ಐಪಿಎಲ್: ಕೆಕೆಆರ್ ತಂಡಕ್ಕೆ ಬಾಲಾಜಿ ಬೌಲಿಂಗ್ ಕೋಚ್

Posted By:
Subscribe to Oneindia Kannada

ಕೋಲ್ಕತಾ, ಜನವರಿ 04: ಮಾಜಿ ವೇಗಿ ಲಕ್ಷ್ಮಿಪತಿ ಬಾಲಾಜಿ ಅವರನ್ನು ಬೌಲಿಂಗ್ ಕೋಚ್ ಆಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಪ್ರಮುಖ ತಂಡ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಮಂಗಳವಾರ ನೇಮಿಸಿದೆ.

ಲಕ್ಷ್ಮಿಪತಿ ಬಾಲಾಜಿ ಅವರು ಪಾಕಿಸ್ತಾನದ ಕ್ರಿಕೆಟ್ ದಿಗ್ಗಜ ವಾಸಿಂ ಅಕ್ರಮ್ ಅವರ ಸ್ಥಾನವನ್ನು ತುಂಬಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ 2017 ಸೀಸನ್ ನಿಂದ ವಾಸಿಂ ಅಕ್ರಮ್ ಅವರು ಹೊರಗುಳಿದಿದ್ದಾರೆ. 2010ರಲ್ಲಿ ಕೆಕೆಆರ್ ಕೋಚ್ ಆಗಿ ನೇಮಕಗೊಂಡ ಅಕ್ರಮ್ ಅವರು 2012 ಹಾಗೂ 2014ರಲ್ಲಿ ಕಪ್ ಗೆಲ್ಲಲು ನೆರವಾಗಿದ್ದರು.[ಯಾವ ತಂಡದಲ್ಲಿ ಯಾವ ಆಟಗಾರರು ಉಳಿದುಕೊಂಡಿದ್ದಾರೆ?]

IPL: KKR appoint Lakshmipathy Balaji as bowling coach

ಲಕ್ಷ್ಮಿಪತಿ ಬಾಲಾಜಿ ಅವರು 2011 ರಿಂದ 2013ರ ತನಕ ಕೆಕೆಆರ್ ತಂಡದ ಬೌಲಿಂಗ್ ಪಡೆಯ ನೇತೃತ್ವ ವಹಿಸಿಕೊಂಡ ಅನುಭವ ಹೊಂದಿದ್ದಾರೆ. 2012ರಲ್ಲಿ ತಂಡದ ಗೆಲುವಿಗೆ ತಮ್ಮದೇ ಆದ ಕೊಡುಗೆ ನೀಡಿದ್ದರು. ಬಾಲಾಜಿ ಅವರ ನೇಮಕದ ಬಗ್ಗೆ ಕೆಕೆಆರ್ ನ ಸಿಇಒ ಹಾಗೂ ಎಂಡಿ ವೆಂಕಿ ಮೈಸೂರ್ ಅವರು ಘೋಷಿಸಿ, ಬಾಲಾ ಅವರು ಮತ್ತೊಮ್ಮೆ ಕೆಕೆಆರ್ ಕುಟುಂಬ ಸೇರುತ್ತಿರುವುದು ಖುಷಿ ಕೊಟ್ಟ ದೆ ಎಂದಿದ್ದಾರೆ.[ಯಾವ ತಂಡದಿಂದ ಯಾವ ಕ್ರಿಕೆಟರ್ ಗೆ ಕೊಕ್!]

ಕೆಕೆಆರ್ ಜತೆ ಈ ಹಿಂದೆ ಆಡಿದ ಅನುಭವ ನನಗೆ ವರವಾಗಲಿದೆ, ನನ್ನ ನೆಚ್ಚಿನ ತಂಡದ ಭಾಗವಾಗುತ್ತಿರುವುದು ಸಂತಸ ತಂದಿದೆ ಎಂದು ಬಾಲಾಜಿ ಹೇಳಿದ್ದಾರೆ.(ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kolkata Knight Riders (KKR) appointed former India pacer Lakshmipathy Balaji as their bowling coach on Tuesday, January 3.
Please Wait while comments are loading...