ರಾಖಿ ಕಟ್ಟಿಕೊಂಡ ಇರ್ಫಾನ್ ವಿರುದ್ಧ ಸಿಡಿದೆದ್ದ ಮುಸ್ಲಿಮರು

Posted By:
Subscribe to Oneindia Kannada

ಮಂಬೈ, ಆಗಸ್ಟ್ 08: ಕ್ರಿಕೆಟರ್ ಇರ್ಫಾನ್ ಪಠಾಣ್ ಏನು ಮಾಡಿದರೂ ಟೀಕೆ ಮಾಡುವ ಅಭ್ಯಾಸ ಸಾಮಾಜಿಕ ಜಾಲ ತಾಣಗಳಲ್ಲಿ ಇತ್ತೀಚೆಗೆ ಬೆಳೆದುಕೊಟ್ಟಿದೆ.

ರಕ್ಷಾಬಂಧನ್ ಆಚರಿಸಿಕೊಂಡು ರಾಖಿ ಸಮೇತ ಚಿತ್ರವೊಂದನ್ನು ಇನ್ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಇದನ್ನು ಕಂಡ ಮುಸ್ಲಿಮರು, ಫೇಸ್ ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ನಲ್ಲಿ ಇರ್ಫಾನ್ ವಿರುದ್ಧ ಕಿಡಿಕಾರಿದ್ದಾರೆ.

Irfan Pathan trolled on Twitter for celebrating Rakshabandhan

ತಮ್ಮ ಪತ್ನಿಯ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಇರ್ಫಾನ್ ಅವರ ವಿರುದ್ಧ ಅನೇಕರು ಕಿಡಿಕಾರಿದ್ದರು. ಈಗ ಮುಸ್ಲಿಂನಾಗಿದ್ದರೂ ರಾಖಿ ಕಟ್ಟಿಕೊಂಡಿದ್ದೇಕೆ ಎಂದು ಅನೇಕರು ಪ್ರಶ್ನಿಸಿದ್ದಾರೆ.

Irfan Pathan trolled on Twitter for celebrating Rakshabandhan

ನಿಮ್ಮ ತಂದೆ ಓರ್ವ ಮೌಲ್ವಿಯಾಗಿದ್ದಾರೆ. ಆದರೂ ಇಸ್ಲಾಂ ವಿರೋಧಿ ಕಾರ್ಯಗಳಲ್ಲಿ ಭಾಗಿಯಾಗಿದ್ದೇಕೆ? ಎಂದು ಹಲವರು ಪ್ರಶ್ನಿದ್ದಾರೆ.

Irfan Pathan trolled on Twitter for celebrating Rakshabandhan

ಇತ್ತೀಚೆಗೆ ಇರ್ಫಾನ್‌ ಪಠಾಣ್‌ ತಮ್ಮ ಪತ್ನಿ ಸಫಾ ಬೇಗ್ ಜತೆ ಕಾರಿನಲ್ಲಿದ್ದ ಚಿತ್ರವನ್ನು ಹಾಕಿದ್ದರು.


ಸಫಾ ಅವರು ಉಗುರುಗಳಿಗೆ ಪಾಲೀಶ್ ಹಾಕಿಕೊಂಡಿದ್ದು ಭಾರಿ ಚರ್ಚೆಗೀಡಾಗಿತ್ತು. ಇರ್ಫಾನ್ ಅವರ ಪತ್ನಿ ಸಫಾ ಬೇಗ್ ಅವರು ಇಸ್ಲಾಮ್ ಧರ್ಮ ವಿರೋಧಿ ಚಿತ್ರವನ್ನು ಹಾಕಿದ್ದಾರೆ ಎಂದು ಹಲವಾರು ಮಂದಿ ಆಕ್ಷೇಪಿಸಿದ್ದಾರೆ. ಈ ಹಿಂದೆ ಕೂಡಾ ಇರ್ಫಾನ್ ಅವರನ್ನು ಗುರಿಯನ್ನಾಗಿಸಿಕೊಂಡು ಇಸ್ಲಾಮ್ ಮೂಲಭೂತವಾದಿಗಳು ಟೀಕಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Irfan Pathan took to Instagram to post a photograph of himself with a rakhi tied around his wrist and wished everyone on the occasion of Rakshabandhan.Trolls lashed out at him for celebrating a Hindu festival despite being a Muslim.
Please Wait while comments are loading...