ಕೂಲಿಯಾಳೊಬ್ಬರ ಮಗ ನಾಥು ಸಿಂಗ್ ಈಗ ಕ್ರಿಕೆಟ್ ಸ್ಟಾರ್

Posted By:
Subscribe to Oneindia Kannada

ಬೆಂಗಳೂರು, ಫೆ. 07: ರೈತರೊಬ್ಬರ ಮಗ ಬರೀಂದರ್ ಸ್ರಾನ್ ಟೀಂ ಇಂಡಿಯಾ ಪರ ಆಡುವ ಅವಕಾಶ ಸಿಕ್ಕ ಬೆನ್ನಲ್ಲೇ ಕೂಲಿಯಾಳೊಬ್ಬರ ಮಗ ಐಪಿಎಲ್ ಹರಾಜಿನಲ್ಲಿ ಬೇಡಿಕೆ ಪಡೆದುಕೊಂಡಿದ್ದಾರೆ. ಐಪಿಎಲ್ 2016 ಹರಾಜಿನಲ್ಲಿ ರಾಜಸ್ಥಾನದ ವೇಗಿ ನಾಥು ಸಿಂಗ್ ಅವರು 3.2 ಕೋಟಿ ರು ಬೆಲೆಗೆ ಮಾರಾಟವಾಗಿದ್ದಾರೆ.

ಐಪಿಎಲ್ 2016 ಹರಾಜು ಫುಲ್ ಅಪ್ಡೇಟ್ | ಮಾರಾಟವಾದ ಆಟಗಾರರ ಪೂರ್ತಿ ಪಟ್ಟಿ

20 ವರ್ಷ ವಯಸ್ಸಿನ ವೇಗಿ ನಾಥು ಸಿಂಗ್ ಅವರು ದೇಶಿ ಕ್ರಿಕೆಟ್ ಅಂಗಳದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಇಂಡಿಯನ್ ಪ್ರಿಮಿಯರ್ ಲೀಗ್ ನ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ.

ಐಪಿಎಲ್ ಹರಾಜಿಗೆ ಆಯ್ಕೆಯಾದ ಬಹುತೇಕ ಎಲ್ಲಾ ಯುವ ಪ್ರತಿಭೆಗಳ ಹಿಂದಿನ ಸ್ಪೂರ್ತಿ ಅಂಡರ್ 19 ಟೀಂ ಇಂಡಿಯಾಕ್ಕೆ ಕೋಚ್ ರಾಹುಲ್ ದ್ರಾವಿಡ್ ಎಂದರೆ ತಪ್ಪಾಗಲಾರದು. ದ್ರಾವಿಡ್ ಅವರು ಕೂಡಾ ವೇಗಿ ನಾಥು ಸಿಂಗ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. [ರೈತನ ಮಗ ಬರಿಂದರ್, ಬಾಕ್ಸಿಂಗ್ ನಿಂದ ಕ್ರಿಕೆಟ್ ಗೆ ಎಂಟ್ರಿ]

ನಾಥು ಸಿಂಗ್ ಬಗ್ಗೆ ಪರಿಚಯಾತ್ಮಕ ವಿವರಣೆ ಹೀಗಿದೆ:
* ನಾಥು ಸಿಂಗ್ ಅವರ ತಂದೆ ಜೈಪುರದ ವೈರ್ ಫ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡುತ್ತಾರೆ.
* ನಾಥು ಅವರ ತಂದೆ ಭರತ್ ಸಿಂಗ್ ಅವರು ಮೊದಲಿಗೆ ಮಗನ ಆಸಕ್ತಿಯನ್ನು ಗಮನಿಸಿ, ಉಳಿತಾಯ ಮಾಡಿದ ಹಣವನ್ನು ಕ್ರಿಕೆಟ್ ಕೋಚಿಂಗ್ ಗೆ ವಿನಿಯೋಗಿಸುತ್ತಾರೆ. ನಾಥು ವೃತ್ತಿ ಬದುಕಿನ ಮುಂದಿನ ಹೆಜ್ಜೆಗಳ ವಿವರ ಮುಂದೆ ಓದಿ...

