ವಿರಾಟ್ ಕೊಹ್ಲಿಗಾಗಿ ನನ್ನ ಹೃದಯ ಮಿಡಿಯುತ್ತಿದೆ ಎಂದ ಪಾಂಡೆ

Posted By:
Subscribe to Oneindia Kannada

ಮುಂಬೈ, ಮೇ 29: ಟೀಂ ಇಂಡಿಯಾದ ಅಘೋಷಿತ ಚಿಯರ್ ಗರ್ಲ್ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಗಾಗಿ ನನ್ನ ಹೃದಯ ಮಿಡಿಯುತ್ತಿದೆ. ಆತನಿಗೆ ದೊಡ್ಡದೊಂದು ಕೊಡುಗೆ ನೀಡುವೆ ಎಂದು ಇತ್ತೀಚೆಗೆ ಪೂನಮ್ ಹೇಳಿಕೊಂಡಿದ್ದಾರೆ.

ಟೀಂ ಇಂಡಿಯಾದ ಟೆಸ್ಟ್ ತಂಡ ಮತ್ತು ಬೆಂಗಳೂರು ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ ಮೇಲೆ ಪೂನಮ್ ಗೆ ಪ್ಯಾರ್ ಇಷ್ಕ್ ಇರುವುದು ಹೊಸ ವಿಷಯವೇನಲ್ಲ. ಪ್ರಮುಖ ಕ್ರಿಕೆಟ್ ಟೂರ್ನಿ ಇದ್ದಾಗ ಪೂನಮ್ ಸುದ್ದಿಯಾಗುವುದು ಹೊಸತೇನಲ್ಲ. ಆದರೆ, ಯಾವ ರೀತಿ ಪ್ರಚಾರ ಪಡೆಯುತ್ತಾರೆ ಎಂಬುದು ಸದ್ಯದ ಕುತೂಹಲ.[ಭಾರತ ಗೆದ್ದಿದ್ದಕ್ಕೆ ಪೂನಂಪಾಂಡೆ 'ಎದೆಗಾರಿಕೆ']

IPL VIDEO: This is how Poonam Pandey showered love on RCB skipper Virat Kohli

ಈ ಹಿಂದೆ ಭಾರತ ತಂಡದ ಗೆಲುವಿಗಾಗಿ ನಗ್ನಳಾಗುತ್ತೇನೆಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈಗ ಇಂಡಿಯನ್ ಪ್ರೀಮಿಯರ್ ಲೀಗ್ 9 ಟೂರ್ನಿಯಲ್ಲಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ ಮೇಲೆ ಮತ್ತೊಮ್ಮೆ ಪೂನಮ್ ಪ್ರೀತಿಯ ಮಳೆ ಹರಿಸಲು ಸಿದ್ಧ ಎಂದಿದ್ದಾರೆ.[ಯಾರಿಗೆ ಬೇಕು ಪೂನಂ ಪಾಂಡೆ 'ಹಾಟ್' ಬ್ರಾ!?]

ವೀರಪ್ಪನ್ ಹಿಂದಿ ಸಿನಿಮಾ ನೋಡಲು ಬಂದಿದ್ದ ಪೂನಮ್ ರನ್ನು ಐಎಎನ್ ಎಸ್ ಸಂಸ್ಥೆ ಪ್ರತಿನಿಧಿ ಪ್ರಶ್ನೆ ಮಾಡಿ, ಈ ನಡುವೆ ಏಕೆ ಸುದ್ದಿಯಲ್ಲಿಲ್ಲ ಎಂದಿದ್ದಾರೆ. ಅದಕ್ಕೆ ಉತ್ತರಿಸಿ, ಸರಿಯಾದ ಐಡಿಯಾ ಸಿಗಲಿಲ್ಲ ಎಂದಿದ್ದಾರೆ. ಕೊಹ್ಲಿ ಬಗ್ಗೆ ನಿಮ್ಮ ಪ್ರೀತಿ ಇನ್ನೂ ಹಾಗೆ ಇದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿ, ಕೊಹ್ಲಿಯನ್ನು ಯಾರು ತಾನೆ ಪ್ರೀತಿಸುವುದಿಲ್ಲ ನನ್ನ ಹೃದಯವನ್ನೇ ಅರ್ಪಿಸಿ ಕೊಹ್ಲಿಯನ್ನು ಪ್ರೀತಿಸುವುದಾಗಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
IPL VIDEO: This is how Poonam Pandey showered love on RCB skipper Virat Kohli. In a recently released video by IANS, Pandey can be seen expressing her love for the star Indian batsman.
Please Wait while comments are loading...