ಐಪಿಎಲ್ : ಪಂಜಾಬ್ ತಂಡಕ್ಕೆ ವೀರೇಂದ್ರ ಸೆಹ್ವಾಗ್ ಕೋಚ್?

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 25: ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಹುದ್ದೆ ತೊರೆದಿದ್ದಾರೆ. ಬಂಗಾರ್ ಸ್ಥಾನಕ್ಕೆ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಅವರನ್ನು ಕರೆ ತರಲು ಪಂಜಾಬ್ ಫ್ರಾಂಚೈಸಿ ಯತ್ನ ನಡೆಸಿದೆ.

2014 ರಲ್ಲಿ ಸಹಾಯಕ ಕೋಚ್, 2015 ರಿಂದ ಪಂಜಾಬ್ ತಂಡದ ಪ್ರಮುಖ ಕೋಚ್ ಆಗಿದ್ದ ಸಂಜಯ್ ಬಂಗಾರ್ ಅವರಿಂದ ತೆರವಾಗುವ ಸ್ಥಾನಕ್ಕೆ ಸೆಹ್ವಾಗ್ ರನ್ನು ಕರೆತರುವ ಸಾಧ್ಯತೆ ಹೆಚ್ಚಿದೆ. ಪಂಜಾಬ್ ಫ್ರಾಂಚೈಸಿ ಸಹಒಡೆತನ ಹೊಂದಿರುವ ಪ್ರೀತಿ ಜಿಂಟಾ ಜತೆ ಸಂಜಯ್ ಕಿತ್ತಾಟವಾಡಿಕೊಂಡಿದ್ದರು.

 IPL: Sanjay Bangar quits Kings XI Punjab, Virender Sehwag likely to be new coach

ರಾಜೀನಾಮೆ ಬಗ್ಗೆ ಇಎಸ್ ಪಿಎನ್ ಕ್ರಿಕ್ ಇನ್ಫೋಗೆ ಪ್ರತಿಕ್ರಿಯೆ ನೀಡಿದ ಬಂಗಾರ್, ನವೆಂಬರ್ ನಲ್ಲಿ ರಾಜೀನಾಮೆ ಸಲ್ಲಿಸಿದ್ದಕ್ಕೆ ಡಿಸೆಂಬರ್ ನಲ್ಲಿ ಪ್ರತಿಕ್ರಿಯೆ ಬಂದಿದೆ, ಇಂಗ್ಲೆಂಡ್ ಸರಣಿಯಿಂದ ಸಂಪೂರ್ಣ ಬಿಡುವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದೇನೆ.ಸದ್ಯ ಬೇರೆ ಯಾವ ಫ್ರಾಂಚೈಸಿ ಯೊಂದಿಗೂ ಕೋಚಿಂಗ್ ಬಗ್ಗೆ ಮಾತುಕತೆ ನಡೆಸಿಲ್ಲ ಎಂದಿದ್ದಾರೆ.

ಸೆಹ್ವಾಗ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ ಬಳಿಕ ಪಂಜಾಬ್ ತಂಡ ಮೆಂಟರ್ ಆಗಿದ್ದರು.ಈಗ ಕೋಚ್ ಹುದ್ದೆ ಒಪ್ಪಿಕೊಳ್ಳುವ ಸಾಧ್ಯತೆಯಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Sanjay Bangar has stepped down as the coach of IPL franchise Kings XI Punjab (KXIP) and team's mentor Virender Sehwag may be appointed as the new coach.IPL 2017, Sanjay Bangar quits Kings XI Punjab, Virender Sehwag likely to be new coach,
Please Wait while comments are loading...