ರಾಯಲ್ ಚಾಲೆಂಜರ್ಸ್‌ಗೆ ವಿಜಯ್ ಮಲ್ಯ ಗುಡ್ ಬೈ

Subscribe to Oneindia Kannada

ನವದೆಹಲಿ, ಮಾರ್ಚ್, 17: ಐಪಿಎಲ್ ಆರಂಭಕ್ಕೂ ಮುನ್ನ ವಿಜಯ್ ಮಲ್ಯ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಈ ಬಗ್ಗೆ ಬಿಸಿಸಿಐ ಗೆ ಅಧಿಕೃತವಾಗಿ ತಿಳಿಸಿದೆ. ಮಾರ್ಚ್ 7 ರಂದೇ ಈ ಮೇಲ್ ಮುಖಾಂತರ ಐಪಿಎಲ್ ಗೌವರ್ನಿಂಗ್ ಕೌನ್ಸಿಲ್ ಗೆ ತಿಳಿಸಲಾಗಿದೆ ಎಂದು ಹೇಳಲಾಗಿದೆ. [ಸಾಲ ಮಾಡಿ ತುಪ್ಪ ತಿಂದವ್ರು ಮಲ್ಯ ಒಬ್ರೇ ಅಲ್ಲ ಸ್ವಾಮೀ!]

royal challengers bengaluru

ಮಲ್ಯ ರಾಜೀನಾಮೆ ಕುರಿತಾದ ಇ ಮೇಲ್ ನ್ನು ನಾವು ಪಡೆದುಕೊಂಡಿದ್ದೇವೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ. ಹಾಗಾಗಿ ಇನ್ನು ಮುಂದೆ ರಸಲ್ ಆಡಂ ಆರ್ ಸಿಬಿಯಗ ಹೊಸ ಬಾಸ್ ಆಗಲಿದ್ದಾರೆ. ಆದರೆ ಮಲ್ಯ ಮಗ ಸಿದ್ಧಾರ್ಥ ಮಲ್ಯ ಆರ್ ಸಿಬಿಯ ಮೆಂಟರ್ ಆಗಿ ಮುಂದುವರಿದಿದ್ದಾರೆ.[ಟಿಪ್ಪು ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?]

ಇ ಮೇಲ್ ಹೇಳುವಂತೆ ಸಿದ್ಧಾರ್ಥ ಮಲ್ಯ ಇನ್ನು ಮುಂದೆ ನಿರ್ದೇಶಕರಾಗುತ್ತಾರೆ. ಆದರೆ ತಂಡದ ಮಾಲೀಕತ್ವದಲ್ಲಿ ಯಾವ ಬದಲಾವಣೆಯನ್ನು ಮಾಡಲಾಗಿಲ್ಲ. ಸಾಕಷ್ಟು ಸಾಲ ಮಾಡಿಕೊಂಡು ವಿದೇಶಕ್ಕೆ ತೆರಳಿರುವ ಮಲ್ಯ ವಿವಾದದ ಸುಳಿಗೆ ಸಿಲುಕಿದ್ದಾರೆ. ಇದೀಗ ರಾಯಲ್ ಚಾಲೆಂಜರ್ಸ್ ತಂಡದ ನಿರ್ದೇಶಕ ಹುದ್ದೆಯನ್ನು ಕೈ ಬಿಟ್ಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Indian Premier League (IPL) franchise Royal Challengers Bangalore (RCB) has written to the Indian cricket board (BCCI), intimating them about Vijay Mallya's resignation from the post of Director of Royal Challengers Sports Private Limited (RCSPL). According to reliable sources, the top BCCI officials in the IPL governing council received an e-mail on March 7 from franchise official Russell Adams, informing the board about the current ownership status in the franchise. It was five days after the troubled business tycoon left India for United Kingdom.
Please Wait while comments are loading...