ಸೋಲಿನಲ್ಲೂ ದಾಖಲೆ ಬರೆದ ಎಂಎಸ್ ಧೋನಿ

Posted By:
Subscribe to Oneindia Kannada

ಪುಣೆ, ಏಪ್ರಿಲ್ 25: ಇಂಡಿಯನ್ ಪ್ರೀಮಿಯರ್ ಲೀಗ್ ನ 9ನೇ ಆವೃತ್ತಿಯಲ್ಲಿ ಹೊಚ್ಚ ಹೊಸ ತಂಡವನ್ನು ಮುನ್ನಡೆಸುತ್ತಿರುವ ಎಂಎಸ್ ಧೋನಿ ಅವರು ಸೋಲಿನಲ್ಲೂ ದಾಖಲೆ ಬರೆದಿದ್ದಾರೆ. ಐಪಿಎಲ್ ಸೀಸನ್ ನಲ್ಲಿ ಸತತ ನಾಲ್ಕು ಪಂದ್ಯಗಳನ್ನು ಕಳೆದುಕೊಂಡ ನಾಯಕ ಎಂಬ ಹಣೆಪಟ್ಟಿ ಹೊತ್ತುಕೊಂಡಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ


ಎಂಎಸ್ ಧೋನಿ ನೇತೃತ್ವ ರೈಸಿಂಗ್ ಪುಣೆ ಸೂಪರ್​ಜೈಂಟ್ಸ್ ತಂಡ ಐಪಿಎಲ್-9ರಲ್ಲಿ ತನ್ನ ಸತತ 4ನೇ ಸೋಲು ಕಂಡಿದೆ. ಭಾನುವಾರ ನಡೆದ ಪಂದ್ಯದಲ್ಲಿ ಪುಣೆ ತಂಡವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 2 ವಿಕೆಟ್ ಗಳಿಂದ ಸೋಲಿಸಿದೆ.[ಪಂದ್ಯದ ಸ್ಕೋರ್ ಕಾರ್ಡ್]

ಕೋಲ್ಕತ್ತಾ ಪರ ಬ್ಯಾಟಿಂಗ್ ನಲ್ಲಿ ಬಡ್ತಿ ಪಡೆದು ಮೇಲಿನ ಕ್ರಮಾಂಕದಲ್ಲಿ ಆಡಿದ ಸೂರ್ಯಕುಮಾರ್ ಯಾದವ್ 60 ರನ್(49 ಎಸೆತ, 6‍X4, 2X6) ಅರ್ಧಶತಕದ ನೆರವಿನಿಂದ ಗೆಲುವಿನ ದಡ ಮುಟ್ಟಿತು.[ಧೋನಿ ಪಡೆಗೆ ಇನ್ನೊಂದು ಆಘಾತ!]

IPL 2016: Suryakumar Yadav stars in KKR's thrilling win as KKR pip Pune Supergiants by two wickets

ಇದಕ್ಕೂ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಪುಣೆ ತಂಡಕ್ಕೆ ಮತ್ತೊಮ್ಮೆ ಅಜಿಂಕ್ಯ ರಹಾನೆ ಆಸರೆಯಾದರು. 67ರನ್( 52ಎಸೆತ, 4X4, 3X6) ಅರ್ಧಶತಕ, ಸ್ಟೀವನ್ ಸ್ಮಿತ್ 31ರನ್, ಎಂಎಸ್ ಧೋನಿ ಅಜೇಯ 23ರನ್(12ಎಸೆತ) ನೆರವಿನಿಂದ 20 ಓವರ್ ಗಳಲ್ಲಿ 5 ವಿಕೆಟ್​ಗೆ 160 ರನ್ ಗಳಿಸಿತು. ಆದರೆ, ಕೆಕೆಆರ್ ತಂಡ 19.3 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 162 ರನ್ ಗಳಿಸಿ ವಿಜಯೋತ್ಸವ ಆಚರಿಸಿತು.

ಸೋಲಿನಲ್ಲೂ ದಾಖಲೆ ಬರೆದ ಎಂಎಸ್ ಧೋನಿ

ಸೋಲಿನಲ್ಲೂ ದಾಖಲೆ ಬರೆದ ಎಂಎಸ್ ಧೋನಿ

-
-
-
-
-
-

ಲಯಕ್ಕೆ ಮರಳಿದ ಯೂಸುಫ್ ಪಠಾಣ್ 36 ರನ್(27 ಎಸೆತ, 2X4, 2X6) ಅವರು ಯಾದವ್ ಗೆ ಸಾಥ್ ನೀಡಿದರು. ಇಬ್ಬರು 47 ಎಸೆತ ಗಳಲ್ಲಿ 51 ರನ್​ಗಳ ಜೊತೆಯಾಟ ಸಾಧಿಸಿದ್ದು, ನಿರ್ಣಾಯಕವಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Suryakumar Yadav's 49-ball 60 was the backbone of the Kolkata Knight Riders' (KKR) run chase as they hunted down Rising Pune Supergiants' 160/5 with two wickets and three balls to spare in a closely-fought Indian Premier League (IPL) encounter at the Maharashtra Cricket Association Stadium here on Sunday (April 24).
Please Wait while comments are loading...