ಪ್ರತಿಭೆ ಸಂದ ಪುರಸ್ಕಾರ, ಐಪಿಎಲ್ ಗೆ ನಾಥು

ಪ್ರತಿಭೆ ಸಂದ ಪುರಸ್ಕಾರ, ಐಪಿಎಲ್ ಗೆ ನಾಥು

* ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗಳಲ್ಲಿ ಮಿಂಚುತ್ತಿದ್ದ ನಾಥು ಸಿಂಗ್ ಅವರಿಗೆ ಗೆಳೆಯರಿಂದ ಹೆಚ್ಚಿನ ಪ್ರೋತ್ಸಾಹ ಸಿಗುತ್ತದೆ. ನಂತರ ಲೆದರ್ ಬಾಲ್ ಕ್ರಿಕೆಟ್ ಆಡತೊಡಗುತ್ತಾರೆ.
* ಆದರೆ, ಕ್ರಿಕೆಟ್ ಅಕಾಡೆಮಿ ಸೇರಲು ಭರತ್ ಸಿಂಗ್ ಅವರಿಗೆ ಹಣಕಾಸು ತೊಂದರೆ ಎದುರಾಗುತ್ತದೆ. 10,000 ರು ಹೊಂದಿಸಲು ಸಾಲ ಮಾಡುತ್ತಾರೆ. ಈ ರೀತಿ ಜೈಪುರ ಕ್ರಿಕೆಟ್ ಅಕಾಡೆಮಿಗೆ ನಾಥು ಸಿಂಗ್ ಸೇರುತ್ತಾರೆ.

ಐಪಿಎಲ್ ಹರಾಜಿನ ನಂತರ ಮುಂಬೈ ತಂಡ

ಐಪಿಎಲ್ ಹರಾಜಿನ ನಂತರ ಮುಂಬೈ ಇಂಡಿಯನ್ಸ್ ತಂಡ ಹೀಗಿದೆ

ಕ್ರಿಕೆಟ್ ದಿಗ್ಗಜರಿಂದ ನಾಥು ಬೌಲಿಂಗ್ ಗೆ ಮೆಚ್ಚುಗೆ

ಕ್ರಿಕೆಟ್ ದಿಗ್ಗಜರಿಂದ ನಾಥು ಬೌಲಿಂಗ್ ಗೆ ಮೆಚ್ಚುಗೆ

* ಚೆನ್ನೈನ ಎಂ ಆರ್ ಎಫ್ ಫೌಂಡೇಶನ್ ನಲ್ಲಿ ಆಸ್ಟ್ರೇಲಿಯಾದ ವೇಗಿ ಗ್ಲೆನ್ ಮೆಗ್ರಾ ಅವರಿಂದ ಮೆಚ್ಚುಗೆ.
* ನಾಥು ಅವರು 2013ರಲ್ಲಿ ರಾಜಸ್ಥಾನದ ಅಂಡರ್ 19 ತಂಡಕ್ಕೆ ಆಯ್ಕೆ.
* ಪಂಕಜ್ ಸಿಂಗ್ ಅವರು ಗಾಯಾಳುವಾಗಿ ತಂಡದಿಂದ ಹೊರಬಿದ್ದಾಗ ಬದಲಿ ಆಟಗಾರನಾಗಿ ರಣಜಿ ಟ್ರೋಫಿ ತಂಡದಲ್ಲಿ ದೆಹಲಿ ವಿರುದ್ಧ ಮೊದಲಿಗೆ ಆಡುತ್ತಾರೆ.
* ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲೇ ದೆಹಲಿ ವಿರುದ್ಧ 7/87 ವಿಕೆಟ್ ಪಡೆದು ಎದುರಾಳಿ ತಂಡದ ಗೌತಮ್ ಗಂಭೀರ್ ಅವರ ಪ್ರಶಂಸೆಗೂ ಒಳಗಾಗುತ್ತಾರೆ.

