ಚಿತ್ರಗಳು : ಲಕ್ಕಿ ಗರ್ಲ್ ರಿವಾಬ ಜತೆ ಜಡೇಜ ಮದ್ವೆ

Posted By:
Subscribe to Oneindia Kannada

ರಾಜ್ ಕೋಟ್, ಏಪ್ರಿಲ್ 17: ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್, ಗುಜರಾತ್ ಲಯನ್ಸ್ ಆಟಗಾರ ರವೀಂದ್ರ ಜಡೇಜ ಅವರು ಏಪ್ರಿಲ್ 17 ರಂದು ರಿವಾಬ ಸೋಲಂಕಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಲಕ್ಕಿ ಗರ್ಲ್ ರಿವಾಬ ಸೋಲಂಕಿ ಅವರನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಮದುವೆಯಾಗಲಿದ್ದಾರೆ. ವಿವಾಹ ಪೂರ್ವ ಸಂಪ್ರದಾಯಗಳನ್ನು ಆಚರಿಸುತ್ತಿರುವ ಜಡೇಜ ಅವರ ಚಿತ್ರಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ.

ಜಡೇಜ ಅವರು ಮದುವೆಗೆ ಮುನ್ನ ಏಪ್ರಿಲ್ 04 ಸೋಮವಾರದಂದು ಭಾವಿ ಪತ್ನಿಯ ತಂದೆಯಿಂದ ಐಷಾರಾಮಿ ಆಡಿ ಕಾರೊಂದನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದರು. [ರವೀಂದ್ರ ಜಡೇಜ ನಿಶ್ಚಿತಾರ್ಥದ ಚಿತ್ರಗಳು]

28 ರ ಹರೆಯದ ಜಡ್ಡು ಜಾಮ್ ನಗರ ಜಿಲ್ಲೆಯಲ್ಲಿರುವ ತಮ್ಮ ಸ್ವಗ್ರಾಮದಲ್ಲಿ ಖ್ಯಾತ ಉದ್ಯಮಿಯೊಬ್ಬರ ಪುತ್ರಿ ರಿವಾಬ ಸೋಲಂಕಿ ಅವರನ್ನು ಸಾಂಪ್ರದಾಯಿಕವಾಗಿ ಕೈ ಹಿಡಿಯಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಆತ್ಮೀಯರು ಹಾಗೂ ಕುಟುಂಬದವರು ಮಾತ್ರ ಭಾಗವಹಿಸಲಿದ್ದಾರೆ. [ರವೀಂದ್ರ ಜಡೇಜ ಮದುವೆಗೆ ಧೋನಿ, ರೈನಾಗೆ ಆಹ್ವಾನವಿಲ್ಲ!]

Ravindra Jadeja Riva Solanki Wedding Haldi Ceremony Pictures

ಆದರೆ, ಆರತಕ್ಷತೆ ಕಾರ್ಯಕ್ರಮದಲ್ಲಿ ಗುಜರಾತ್ ಲಯನ್ಸ್ ತಂಡದ ಎಲ್ಲಾ ಆಟಗಾರರು, ಟೀಂ ಇಂಡಿಯಾದ ಆಟಗಾರರು ಪಾಲ್ಗೊಳ್ಳಲಿದ್ದಾರೆ. [ಕ್ರಿಕೆಟ್ ನಿಂದ ದೂರವಿದ್ದ ಜಡೇಜ ಜತೆಗಿದ್ದ ಸಾಥಿ ಯಾರು?]

ಜಡೇಜ ಏಪ್ರಿಲ್ 21 ರಂದು ರಾಜ್ ಕೋಟ್ ನಲ್ಲಿ ನಡೆಯಲಿರುವ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ ಹೇಳಿದ್ದಾರೆ.

ಚಿತ್ರಗಳು : ಲಕ್ಕಿ ಗರ್ಲ್ ರಿವಾಬ ಜತೆ ಜಡೇಜ ಮದ್ವೆ

ಚಿತ್ರಗಳು : ಲಕ್ಕಿ ಗರ್ಲ್ ರಿವಾಬ ಜತೆ ಜಡೇಜ ಮದ್ವೆ

-
-
-
-
-

ಟೀಂ ಇಂಡಿಯಾದ ಆಟಗಾರರಿಗೆ ಮತ್ತು ಇನ್ನೂಳಿದ ತಮ್ಮ ಗೆಳೆಯರಿಗೆ ಜಡೇಜ ಕಲವದ್ ರೋಡ್ ಹೋಟೆಲ್ ನಲ್ಲಿ ವಿಶೇಷ ಪಾರ್ಟಿಯೊಂದನ್ನು ಆಯೋಜಿಸಿದ್ದಾರೆ. ಫೆ.05 ರಂದು ಜಡೇಜ ಹಾಗೂ ರಿವಾಬ ನಡುವೆ ವಿವಾಹ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿತ್ತು. [ಪಂಜಾಬ್ ಕಿಂಗ್ಸ್ ಮಣಿಸಿದ ಗುಜರಾತಿನ ಲಯನ್ಸ್]

ವರುಣ್ ಅರೋನ್, ಹರ್ಭಜನ್ ಸಿಂಗ್, ಸುರೇಶ್ ರೈನಾ, ಮೋಹಿತ್ ಶರ್ಮ, ರೋಹಿತ್ ಶರ್ಮ ನಂತರ ಜಡೇಜ ಅವರು ಬ್ಯಾಚುಲರ್ ಲೈಫಿಗೆ ಜಡೇಜ ಗುಡ್ ಬೈ ಹೇಳಿ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ravindra Jadeja is all set to tie the nuptial knot with fiance Riva Solanki on April 17. Today is Jadeja's Haldi ceremony, here are some photos.
Please Wait while comments are loading...