2011ರ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಆಗಿತ್ತು : ರಣತುಂಗಾ

Posted By:
Subscribe to Oneindia Kannada

ಕೊಲಂಬೋ, ಜುಲೈ 14: ಶ್ರೀಲಂಕಾದ ಕ್ರಿಕೆಟ್‌ ತಂಡದ ಮಾಜಿ ನಾಯಕ, ವಿಶ್ವಕಪ್ ಗೆಲ್ಲಿಸಿಕೊಟ್ಟ ಸ್ಟಾರ್ ಅರ್ಜುನ್‌ ರಣತುಂಗ ಅವರು ಸ್ಫೋಟಕ ಸುದ್ದಿ ನೀಡಿದ್ದಾರೆ. 2011ರಲ್ಲಿ ನಡೆದಿದ್ದ ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ, ಈ ಪಂದ್ಯ ಫಿಕ್ಸ್ ಆಗಿತ್ತು ಎಂದು ರಣತುಂಗಾ ಹೇಳಿದ್ದಾರೆ.

2009ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಲಾಹೋರ್‌ನಲ್ಲಿ ವೇಳೆ ಶ್ರೀಲಂಕಾದ ಆಟಗಾರರಿದ್ದ ಬಸ್ ಮೇಲೆ ಉಗ್ರರ ದಾಳಿ ಆಗಿತ್ತು. ಈ ತನಿಖೆ ನಡೆಸಬೇಕು ಎಂದು ಸಂಗಕ್ಕಾರ ಇಚ್ಛಿಸಿದ್ದರು. ಆದರೆ, ಕ್ರೀಡಾ ಇಲಾಖೆ 2011ರ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ತಂಡಕ್ಕೆ ಏನಾಯಿತು ಎಂದು ವಿಚಾರಿಸಬೇಕೆಂದು ತಾವು ಇಚ್ಛಿಸುವುದಾಗಿ ಹೇಳಿದ್ದಾರೆ.

ಅರ್ಜುನ ರಣತುಂಗ ಮುಟ್ಟಿ ನೋಡಿಕೊಳ್ಳುವ ಉತ್ತರ ಕೊಟ್ಟ ಗಂಭೀರ್

Is it fixed: Arjuna Ranatunga seeks probe into 2011 World Cup final

ಅಂದು ಫೈನಲ್‌ ಪಂದ್ಯದ ದಿನ ಏನಾಯಿತು ಎಂಬುದನ್ನು ನಾನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ ಸತ್ಯವನ್ನು ಬಹಿರಂಗಪಡಿಸುತ್ತಿದ್ದೇನೆ. ಹಾಗಾಗಿ ಈ ವಿಷಯವನ್ನು ವಿಚಾರಣೆ ನಡೆಸಬೇಕೆಂದು ಎಂದು ಅರ್ಜುನ್‌ ಒತ್ತಾಯಿಸಿದ್ದಾರೆ. 2011ರಲ್ಲಿ ನಡೆದಿದ್ದ ಫೈನಲ್‌ ವಿಶ್ವಕಪ್‌ನಲ್ಲಿ ಲಂಕಾ ವಿರುದ್ಧ ಭಾರತ ಭರ್ಜರಿ ಗೆಲುವು ದಾಖಲಿಸಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ, 50 ಓವರ್ ಗಳಲ್ಲಿ 274/6 ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ, ಸಚಿನ್ ತೆಂಡೂಲ್ಕರ್ ಅವರು 18 ರನ್ನಿಗೆ ಮಾತ್ರ ಔಟಾದರು. ಶ್ರೀಲಂಕಾದ ಕಳಪೆ ಫೀಲ್ಡಿಂಗ್ ಹಾಗೂ ಬೌಲಿಂಗ್ ನಿಂದಾಗಿ ಪಂದ್ಯ ಕಳೆದುಕೊಂಡಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Sri Lanka skipper Arjuna Ranatunga on Friday (July 14) demanded an investigation into the country's 2011 World Cup final defeat by India amid allegations of match fixing.
Please Wait while comments are loading...