ಅಂಬಾನಿ ಪುತ್ರ ದೈತ್ಯ ದೇಹಿ ಅನಂತ್ ಈಗ ಸ್ಲಿಮ್ ಅಂಡ್ ಟ್ರಿಮ್

Posted By:
Subscribe to Oneindia Kannada

ಮುಂಬೈ, ಮಾರ್ಚ್ 21: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ ಪ್ರಮುಖ ತಂಡ ಮುಂಬೈ ಇಂಡಿಯನ್ಸ್ ಮಾಲೀಕ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಸಕತ್ ಸ್ಲಿಮ್ ಆಗಿದ್ದಾರೆ. ದಢೂತಿ ದೇಹ ಹೊತ್ತುಕೊಂಡು ಮೈದಾನದಲ್ಲಿ ಎಲ್ಲರ ಗಮನಸೆಳೆಯುತ್ತಿದ್ದ ಅನಂತ್ ಸ್ಲಿಮ್ ಅಂಡ್ ಟ್ರಿಮ್ ಆಗಿದ್ದಾರೆ.

ಅನಂತ್ ಅಂಬಾನಿ ಅವರು ಸರಿ ಸುಮಾರು 70 ಕೆಜಿ ತನ್ನ ತೂಕವನ್ನು ಇಳಿಸಿಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೆ ದೂಡಿದ್ದಾರೆ. ಗುಜರಾತಿನ ಸೋಮನಾಥ ದೇವಾಲಯಕ್ಕೆ ಆಗಮಿಸಿದ್ದ ಅನಂತ್ ಅಂಬಾನಿಯನ್ನು ಕಂಡು ಎಲ್ಲರೂ ಬೆರಗಾದರಂತೆ. ನಂತರ ಇವರೇ ದಢೂತಿ ದೇಹದ ಅನಂತ್ ಎಂದು ತಿಳಿದ ಮೇಲೆ ಎಲ್ಲರೂ ಅವಕ್ಕಾಗಿದ್ದಾರೆ.[ಐಪಿಎಲ್ 2016 ಸಂಪೂರ್ಣ ವೇಳಾಪಟ್ಟಿ]

Mukesh Ambani's elder son Anant Ambani loses 70 kgs!

ಅಮೆರಿಕದಲ್ಲಿ ಫಿಟ್ನೆಸ್ ತರಬೇತಿದಾರರಿಂದ ವಿಶಿಷ್ಟ ತರಬೇತಿ ಹಾಗೂ ಸಲಹೆಯಿಂದ ಅನಂತ್ ಹೊಸ ಶೇಪ್ ಪಡೆದುಕೊಂಡಿದ್ದಾರೆ.
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಆಡುವ ಪಂದ್ಯಗಳಲ್ಲಿ ಹೊಸ ರೂಪದೊಂದಿಗೆ ಅನಂತ್ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ರಿಲಯನ್ಸ್ ರಿಫೈನರಿಗಾಗಿ ಜಾಮ್ ನಗರದಲ್ಲಿ ನಡೆಯುವ ಮುಂದಿನ ಮ್ಯಾರಥಾನ್ ಓಟದಲ್ಲೂ ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿಯಿದೆ.[ಯಾವ ತಂಡದಲ್ಲಿ ಯಾವ ಆಟಗಾರರಿದ್ದಾರೆ?]

ಅನಂತ್ ಅವರು ಸ್ಥೂಲಕಾಯ ಸಮಸ್ಯೆ (hypothyroidism) ಯಿಂದ ಬಳಲುತ್ತಿದ್ದು ಇದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮುಖೇಶ್ ಹಾಗೂ ನೀತಾ ಅಂಬಾನಿಗೆ ಅನಂತ್, ಅಕಾಶ್ ಹಾಗೂ ಈಶಾ ಎಂಬ ಮಕ್ಕಳಿದ್ದಾರೆ.


(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Reliance Industries owner Mukesh Ambani's elder son Anant Ambani has lost upto 70 kgs. Anant has been in media limelight for his weighty issues in the past, but this time, he has become a head-turner!
Please Wait while comments are loading...