ಕ್ರಿಸ್ ಗೇಲ್ ಪೋಲಿ ಮಾತು ಐಪಿಎಲ್ ಬಾಸ್ ಕಿವಿಗೆ ಬಿತ್ತಂತೆ!

Posted By:
Subscribe to Oneindia Kannada

ಬೆಂಗಳೂರು, ಮೇ 26: ವಿವಾದಿತ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗಿರುವ ವೆಸ್ಟ್ ಇಂಡೀಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಕ್ರಿಸ್ ಗೇಲ್ ಗೆ ಇನ್ನಷ್ಟು ತೊಂದರೆ ಎದುರಾಗುವ ಮುನ್ಸೂಚನೆ ಸಿಕ್ಕಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಐಪಿಎಲ್ ನಂತರ ಆಸ್ಟ್ರೇಲಿಯಾದ ಬಿಗ್​ಬಾಷ್​ನ ಮೆಲ್ಬೋರ್ನ್ ರೆನೆಗೇಡ್ಸ್ ತಂಡದಲ್ಲಿ ಆಡುವ ಆಸೆ ಇರಿಸಿಕೊಂಡಿದ್ದ ಕ್ರಿಸ್ ಗೇಲ್ ಗೆ ನಿರಾಶೆಯಾಗಿದೆ. ಮೆಲ್ಬೋರ್ನ್ ತಂಡ ಈಗಾಗಲೆ ಗೇಟ್​ಪಾಸ್ ನೀಡಿದೆ.

ಈಗ ಐಪಿಎಲ್ ಆಯುಕ್ತ ರಾಜೀವ್ ಶುಕ್ಲಾ ಅವರು ಗೇಲ್ ಅವರ ವಿವಾದದ ಬಗ್ಗೆ ದೂರು ಬಂದರೆ ಸೂಕ್ತ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. [ಪತ್ರಕರ್ತೆಗೆ ಪೋಲಿ ಪ್ರಶ್ನೆ ಕೇಳಿದ ಕ್ರಿಸ್ ಗೇಲ್]

IPL : Rajiv Shukla to take up Chris Gayle Controversy remark issue

ಬ್ರಿಟಿಷ್ ಪತ್ರಕರ್ತೆ ಜತೆಗಿನ ಸಂದರ್ಶನದಲ್ಲಿ ಅಸಭ್ಯ ಮಾತುಗಳನ್ನಾಡಿದ್ದರಿಂದ ಗೇಲ್ ಗೆ ಸಾಕಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯವಿದೆ. ಮೆಲ್ಬೋರ್ನ್ ತಂಡದಿಂದ ದೂರಾದ ಬಳಿಕ ಕೌಂಟಿ ಕ್ರಿಕೆಟ್​ನಲ್ಲಿ ಸಾಮರ್​ಸೆಟ್ ತಂಡ ಕೂಡಾ ಗೇಟ್ ಪಾಸ್ ನೀಡುವ ಸಾಧ್ಯತೆ ಹೆಚ್ಚಿದೆ.[ಆರೋಹಿ ಗೂಗ್ಲಿಗೆ ಕ್ರಿಸ್ ಗೇಲ್ ಬೋಲ್ಡ್]

ನನ್ನ ಸೆಕ್ಸ್ ಜೀವನದ ಬಗ್ಗೆ ನೀವು ಪ್ರಶ್ನಿಸುತ್ತಿದ್ದೀರಾ? ನೀವು ಸಾಮೂಹಿಕ ಸೆಕ್ಸ್ ನಲ್ಲಿ ಪಾಲ್ಗೊಂಡಿದ್ದೀರಾ? ಮಜಾ ಇರುತ್ತೆ. ನಮ್ಮಲ್ಲಿ ಎಲ್ಲಾ ಹೆಂಗಳೆಯರು ನನಗಾಗಿ ಕಾದಿರುತ್ತಾರೆ .ಪ್ರಪಂಚದಲ್ಲೇ ಅತ್ಯಂತ ದೊಡ್ಡದಾದ ಬ್ಯಾಟ್ ನನ್ನ ಬಳಿ ಇದೆ ಎಂದು ಪತ್ರಕರ್ತೆ ಶಾರ್ಲೊ ಎಡ್ವರ್ಡ್ಸ್ ಅವರಿಗೆ ಗೇಲ್ ಪ್ರಶ್ನೆ ಹಾಕಿದ್ದರು.[ಗಳಿಸಿದ ರನ್ ಗಳಿಗಿಂತ ಹೆಚ್ಚು ಹೆಣ್ಣುಗಳ ಜತೆ ಮಲಗಿದ್ದ ಕ್ರಿಕೆಟರ್]

ಇದು ಇಬ್ಬರು ವಿದೇಶಿಯರ ನಡುವಿನ ಮಾತುಕತೆ. ಅವರ ವೈಯಕ್ತಿಕ ವಿಷಯವೂ ಹೌದು. ಹಾಗೆಂದು ಇದನ್ನು ಸಂಪೂರ್ಣವಾಗಿ ಕಡೆಗಣಿಸುವುದಿಲ್ಲ. ನಮಗೆ ದೂರು ಬಂದರೆ ಮಾತ್ರ ಕ್ರಮಕೈಗೊಳ್ಳಲು ಮುಂದಾಗುತ್ತೇವೆ' ಎಂದು ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಕೂಡಾ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
IPL 2016 : Rajiv Shukla to take up Chris Gayle Controcersy remark issue. Months after he courted controversy by flirting to a female Australian TV reporter during a Big Bash League Twenty20 match live, West Indies explosive batsman Chris Gayle has done it yet again.
Please Wait while comments are loading...