ಪಠಾಣ್ ಕುರಿತಂತೆ ಪಿಎಚ್ ಡಿ ಪಡೆದ ತನ್ವೀರಾ

Posted By:
Subscribe to Oneindia Kannada

ಬರೋಡಾ, ಆಗಸ್ಟ್ 10: ಟೀಂ ಇಂಡಿಯಾ ತಂಡದ ಆಲ್ ರೌಂಡರ್ ಇರ್ಫಾನ್ ಪಠಾಣ್ ಅವರ ಬಗ್ಗೆ ಬರೀ ವಿವಾದಿತ ಸುದ್ದಿಯೇ ಇತ್ತೀಚೆಗೆ ಹೆಚ್ಚಾಗಿರುವ ಕಾಲದಲ್ಲಿ ಈಗ ಒಳ್ಳೆ ಸುದ್ದಿಯೊಂದು ಬಂದಿದೆ.

ಇರ್ಫಾನ್ ಕುರಿತು ಮಹಾ ಪ್ರಬಂಧ ರಚಿಸಲಾಗಿದ್ದು, ಬರೋಡಾದ ತನ್ವೀರಾ ಶೇಖ್ ಅವರು ಗುಜರಾತ್ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ.

Irfan Pathan's cricketing journey is a case study now

ಇರ್ಫಾನ್ ಪಠಾಣ್ ಅವರ ಕೋಚ್ ಮೆಹಂದಿ ಶೇಖ್ ಅವರ ಪುತ್ರಿ ತನ್ವೀರಾ ಅವರು 'ಎ ಕೇಸ್ ಸ್ಟಡಿ ಆಫ್ ಇಂಟರ್ ನ್ಯಾಷನಲ್ ಕ್ರಿಕೆಟರ್ ಇರ್ಫಾನ್ ಪಠಾಣ್' ಎಂಬ ಮಹಾಪ್ರಬಂಧ ರಚಿಸಿ ಗುಜರಾತ್ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪಡೆದುಕೊಂಡಿದ್ದಾರೆ.

2012ರಿಂದ ಇರ್ಫಾನ್ ಬಗ್ಗೆ ಅಧ್ಯಯನ ನಡೆಸಿ ಮಹಾ ಪ್ರಬಂಧ ಬರೆಯಲು ಆರಂಭಿಸಿದರು. ತನ್ವೀರಾ ಅವರು ಅಗಸ್ಟ್‌ 3ರಂದು ಮಹಾ ಪ್ರಬಂಧ ಸಲ್ಲಿಕೆ ಮಾಡಿದ್ದಾರೆ. ಪಠಾಣ್ ಅವರ ಬಾಲ್ಯದ ಜೀವನ, ಕ್ರಿಕೆಟ್‌ ಜೀವನದ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ.

Irfan Pathan's cricketing journey is a case study now

ತನ್ವೀರಾ ಶೇಖ್ ಅವರು B.Com, B.P.Ed, M.P.Ed, GSET, Ph.D ವ್ಯಾಸಂಗ ಮುಗಿಸಿ ಸದ್ಯ ಸಹಾಯಕಿ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Irfan Pathan Tolled Again For Celebrating Raksha Bandhan | Oneindia Kannada

'ಇರ್ಫಾನ್ ಅವರು ಒಬ್ಬ ಉತ್ತಮ ಕ್ರಿಕೆಟಿಗ. ಅಲ್ಲದೇ ಒಳ್ಳೆಯ ವ್ಯಕ್ತಿಯೂ ಹೌದು. ಮಾನವೀಯ ಮೌಲ್ಯಗಳನ್ನು ಹೊಂದಿರುವ ಅವರ ಕುರಿತು ಅಧ್ಯಯನ ಮಾಡಲಾಗಿದೆ' ಎಂದು ಅವರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Irfan Pathan's journey to the Indian team from the humble surroundings of Baroda is inspirational. In fact, he belonges to a generation of cricketers who rose to the heights from the cricketing hinterland like MS Dhoni, RP Singh, Suresh Raina etc.
Please Wait while comments are loading...