ಐಪಿಎಲ್ : ಪುಣೆ ಸೂಪರ್ ಜೈಂಟ್ಸ್ ಗೆ ಧೋನಿ ಕ್ಯಾಪ್ಟನ್

Posted By:
Subscribe to Oneindia Kannada

ಕೋಲ್ಕತ್ತಾ, ಜ. 19: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಂದಿನ ಆವೃತ್ತಿಯಲ್ಲಿ ಎಂಎಸ್ ಧೋನಿ ಅವರು ಹೊಚ್ಚ ಹೊಸ ತಂಡ ಪುಣೆ ಸೂಪರ್ ಜೈಂಟ್ಸ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯಾಂಕ ಹೇಳಿದ್ದಾರೆ.

ಪುಣೆ ಫ್ರಾಂಚೈಸಿಗೆ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್(ಆರ್​ಪಿಎಸ್​ಜಿ) ಎಂದು ಹೆಸರಿಡಲಾಗಿದ್ದು, ಹೊಸ ಲೋಗೋ ಅನಾವರಣಗೊಳಿಸಲಾಗಿದೆ.

MS Dhoni named captain of Rising Pune Supergiants

ಪುಣೆ ತಂಡದ ನಾಯಕನಾಗಿ ಎಂಎಸ್ ಧೋನಿ ಅವರನ್ನು ಸ್ವಾಗತಿಸುತ್ತಿದ್ದೇವೆ ಎಂದು ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಸೋಮವಾರ ಘೋಷಿಸಿದರು. ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ನಾಯಕರಾಗಿ ಧೋನಿ ಅವರ ದಾಖಲೆ ಅದ್ಭುತವಾಗಿದ್ದು, 2016 ರ ಸೀಸನ್ ನಲ್ಲಿ ಪುಣೆ ತಂಡವನ್ನು ಸಮರ್ಥವಾಗಿ ಮುನ್ನಡೆಸುವ ಭರವಸೆ ಇದೆ ಎಂದರು.


ಆಸ್ಟ್ರೇಲಿಯಾದ ನಾಯಕ ಸ್ಟೀವನ್ ಸ್ಮಿತ್, ದಕ್ಷಿಣ ಆಫ್ರಿಕಾದ ನಾಯಕ ಫಾಫ್ ಡು ಪ್ಲೆಸಿಸ್, ಆರ್ ಅಶ್ವಿನ್ ಹಾಗೂ ಅಜಿಂಕ್ಯ ರಹಾನೆರಂಥ ಪ್ರತಿಭಾವಂತರು ತಂಡದಲ್ಲಿದ್ದಾರೆ. ಉಳಿದ ಆಟಗಾರರನ್ನು ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಹರಾಜಿನಲ್ಲಿ ಖರೀದಿಸಲಾಗುತ್ತದೆ.

ಗಂಗೂಲಿ ಪಾತ್ರ:
ಮಾಜಿ ಕ್ರಿಕೆಟಿಗ, ಬಿಸಿಸಿಐ ಸಲಹೆಗಾರ ಸೌರವ್ ಗಂಗೂಲಿ ಅವರು ಪುಣೆ ತಂಡದಲ್ಲಿ ಯಾವುದೇ ರೀತಿ ಭಾಗಿಯಾಗುವುದಿಲ್ಲ ಎಂದು ಗೋಯೆಂಕಾ ಸ್ಪಷ್ಟಪಡಿಸಿದ್ದಾರೆ.ಐಎಸ್​ಎಲ್​ನಲ್ಲಿ ಆಡುವ ಅಥ್ಲೆಟಿಕೋ ಡಿ ಕೋಲ್ಕತ್ತಾ ಫುಟ್ಬಾಲ್ ತಂಡಕ್ಕೆ ಗೋಯೆಂಕಾ ಮತ್ತು ಗಂಗೂಲಿ ಸಹಮಾಲೀಕರಾಗಿರುವುದರಿಂದ ಈ ಬಗ್ಗೆ ಗೊಂದಲ ಉಂಟಾಗಿತ್ತು. ಆದರೆ, ಗಂಗೂಲಿ ಪಾತ್ರದ ಬಗ್ಗೆ ಗೋಯೆಂಕಾ ಸ್ಪಷ್ಟನೆ ನೀಡಿದ್ದಾರೆ. ರಘು ಐಯರ್ ಅವರು ತಂಡದ ಸಿಇಒ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's limited overs skipper Mahendra Singh Dhoni was named captain of Rising Pune Supergiants, owned by Sanjiv Goenka, for the upcoming season of the Indian Premier League here today (January 18).
Please Wait while comments are loading...