀಗ 'ವಿರಹ' ವಿರಾಮ

Posted By:
Subscribe to Oneindia Kannada

ನವದೆಹಲಿ, ಫೆ. 10: ವಿರಾಟ್ ಕೊಹ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮ ಕೈಕೊಟ್ಟದ್ದು ಬೇಜಾರಾಗಿದೆಯೋ ಇಲ್ಲವೋ ಗೊತ್ತಿಲ್ಲ, ಮಂಗಳವಾರ ಶ್ರೀಲಂಕಾ ವಿರುದ್ಧ ಸೋತ ರೀತಿಯಂತೂ ಬೇಸರ ತರಿಸುತ್ತದೆ ಎಂಬ ಮಾತು ಹುಟ್ಟಿಕೊಂಡಿದೆ. ಆದರೆ, ವಿಶ್ರಾಂತಿ ಪಡೆದುಕೊಂಡಿರುವ ವಿರಾಟ್ ಕೊಹ್ಲಿ ಈಗ ವಿರಹ ವಿರಾಮದಲ್ಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಈಗ ಭಗ್ನಪ್ರೇಮಿಗಳ ಸಾಲಿಗೆ ಸೇರಿದ್ದಾರಂತೆ. ಹೀಗೊಂದು ಪುಕಾರು ಹುಟ್ಟಿಕೊಂಡಿದೆ. ಸಾಲದ್ದಕ್ಕೆ ಕೊಹ್ಲಿ ಕೂಡಾ ‘ನಾನೀಗ ಒಬ್ಬಂಟಿ' ಎಂದು ಖಾಸಗಿ ಪಾರ್ಟಿಯೊಂದರಲ್ಲಿ ಘೊಷಿಸಿದ್ದಾರೆ. ಈ ಮೂಲಕ ಕೊಹ್ಲಿ ತಮ್ಮ ‘ಬ್ರೇಕ್​ಅಪ್' ಸುದ್ದಿಗೆ ಇಂಬು ನೀಡಿದ್ದರು.[ವಿಡಿಯೋ: ಜಿಮ್ ನಲ್ಲಿ ಕೊಹ್ಲಿ ಕಸರತ್ತು, ವಾರೆವ್ಹಾ!]

Virat Kohli

ನಟ ಅಂಗದ್ ಬೇಡಿ ಹುಟ್ಟುಹಬ್ಬದ ಪಾರ್ಟಿಯಲ್ಲಿ 27 ವರ್ಷದ ಕೊಹ್ಲಿ, ‘ನಾನೀಗ ಸಿಂಗಲ್, ಡ್ಯಾನ್ಸ್ ಮಾಡೋಣವೇ?' ಎಂದು ಇತರ ಅತಿಥಿಗಳೊಂದಿಗೆ ನರ್ತಿಸುತ್ತಿದ್ದರು. ಗೆಳತಿಯ ನಿಯಂತ್ರಣದಿಂದ ನಾನೀಗ ಹೊರಬಂದಿದ್ದೇನೆ ಎಂದೂ ಹೇಳುತ್ತಿದ್ದರಂತೆ. ಇದಕ್ಕೆ ಪೂರಕವಾಗಿ ಇನ್ಸ್ಟಾಗ್ರಾಮ್ ಮೂಲಕ ಚಿತ್ರವನ್ನು ಮತ್ತೊಮ್ಮೆ ಹಂಚಿಕೊಂಡಿದ್ದಾರೆ.

ಅನುಷ್ಕಾ ಅವರು ಸದ್ಯಕ್ಕೆ ಸಲ್ಮಾನ್ ಖಾನ್ ನಾಯಕನಾಗಿರುವ ‘ಸುಲ್ತಾನ್' ಸಿನಿಮಾ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಜೊತೆಗೆ ಸಿನಿಮಾ ನಿರ್ಮಾಣ ಮಾಡುವತ್ತ ಗಮನಹರಿಸಿದ್ದಾರೆ. ಇಬ್ಬರ ನಡುವೆ ಏನು ಜಗಳವಾಗಿದೆಯೋ ಗೊತ್ತಿಲ್ಲ, ಬ್ರೇಕ್ ಅಪ್ ಸುದ್ದಿ ಮಾತ್ರ ಹರಿದಾಡುತ್ತಿದೆ.[ಕೊಹ್ಲಿ ಪರಿಶ್ರಮಕ್ಕೆ ತಕ್ಕ ಫಲ, ಟಿ20ಯಲ್ಲಿ ನಂ.1]

Feels like I committed a crime deleting this picture. Haha sorry guys 🙏🙏. Here it is again. 🤓👀

A photo posted by Virat Kohli (@virat.kohli) on Feb 3, 2016 at 6:07am PST


ಶ್ರೀಲಂಕಾ ಸರಣಿಯಿಂದ ವಿಶ್ರಾಂತಿ ಪಡೆದಿರುವ ಕೊಹ್ಲಿ ಅವರು ಜಿಮ್ ನಲ್ಲಿ ಬೆವರಿಳಿಸುವ ಚಿತ್ರಗಳನ್ನು ಹಾಕಿ ಏಯ್ಟ್ ಪ್ಯಾಕ್ ಆಬ್ಸ್ ತೋರಿಸಿದ್ದರು. ಇದಾದ ಬಳಿಕ ಹಳೆ ಚಿತ್ರವೊಂದನ್ನು ಮತ್ತೊಮ್ಮೆ ಏತಕ್ಕೆ ಹಂಚಿಕೊಂಡಿದ್ದಾರೆ ಗೊತ್ತಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Close on the heels of engagement of Ravindra Jadeja and marriage of Irfan Pathan, there seems to be a bad news from cricketer Virat Kohli's side.
Please Wait while comments are loading...