ಕೋಚ್ ಏನಂದ್ರೇನಂತೆ, ಕೊಹ್ಲಿಗಿಲ್ಲ ಗಾಯದ ಚಿಂತೆ

Posted By:
Subscribe to Oneindia Kannada

ಬೆಂಗಳೂರು, ಮೇ 17: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ವಿರಾಟ್ ಕೊಹ್ಲಿ ಎಡಗೈಗೆ ಗಾಯ ಮಾಡಿಕೊಂಡಿರುವುದು ಅಭಿಮಾನಿಗಳಿಗೆ ಆತಂಕ ತಂದಿದೆ. ಆದರೆ, ಮ್ಯಾನೇಜ್ಮೆಂಟ್ ವಿರೋಧದ ನಡುವೆಯೂ ಪಂಜಾಬ್ ವಿರುದ್ಧದ ಐಪಿಎಲ್ 9 ಪಂದ್ಯದಲ್ಲಿ ಆಡಲು ಕೊಹ್ಲಿ ಸಿದ್ಧತೆ ನಡೆಸಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಸೋಮವಾರ ನಡೆದ ಪಂದ್ಯದಲ್ಲಿ ಫೀಲ್ಡ್ ಮಾಡುವಾಗ ಕ್ಯಾಚೊಂದನ್ನು ಹಿಡಿಯಲು ಯತ್ನಿಸಿ ವಿಫಲರಾದ ಕೊಹ್ಲಿ ಅವರು ಕೈಗೆ ಗಾಯ ಮಾಡಿಕೊಂಡರು. ತೋರುಬೆರಳು ಹಾಗೂ ಹೆಬ್ಬೆರಳಿನ ನಡುವಿನ ಚರ್ಮ ಹರಿದುಹೋಗಿತ್ತು. ನೋವಿನ ನಡುವೆ 51 ಎಸೆತಗಳಲ್ಲಿ 75 ರನ್ ಚೆಚ್ಚಿ ಪಂದ್ಯವನ್ನು ಗೆಲುವಿನ ನಗೆಯೊಂದಿಗೆ ಮುಗಿಸಿದ್ದು ಈಗ ಇತಿಹಾಸ. [ಐಪಿಎಲ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕೊಹ್ಲಿ !]

Virat Kohli

ಪಂದ್ಯದ ನಂತರ ಮಾತನಾಡುತ್ತಾ, 'ಗಾಯಕ್ಕೆ 7 ರಿಂದ 8 ಹೊಲಿಗೆ ಅಗತ್ಯವಿದೆ. ತಂಡ ಗೆಲ್ಲುತ್ತಿದ್ದರೆ, 10 ಹೊಲಿಗೆ ಹಾಕಿಕೊಂಡಾದರೂ ಆಡಲು ಸಿದ್ಧ' ಎಂದು ಕೊಹ್ಲಿ ಹೇಳಿದ್ದರು. [ಕೊಹ್ಲಿ -ಎಬಿಡಿ ಬ್ಯಾಟ್ ಮನ್- ಸೂಪರ್ ಮ್ಯಾನ್ ಇದ್ದಂತೆ!]

ಗಾಯದ ಸ್ವರೂಪ ತೀವ್ರವಾಗಿದ್ದು, ಪೆವಿಲಿಯನ್ ಗೆ ಹೋಗುವಾಗ ನಾನು ನಿಜಕ್ಕೂ ಆತಂಕಗೊಂಡಿದ್ದೆ. ಫಿಜಿಯೋ ಹಾಗೂ ಕೋಚ್ ವೆಟ್ಟೋರಿ ಅವರು ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಮಾಡುವಂತೆ ಸೂಚಿಸಿದರು. ಆದರೆ, ನನಗೆ ಆ ಕ್ಷಣಕ್ಕೆ ಕಣಕ್ಕಿಳಿಯಬೇಕಿತ್ತು. ಎಲ್ಲವೂ ಅಂದುಕೊಂಡಂತೆ ಆಯಿತು ಎಂದು ಕೋಹ್ಲಿ ಹೇಳಿದ್ದಾರೆ. [ಎಬಿಡಿ-ಕೊಹ್ಲಿ ನಿರ್ಮಿಸಿದ ದಾಖಲೆಗಳತ್ತ ಒಂದು ನೋಟ]

ಆದರೆ, ಕೊಹ್ಲಿ ವಿಶ್ರಾಂತಿ ಪಡೆಯದೆ ಪಂಜಾಬ್ ವಿರುದ್ಧದ ಪಂದ್ಯಕ್ಕಾಗಿ ತೀವ್ರ ಅಭ್ಯಾಸ ನಡೆಸಿದ್ದಾರೆ. ಮ್ಯಾನೇಜ್ಮೆಂಟ್, ಕೋಚ್, ಫಿಜಿಯೋ ವಿರೋಧದ ನಡುವೆಯೂ ಬುಧವಾರದಂದು ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆಡಲು ನಿರ್ಧರಿಸಿದ್ದಾರೆ. [ಐಪಿಎಲ್ ಫೈನಲಿಗೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಶುರು]

ಕೊಹ್ಲಿ ಬದಲಿಗೆ ಫೀಲ್ಡಿಂಗ್ ಬದಲಿ ಆಟಗಾರರೊಬ್ಬರನ್ನು ಆಡಿಸಿ, ಕೊಹ್ಲಿ ಕೆಲ ಹೊತ್ತು ಫೀಲ್ಡ್ ನಲ್ಲಿ ಉಳಿಯುವಂತೆ ಯೋಜನೆ ಹಾಕಿಕೊಳ್ಳಲಾಗಿದೆ. ಆದರೆ, ಬ್ಯಾಟಿಂಗ್ ಮಾಡುವಾಗ ಮಾತ್ರ ಕೊಹ್ಲಿಗೆ ಬದಲಿ ಆಟಗಾರ ಸದ್ಯಕ್ಕಂತೂ ಯಾರೂ ಸಿಗುತ್ತಿಲ್ಲ. ಕೊಹ್ಲಿ ಇಲ್ಲದೆ ಆರ್ ಸಿಬಿಗೂ ಚೇಸ್ ಸುಲಭವಲ್ಲ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Royal Challengers Bangalore (RCB) skipper Virat Kohli played another captain's knock to take his side comfortably home in the Indian Premier League (IPL) here today (May 16).
Please Wait while comments are loading...