ಐಪಿಎಲ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕೊಹ್ಲಿ !

Posted By:
Subscribe to Oneindia Kannada

ಕೋಲ್ಕತ್ತಾ, ಮೇ 16: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ನಾಯಕ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಜಗತ್ತಿನ 'ರನ್ ಯಂತ್ರ' ಎಂದು ಕರೆಯುವುದು ಉತ್ಪೇಕ್ಷೆಯಲ್ಲ. ಐಪಿಎಲ್ ಇತಿಹಾಸದಲ್ಲಿ ಹೊಚ್ಚ ಹೊಸ ದಾಖಲೆಯೊಂದನ್ನು ಸೋಮವಾರ ರಾತ್ರಿ ಕೊಹ್ಲಿ ನುಚ್ಚು ನೂರು ಮಾಡಿದರು.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ದೆಹಲಿ ಮೂಲದ ಕೊಹ್ಲಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ 24ನೇ ಅರ್ಧಶತಕ ಸಿಡಿಸಿದ್ದಲ್ಲದೆ ಒಂದೇ ಸೀಸನ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ನಿರ್ಮಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 75ರನ್ ಗಳಿಸಿ ಗೆಲುವಿನ ರೂವಾರಿಯಾದರು.[ಪಂದ್ಯದ ಸ್ಕೋರ್ ಕಾರ್ಡ್]

ಕಿತ್ತಳೆ ಟೋಪಿ ಧರಿಸಿರುವ ಕೋಹ್ಲಿ ಅವರು ಈಗ 12 ಪಂದ್ಯಗಳಿಂದ 752ರನ್ ಚೆಚ್ಚಿದ್ದಾರೆ. ಲೀಗ್ ನಲ್ಲಿ ಇನ್ನು 2 ಪಂದ್ಯಗಳು ಬಾಕಿ ಇವೆ. ಪ್ಲೇ ಆಫ್ ಹಂತ ತಲುಪಿದರೆ ಇನ್ನಷ್ಟು ಪಂದ್ಯಗಳನ್ನಾಡಬಹುದು. [ಅಂಕ ಪಟ್ಟಿ]

IPL 2016: Virat Kohli sets yet another record, becomes highest run-getter in IPL history

ಒಂದೇ ಸೀಸನ್ ನಲ್ಲಿ ಅತಿ ಹೆಚ್ಚು ರನ್ ಗಳಿಕೆ ದಾಖಲೆ ಈ ಹಿಂದೆ ಕ್ರಿಸ್ ಗೇಲ್ ಹಾಗೂ ಮೈಕಲ್ ಹಸ್ಸಿ ಅವರ ಹೆಸರಿನಲ್ಲಿತ್ತು. ಇಬ್ಬರು ಸೀಸನ್ ವೊಂದರಲ್ಲಿ 733ರನ್ ಗಳಿಸಿದ್ದರು. ಈಗ ಕೊಹ್ಲಿ ಈ ಗಡಿಯನ್ನು ದಾಟಿದ್ದಾರೆ. [ಎಬಿಡಿ-ಕೊಹ್ಲಿ ನಿರ್ಮಿಸಿದ ದಾಖಲೆಗಳತ್ತ ಒಂದು ನೋಟ]

ಕ್ರಿಸ್ ಗೇಲ್ ಅವರು ಐಪಿಎಲ್ 4ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಈ ದಾಖಲೆ ಬರೆದರೆ, ಮೈಕಲ್ ಹಸ್ಸಿ ಅವರು ಐಪಿಎಲ್ 5ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಾ ಈ ಸಾಧನೆ ಮಾಡಿದ್ದರು.[ಐಪಿಎಲ್ ಫೈನಲಿಗೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಶುರು]

ಬಲಗೈ ಬ್ಯಾಟ್ಸ್ ಮನ್ ಕೊಹ್ಲಿ ಅವರು 700 ಪ್ಲಸ್ ರನ್ ಗಳಿಕೆ ಮಾಡಿದ ಮೊದಲ ಭಾರತೀಯ ಬ್ಯಾಟ್ಸ್ ಮನ್ ಎನಿಸಿದ್ದಾರೆ. ಈ ಮುಂಚೆ 2014ರ ಸೀಸನ್ ನಲ್ಲಿ ಕೆಕೆಆರ್ ಪರ ರಾಬಿನ್ ಉತ್ತಪ್ಪ ಅವರು 660ರನ್ ಗಳಿಸಿ ಮುಂಚೂಣಿಯಲ್ಲಿದ್ದರು.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Royal Challengers Bangalore (RCB) captain Virat Kohli set yet another batting record in the Indian Premier League (IPL) here today (May 16).
Please Wait while comments are loading...