ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇರ್ಫಾನ್ ಪಠಾಣ್

By: ರಮೇಶ್.ಬಿ
Subscribe to Oneindia Kannada

ನವದೆಹಲಿ, ಫೆಬ್ರವರಿ 6 : ಭಾರತ ತಂಡದ ಆಲ್ ರೌಂಡರ್ ಆಟಗಾರ ಇರ್ಫಾನ್ ಪಠಾಣ್ ಬಹು ಕಾಲದ ಗೆಳತಿ ಸಫಾ ಬೇಗ್ ಅವರೊಂದಿಗೆ ವಿವಾಹವಾಗಿದ್ದಾರೆ. ಮುಸ್ಲಿಂ ಬಾಂಧವರ ಪವಿತ್ರ ಸ್ಥಳ ಮೆಕ್ಕಾದಲ್ಲಿ ಗುರುವಾರ ಈ ವಿವಾಹ ನಡೆದಿದೆ.

ಸೌದಿ ಅರೇಬಿಯಾದ ಜಿಡ್ಡಾ ಮೂಲದ ಸಫಾ ಬೇಗ್ (21) ಅವರನ್ನು ಎರಡು ವರ್ಷಗಳ ಹಿಂದೆ ಪಠಾಣ್ ಮೊದಲ ಬಾರಿಗೆ ದುಬೈನಲ್ಲಿ ಭೇಟಿ ಮಾಡಿದ್ದರು. ನಂತರ ಇಬ್ಬರಲ್ಲಿ ಆತ್ಮೀಯತೆ ಬೆಳೆದು, ಪ್ರೀತಿಸಲು ಆರಂಭಿಸಿದ್ದರು. ಮೂರು ತಿಂಗಳ ಹಿಂದೆ ಇವರಿಬ್ಬರ ವಿವಾಹ ನಿಶ್ಚಯವಾಗಿತ್ತು. [ಫೆಬ್ರವರಿಯಲ್ಲಿ ಇರ್ಫಾನ್ ಪಠಾಣ್ ಗೆ ಶಾದಿ ಭಾಗ್ಯ]

irfan pathan

ಫೆಬ್ರವರಿ 14ರಂದು ಇಬ್ಬರ ಮದುವೆ ನಡೆಯಲಿದೆ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪಠಾಣ್, 'ನಾನು ವೈಯಕ್ತಿಕ ವಿಷಯವನ್ನು ಹೆಚ್ಚು ಚರ್ಚಿಸಲು ಇಷ್ಟಪಡಲಾರೆ. ನಾನು ಫೆಬ್ರವರಿಯಲ್ಲಿ ಮದುವೆಯಾಗುತ್ತಿರುವ ಸುದ್ದಿ ನಿಜ. ಇದಕ್ಕಿಂತ ಹೆಚ್ಚು ತಾನೇನೂ ಹೇಳಲಾರೆ' ಎಂದು ಹೇಳಿದ್ದರು. [ಐಪಿಎಲ್ 2016 : ಶೇನ್ ವಾಟ್ಸನ್ ಭಾರಿ ಮೊತ್ತಕ್ಕೆ ಸೇಲ್]

ಇತ್ತೀಚಿಗೆ ಅಷ್ಟೇ ಲೆಗ್ ಸ್ಪಿನ್ನರ್ ರವಿಂದ್ರ ಜಡೇಜ ಅವರ ನಿಶ್ಚಿತಾರ್ಥವಾಗಿದೆ. ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈಗ ಇರ್ಫಾನ್ ಪಠಾಣ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. [ಚಿತ್ರಗಳು: ರೋಹಿತ್ ಶರ್ಮ- ರಿತಿಕಾ ಮದುವೆ ಸಂಭ್ರಮ]

ಭಾರತ ಕ್ರಿಕೆಟ್ ತಂಡದ ಆಟಗಾರರು ಒಬ್ಬೊಬ್ಬರಾಗಿ ಬ್ಯಾಚ್ಯೂಲರ್ ಲೈಫ್‌ಗೆ ಗುಡ್ ಬೈ ಹೇಳುತ್ತಿದ್ದಾರೆ. ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡುವುದು ಬಾಕಿ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian cricketer Irfan Pathan has tied knots with a 21-year-old girl from Jeddah. The all-rounder from Baroda married Safa Baig at Haram Shareef in Mecca on Thursday.
Please Wait while comments are loading...