ಐಪಿಎಲ್ : ಫೆಬ್ರವರಿ 20 ರಂದು ಬೆಂಗಳೂರಲ್ಲಿ ಆಟಗಾರರ ಹರಾಜು

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 05: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ನ 10ನೇ ಆವೃತ್ತಿಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಫೆಬ್ರವರಿ 20ರಂದು ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ. 10 ವರ್ಷಗಳ ಟೂರ್ನಿಯ ಆಯೋಜನೆ ಹೊಣೆ ಈ ವರ್ಷ ಕೊನೆಗೊಳ್ಳಲಿದೆ. ಮರುದಿನ ಫ್ರಾಂಚೈಸಿಗಳಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಹೊಸ ತಂಡಗಳಾದ ಪುಣೆ ಹಾಗೂ ರಾಜ್ ಕೋಟ್ ಎರಡು ವರ್ಷಗಳ ಕಾಲ ಐಪಿಎಲ್ ನಲ್ಲಿ ಆಡಲು ಅನುಮತಿ ಪಡೆದಿವೆ. ನಿಷೇಧಕ್ಕೊಳಗಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಬದಲಿಗೆ ಟೂರ್ನಿಯಲ್ಲಿ ಕಳೆದ ವರ್ಷ ಕಾಣಿಸಿಕೊಂಡಿದ್ದವು. ಈ ಬಾರಿ ಐಪಿಎಲ್ ಹರಾಜು ಪ್ರಕ್ರಿಯೆ ಬೆಂಗಳೂರಿನ ರಿಟ್ಜ್ ಕಾರ್ಲ್ಟನ್ ಹೋಟೆಲಿನಲ್ಲ್ ನಡೆಯಲಿದೆ.

IPL 2017: Players auction to be held in Bengaluru on February 20

2017ರ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಸರಿ ಸುಮಾರು 143.3 ಕೋಟಿ ರು ಹರಾಜಿನಲ್ಲಿ ಬಿಕರಿಯಾಗುವ ನಿರೀಕ್ಷೆಯಿದೆ. ಪ್ರತಿ ತಂಡದಲ್ಲಿ ವಿದೇಶಿ ಆಟಗಾರರು ಸೇರಿದಂತೆ 27 ಆಟಗಾರರು ಇರಲಿದ್ದಾರೆ. ಒಟ್ಟಾರೆ, 28 ಮಂದಿ ವಿದೇಶಿ ಆಟಗಾರರು ಸೇರಿ 76 ಆಟಗಾರರು ಹರಾಜಿಗೆ ಒಳಪಡುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The players auction for the 10th edition of the cash-rich Indian Premier League (IPL) will be held on February 20 in Bengaluru, it was officially confirmed on Friday (Feb 3).
Please Wait while comments are loading...