ನಾಥು ಸಿಂಗ್ ಸಾಧನೆಗೆ ತಕ್ಕ ಬೆಲೆ ಸಿಕ್ಕಿದೆ

ನಾಥು ಸಿಂಗ್ ಸಾಧನೆಗೆ ತಕ್ಕ ಬೆಲೆ ಸಿಕ್ಕಿದೆ

* ರಾಜಸ್ಥಾನ ಪರ ಆಡಿರುವ 6 ಪ್ರಥಮ ದರ್ಜೆ ಪಂದ್ಯಗಳಿಂದ 12 ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ.
* ನವೆಂಬರ್ 2015ರಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಅಧ್ಯಕ್ಷೀಯ ಮಂಡಳಿ XI ತಂಡದಲ್ಲಿ ಸ್ಥಾನ.
* ಅಂತಾರಾಷ್ಟ್ರೀಯ ಬ್ಯಾಟ್ಸ್ ಮನ್ ಗಳಿಗೆ ಮೊದಲ ಬಾರಿಗೆ ಬೌಲಿಂಗ್ ಮಾಡಿದರು. ಡೀನ್ ಎಲ್ಗಾರ್ ಅವರ ವಿಕೆಟ್ ಪಡೆದ ನಾಥು ಸಿಂಗ್ ಅವರು 145 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಎಸೆತ ಹಾಕಿ ಗಮನ ಸೆಳೆದರು.

ಟೆಸ್ಟ್ ಪಂದ್ಯ ಆಡುವುದು ನನ್ನ ಮಂದಿನ ಗುರಿ

ಟೆಸ್ಟ್ ಪಂದ್ಯ ಆಡುವುದು ನನ್ನ ಮಂದಿನ ಗುರಿ

* ಪಾಕಿಸ್ತಾನದ ಶೋಯಿಬ್ ಅಖ್ತರ್ ಅವರ ದಾಖಲೆಯ 160 kmph ವೇಗದ ಎಸೆತವನ್ನು ಮುರಿಯುವ ಗುರಿಯನ್ನು ಹೊಂದಿರುವುದಾಗಿ ನಾಥು ಹೇಳಿದ್ದಾರೆ.
* ಮುಂಬೈ ಇಂಡಿಯನ್ಸ್ ಪರ ಆಯ್ಕೆಯಾಗಿರುವ ನಾಥು ಸಿಂಗ್ ಅವರು ಟೀಂ ಇಂಡಿಯಾ ಪರ ಟೆಸ್ಟ್ ಪಂದ್ಯ ಆಡುವುದು ನನ್ನ ಮಂದಿನ ಗುರಿ ಎಂದಿದ್ದಾರೆ.

ನಾಥು ಸಿಂಗ್ ಕುಟುಂಬದ ಬಗ್ಗೆ ವರದಿ

ವೇಗಿ ನಾಥು ಸಿಂಗ್ ಕುಟುಂಬದ ಬಗ್ಗೆ ಎನ್ ಡಿಟಿವಿ ವರದಿ

ಕಾಮೆಂಟೆಟರ್ ಗೌತಮ್ ಭಿಮಾನಿ ಅವರಿಂದ ಟ್ವೀಟ್

ಕಾಮೆಂಟೆಟರ್ ಗೌತಮ್ ಭಿಮಾನಿ ಅವರು ಟ್ವೀಟ್ ಮಾಡಿ ನಾಥು ಸಿಂಗ್ ಸ್ಪೂರ್ತಿದಾಯಕ ಎಂದಿದ್ದಾರೆ.

ನಾಥು ಸಿಂಗ್ ಅವರ ಕುಟುಂಬದ ಚಿತ್ರ

ನಾಥು ಸಿಂಗ್ ಅವರ ಕುಟುಂಬದ ಚಿತ್ರ ಹೀಗಿದೆ. ಚಿತ್ರಕೃಪೆ: ಎಎನ್ ಐ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Young Rajasthan pacer Nathu Singh caught entire nation's attention after Mumbai Indians shelled out a staggering Rs 3.2 crores on this uncapped player in the IPL auction, held on Saturday(Feb.06).
Please Wait while comments are loading...