ಮುಂಬೈ ತಂಡಕ್ಕೆ ಮಾಲಿಂಗ ಬದಲಿಗೆ ಜೋರಮ್ ಟೇಲರ್!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮುಂಬೈ ಏಪ್ರಿಲ್ 27 : ಗಾಯದ ಸಮಸ್ಯೆಯಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 9 ನಿಂದ ಹೊರ ಹೋಗಿರುವ ಮುಂಬೈ ಇಂಡಿಯನ್ಸ್ ತಂಡದ ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಲಿಂಗಾ ಅವರ ಸ್ಥಾನವನ್ನು ವೆಸ್ಟ್ ಇಂಡೀಸ್ ತಂಡದ ಜೋರಮ್ ಟೇಲರ್ ತುಂಬಲಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಗಾಯದಿಂದ ಚೇತರಿಸಿಕೊಳ್ಳದೆ ಐಪಿಎಲ್ ಟೂರ್ನಿಯಿಂದ ಹೊರ ಬಿದ್ದಿರುವ ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗಾ ಅವರ ಬದಲಿಗೆ ವೆಸ್ಟ್ ಇಂಡೀಸ್ ನ ಜೋರಮ್ ಟೇಲರ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆಂದು ಭಾರತೀಯ ಕ್ರಿಕೆಟ್ ಬೋರ್ಡ್ (ಬಿಸಿಸಿಐ) ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.

IPL 2016: Mumbai Indians sign Jerome Taylor as Lasith Malinga's replacement

ಮುಂಬೈ ಇಂಡಿಯನ್ಸ್ ಜೋರಮ್ ಟೇಲರ್ ರನ್ನು ಟ್ವಿಟ್ಟರ್ ಮೂಲಕ ಸ್ವಾಗತ ಕೋರಿದೆ. ಈಗಾಗಲೇ ಮುಂಬೈ ತಂಡದಲ್ಲಿ ಬೂಮ್ರಾ, ಮಿಚೆಲ್ ಮೆಕ್ಲಿಗನ್ ಹಾಗೂ ಸೌಥಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದು ಮತ್ತೊಬ್ಬ ಬೌಲರ್ ಜೋರಮ್ ಟೇಲರ್ ಆಗಮನದಿಂದ ಮುಂಬೈ ತಂಡದ ಬೌಲಿಂಗ್ ವಿಭಾಗದ ಬಲಿಷ್ಠಗೊಳ್ಳಲಿದೆ.

20 ಟಿ20 ಪಂದ್ಯಗಳನ್ನು ಆಡಿರುವ ಟೇಲರ್ 24 ವಿಕೆಟ್ ಕಬಳಿಸಿದ್ದಾರೆ. 3ಕ್ಕೆ 6 ಇವರ ಬೆಸ್ಟ್ ಬೌಲಿಂಗ್ ಆಗಿದೆ. ಮಾಲಿಂಗ ಅವರು 2009ರಿಂದ ಮುಂಬೈ ಇಂಡಿಯನ್ಸ್ ಪರ ಆಡಿ 98 ಪಂದ್ಯಗಳನ್ನಾಡಿದ್ದರು. ಶ್ರೀಲಂಕಾದಿಂದ ಮುಂಬೈಗೆ ಬಂದಿದ್ದ ಮಾಲಿಂಗ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಮತ್ತೆ ಲಂಕಾಕ್ಕೆ ವಾಪಸ್ ಹೋದರು. (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mumbai Indians on Wednesday (April 27) signed West Indies fast bowler Jerome Taylor to replace injured Sri Lankan paceman Lasith Malinga for the remainder of the Indian Premier League 2016 (IPL 9) season.
Please Wait while comments are loading...