ಮಿಸ್ ಯು ಧೋನಿ ಎಂದು ಬ್ರಾವೊ ಅಂದಿದ್ಯಾಕೆ?

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಚೆನ್ನೈ, ಏಪ್ರಿಲ್ 07: ಕಳೆದ ಐದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ನಲ್ಲಿ ಮಹೇಂದ್ರ ಸಿಂಗ್ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ವೆಸ್ಟ್ ಇಂಡೀಸ್ ಆಟಗಾರ ಡ್ವಾಯ್ನೆ ಬ್ರಾವೊ ಈ ಬಾರಿಯ ಸೀಸನ್ 9 ನಲ್ಲಿ ಸುರೇಶ್ ರೈನಾ ನಾಯಕ್ವದ ಗುಜರಾತ್ ಲಯನ್ಸ್ ಪರ ಆಡುತ್ತಿರುವದರಿಂದ ಮಿಸ್ ಯು ಧೋನಿ ಅವರೊಬ್ಬ ಉತ್ತಮ ನಾಯಕರಾಗಿದ್ದರು. ಹೀಗೆಂದು ಬ್ರಾವೊ ಧೋನಿಯನ್ನು ಹೊಗಳಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

2010 ಮತ್ತು 2011 ರಲ್ಲಿ ಧೋನಿ ನಾಯಕತ್ವದಲ್ಲಿ ಚೆನ್ನೈಸೂಪರ್ ಕಿಂಗ್ಸ್ ಚಾಂಪಿಯನ್ ಆಗಿತ್ತು ಅವರು ಆಟಗಾರರರಿಗೆ ಉತ್ತಮ ಪ್ರೋತ್ಸಾಹ ನೀಡುತ್ತಾರೆ ಹಾಗಾಗಿ ವಿಶ್ವದ ಬೆಸ್ಟ್ ಕ್ಯಾಪ್ಟನ್ ಎಂದು ಬ್ರಾವೊ ಹೇಳಿದ್ದಾರೆ.

IPL9: I'll miss MS Dhoni's leadership, says Dwayne Bravo

ಮ್ಯಾಚ್ ಫಿಕ್ಸಿಂಗ್ ಆರೋಪದಿಂದ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ 9ನೇ ಆವೃತ್ತಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡವನ್ನು ರದ್ದು ಮಾಡಲಾಗಿದ್ದು ಹಾಗಾಗಿ ಚೆನ್ನೈ ತಂಡದಲ್ಲಿ ಆಡುತ್ತಿದ್ದ ಸುರೇಶ ರೈನಾ, ಬ್ರೆಂಡನ್ ಮೆಕಲಂ, ರವಿಂದ್ರ ಜಡೇಜ, ಡ್ವಾಯ್ನೆ ಸ್ಮಿತ್ ಈ ಬಾರಿಯ ಐಪಿಲ್ ನಲ್ಲಿ ಗುಜರಾತ್ ಲಯನ್ಸ್ ಪರ ಆಡುತ್ತಿರುವುದನ್ನು ನೋಡಿದರೆ ತುಂಬ ಖುಷಿಯಾಗುತ್ತಿದೆ ಎಂದು ಬ್ರಾವೊ ಸಂತೋಷ ವ್ಯಕ್ತಪಡಿಸಿದ್ದಾರೆ.

ಇದೇ ಮೊದಲ ಬಾರಿಗೆ ಸುರೇಶ್ ರೈನಾ ಗುಜರಾತ್ ತಂಡದ ನೇತೃತ್ವ ವಹಿಸಿಕೊಂಡಿದ್ದು ಅವರು ತಮ್ಮ ನಾಯಕತ್ವದ ಕೌಶಲ್ಯವನ್ನು ತೋರಿಸಲು ಇದು ಅವರಿಗೆ ಉತ್ತಮ ಅವಕಾಶ ಸಿಕ್ಕಿದೆ ಹಾಗೂ ನಾವು ಸಹ ರೈನಾ ಅವರಿಗೆ ಬೆಂಬಲ ನೀಡುತ್ತೇವೆ ಎಂದು ಗುಜರಾತ್ ಆಟಗಾರ ಬ್ರಾವೊ ತಿಳಿಸಿದ್ದಾರೆ.

ಹೊಸ ತಂಡ ಮತ್ತು ಹೊಸ ಮಾಲೀಕತ್ದದಲ್ಲಿ ಗುಜರಾತ್ ಲಯನ್ಸ್ ತಂಡ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲಿದೆ ಎಂದು ಬ್ರಾವೊ ತಮ್ಮ ತಂಡದ ಬಗ್ಗೆ ಆಶಯ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A vital member of the Chennai Super Kings (CSK) for last five years, West Indies all-rounder Dwayne Bravo on Wednesday called Mahendra Singh Dhoni one of the best captains in the world and said he would miss playing under the Indian skipper in IPL-9.
Please Wait while comments are loading...