ಇರಾನಿ ಟ್ರೋಫಿ: ಸಹಾ ಚೊಚ್ಚಲ ದ್ವಿಶತಕ, ಗುಜರಾತ್ ಗೆ ಮುಖಭಂಗ

Posted By:
Subscribe to Oneindia Kannada

ಮುಂಬೈ, ಜನವರಿ 24: ಭಾರಿ ಕುತೂಹಲ ಮೂಡಿಸಿದ್ದ ರಣಜಿ ಚಾಂಪಿಯನ್ ಗುಜರಾತ್ ಹಾಗೂ ಶೇಷ ಭಾರತ ನಡುವಿನ ಪಂದ್ಯದಲ್ಲಿ ಶೇಷ ಭಾರತ ತಂಡ 6 ವಿಕೆಟ್ ಗಳ ಅರ್ಹ ಜಯ ಸಂಪಾದಿಸಿದೆ. ಬೆಂಗಾಲ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ವೃದ್ದಿಮಾನ್ ಸಹಾ ಅವರ ಚೊಚ್ಚಲ ದ್ವಿಶತಕ ಹಾಗೂ ನಾಯಕ ಚೇತೇಶ್ವರ ಪೂಜಾರ ಸಿಡಿಸಿದ ಶತಕದ ನೆರವಿನಿಂದ ಇರಾನಿ ಟ್ರೋಫಿ ಶೇಷ ಭಾರತ ತಂಡದ ಪಾಲಾಗಿದೆ.

ಪಂದ್ಯದ ಸ್ಕೋರ್ ಕಾರ್ಡ್

ಇಲ್ಲಿನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಮಂಗಳವಾರದಂದು ಶೇಷ ಭಾರತ ತಂಡ 15ನೇ ಬಾರಿಗೆ ಕಪ್ ಎತ್ತಲು ಸಹಾ (ಅಜೇಯ 203), ಪೂಜಾರಾ(ಅಜೇಯ 116) ಐದನೇ ವಿಕೆಟಿಗೆ ಮುರಿಯದ 315ರನ್ ಗಳ ಜತೆಯಾಟ ಕಾರಣವಾಯಿತು. ಐದನೇ ದಿನವಾದ ಇಂದು 113 ರನ್ ಗಳ ಅಲ್ಪ ಗುರಿಯನ್ನು ಬೆನ್ನತ್ತಿದ ಶೇಷ ಭಾರತ ಸುಲಭವಾಗಿ ಗುರಿ ಮುಟ್ಟಿತು.

Irani Cup: Wriddhiman Saha's double ton helps Rest Of India clinch trophy

ಇದಕ್ಕೂ ಮುನ್ನ 379 ರನ್ ಗಳ ಬೃಹತ್ ಗುರಿಪಡೆದಿದ್ದ ಶೇಷ ಭಾರ ಒಂದು ಹಂತದಲ್ಲಿ 63 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ನಂತರ ವಿಕೆಟ್ ಕೀಪರ್ ಸಹಾ ಹಾಗೂ ಪೂಜಾರ ಪಂದ್ಯದ ದಿಕ್ಕುದೆಸೆ ಬದಲಿಸಿಬಿಟ್ಟರು.

ಸಂಕ್ಷಿಪ್ತ ಸ್ಕೋರ್:

ಗುಜರಾತ್ ಮೊದಲ ಇನಿಂಗ್ಸ್: 358 ಹಾಗೂ 246

ಶೇಷ ಭಾರತ ಮೊದಲ ಇನಿಂಗ್ಸ್; 226 ಹಾಗೂ 379/4

(ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengal wicketkeeper-batsman Wriddhiman Saha's resolute double century helped Rest of India (ROI) beat Ranji Champions Gujarat by six wickets and clinch the Irani Cup at the Brabourne Stadium here on Tuesday, January 24.
Please Wait while comments are loading...