ಪಾಕ್ ಹುಡುಗಿ ಹಾಕಿದ ಬೌನ್ಸರ್ ಗೆ ಇರ್ಫಾನ್ ಪಠಾಣ್ ಸಿಕ್ಸರ್

Posted By: Ramesh
Subscribe to Oneindia Kannada

ಹೈದರಾಬಾದ್, ಫೆಬ್ರವರಿ. 14 : ಕ್ರಿಕೆಟಿಗರು ಎಲ್ಲೇ ಹೋದರೂ ಅವರ ಅಭಿಮಾನಿಗಳು ಬೆಂಬಿಡದೇ ಇರುವುದಿಲ್ಲ. ಹಲವು ಕುತೂಹಲಗಳು, ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ.

ಅದರಂತೆ ಟೀಂ ಇಂಡಿಯಾದ ಆಲ್ ರೌಂಡರ್ ಇರ್ಫಾನ್ ಪಠಾಣ್ ಗೆ ಪಾಕಿಸ್ತಾನದ ಹುಡುಗಿಯೊಬ್ಬಳು ಕೇಳಿದ ಪ್ರಶ್ನೆಯನ್ನು ಅವರು ಯಾವತ್ತೂ ಮರೆಯೋದೇ ಇಲ್ವಂತೆ. ಅರೇ ಆ ಹಡುಗಿ ಕೇಳಿದ ಪ್ರಶ್ನೆಯಾದರೂ ಏನು? ಆ ಪ್ರಶ್ನೆಗೆ ಪಠಾಣ್ ಕೊಟ್ಟ ಉತ್ತರ ಇಲ್ಲಿದೆ.[ಇರ್ಫಾನ್ ಪಠಾಣ್- ಸಫಾ ಶಾದಿ ಮುಬಾರಕ್!]

Irfan Pathan response when Pakistani girl asked why he plays india muslim

ಲಾಹೋರ್ ನಲ್ಲಿ ಹುಡುಗಿಯೊಬ್ಬಳು ಅವರ ಬಳಿ ಬಂದು, ನೀವು ಮುಸ್ಲಿಂ ಧರ್ಮದವರು. ಆದರೂ ಭಾರತದ ಪರ ಆಡುತ್ತಿರುವುದೇಕೆ ಎಂದು ಅವರ ಬಳಿ ಕೇಳಿದ್ದಳಂತೆ.

ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಇಂತಹದ್ದೊಂದು ಕುತೂಹಲಕಾರಿ ಘಟನೆಯನ್ನು ಇರ್ಫಾನ್ ಪಠಾಣ್ ನೆನಪಿಸಿಕೊಂಡಿದ್ದಾರೆ.

ನಾಗಪುರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಈ ಘಟನೆಯನ್ನು ನೆನಪಿಸಿಕೊಂಡು ಮಾತನಾಡಿದ ಪಠಾಣ್, ನನಗೆ ಭಾರತದ ಪರ ಆಡುವುದೆಂದರೆ ಹೆಮ್ಮೆ.

ಈ ಭಾವನೆ ನನ್ನನ್ನು ಮತ್ತಷ್ಟು ಹುರಿದುಂಬಿಸುತ್ತದೆ ಎಂದರಂತೆ. ನನ್ನ ವೃತ್ತಿ ಜೀವನದಲ್ಲಿ ಹಲವು ನೆನಪುಗಳಿದ್ದರೂ, ಈ ಘಟನೆಯನ್ನು ಯಾವತ್ತೂ ಮರೆಯೋಲ್ಲ ಎಂದು ಪಠಾಣ್ ಹೇಳಿದ್ದಾರೆ.

ಇದೇ ವೇಳೆ ಮಾಜಿ ಟೀಂ ಇಂಡಿಯಾ ಕ್ಯಾಪ್ಟನ್ ಸೌರವ್ ಗಂಗೂಲಿ ಅವರಿಂದ ಕ್ಯಾಪ್ ಪಡೆದ ಮಧುರ ಕ್ಷಣಗಳನ್ನು ಪಠಾಣ್ ಸ್ಮರಿಸಿದ್ದಾರೆ.

ಈ ವರೆಗೆ ಪಠಾಣ್ ಭಾರತದ ಪರವಾಗಿ 29 ಟೆಸ್ಟ್ ಪಂದ್ಯ, 120 ಏಕದಿನ ಹಾಗೂ 24 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India pacer Irfan Pathan narrated an incident when he was asked by a Pakistani girl that why was he playing for India, despite being a Muslim.
Please Wait while comments are loading...