ಇರಾನಿ ಕಪ್ : ಶೇಷ ಭಾರತ ತಂಡ ಪ್ರಕಟ, ಪೂಜಾರಾ ನಾಯಕ

Posted By:
Subscribe to Oneindia Kannada

ನವದೆಹಲಿ, ಜನವರಿ 15 : ಚೊಚ್ಚಲ ರಣಜಿ ಪ್ರಶಸ್ತಿ ಗೆದ್ದಿರುವ ಗುಜರಾತ್ ತಂಡದ ವಿರುದ್ಧದ ಇರಾನಿ ಕಪ್ ಟೂರ್ನಿಗೆ ಶೇಷ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಚೇತೇಶ್ವರ್ ಪೂಜಾರಾ ನಾಯಕರಾಗಿದ್ದರೆ, ತ್ರಿಶತಕ ವೀರ ಕರುಣ್ ನಾಯರ್ ಹಾಗ್ ವೃದ್ಧಿಮಾನ್ ಸಹಾ ತಂಡಕ್ಕೆ ಸೇರಿದ್ದಾರೆ.

ಜನವರಿ 20 ರಿಂದ 24ರ ತನಕ ಮುಂಬೈನಲ್ಲಿ ಇರಾನಿ ಕಪ್ ಪಂದ್ಯ ನಡೆಯಲಿದೆ. ಶೇಷ ಭಾರತ ತಂಡದಲ್ಲಿ ತಮಿಳುನಾಡಿನ ಆರಂಭಿಕ ಅಟಗಾರ ಅಭಿನವ್ ಮುಕುಂದ್ ಗೆ ಸ್ಥಾನ ನೀಡಲಾಗಿದೆ.

Irani Cup: Cheteshwar Pujara to lead Rest of India, Wriddhiman Saha returns

ಜಾರ್ಖಂಡ್ ನ ಯುವ ಪ್ರತಿಭೆ ಇಶಾನ್ ಕಿಶಾನ್ ಆಯ್ಕೆಯಾಗಿದ್ದಾರೆ,ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಮುಂಬೈನ ಪೃಥ್ವಿ ಶಾ ಅವರನ್ನು ಆಯ್ಕೆ ಮಾಡಲಾಗಿಲ್ಲ.

ಶೇಷ ಭಾರತ : ಅಭಿನವ್ ಮುಕುಂದ್, ಅಖಿಲ್ ಹೆರ್ವಾಡ್ಕರ್, ಚೇತೇಶ್ವರ್ ಪೂಜಾರ(ನಾಯಕ), ಕರುಣ್ ನಾಯರ್, ಮನೋಜ್ ತಿವಾರಿ, ವೃದ್ಧಿಮಾನ್ ಸಹಾ, ಕುಲದೀಪ್ ಯಾದವ್, ಶಹಬಾಜ್ ನದೀಮ್, ಪಂಕಜ್ ಸಿಂಗ್, ಕೆ ವಿಗ್ನೇಶ್, ಸಿದ್ಧಾರ್ಥ್ ಕೌಲ್, ಶಾರ್ದೂಲ್ ಠಾಕೂರ್, ಅಕ್ಷಯ್ ವಾಖರೆ, ಇಶಾನ್ ಕಿಶಾನ್, ಪ್ರಶಾಂತ್ ಛೋಪ್ರಾ (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cheteshwar Pujara will lead the 15-man squad comprising Karun Nair, who made waves with a triple hundred against England in the fifth and final Test in Chennai.Rest of India (RoI) squad that will take on first-time Ranji Trophy champions Gujarat in the Irani Cup to be held in Mumbai from January 20 to 24.
Please Wait while comments are loading...