ಐಪಿಎಲ್ : ಗುಜರಾತಿನ ಲಯನ್ಸ್ ಗೆ ರೈನಾ ಕ್ಯಾಪ್ಟನ್

Posted By:
Subscribe to Oneindia Kannada

ನವದೆಹಲಿ, ಫೆ.೦2: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ 9ನೇ ಆವೃತ್ತಿಯ ಹೊಸ ತಂಡ ರಾಜ್ ಕೋಟ್ ಗೆ ಹೊಸ ಹೆಸರು, ಹೊಸ ನಾಯಕ, ಹೊಸ ಲಾಂಛನ ಘೋಷಣೆ ಮಾಡಲಾಗಿದೆ.

ಹೊಸ ತಂಡಕ್ಕೆ ಗುಜರಾತ್ ಲಯನ್ಸ್ ಎಂದು ಹೆಸರಿಡಲಾಗಿದ್ದು, ಸುರೇಶ್ ರೈನಾ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಘರ್ಜಿಸುತ್ತಿರುವ ಸಿಂಹ ವಿರುವ ಲಾಂಛನ ನಮ್ಮದು ಎಂದು ಇಂಟೆಕ್ಸ್ ಮಾಲೀಕ ಕೇಶವ್ ಬನ್ಸಾಲ್ ಅವರು ಮಂಗಳವಾರ(ಫೆಬ್ರವರಿ 02) ಘೋಷಿಸಿದರು. ಆಸ್ಟ್ರೇಲಿಯಾದ ಅನುಭವಿ ಆಟಗಾರ ಬ್ರಾಡ್ ಹಾಡ್ಜ್ ಅವರನ್ನು ತಂಡದ ಕೋಚ್ ಆಗಿ ನೇಮಿಸಲಾಗಿದೆ.[ಹರಾಜಿಗೆ ಸಿದ್ಧರಾದ 351 ಆಟಗಾರರ ಪೂರ್ಣ ಪಟ್ಟಿ]

ಕಳೆದ ವರ್ಸಹ್ ಡಿಸೆಂಬರ್ ನಲ್ಲಿ ನಡೆದ ಐಪಿಎಲ್ ಡ್ರಾಫ್ಟ್ ನಲ್ಲಿ ಇಂಟೆಕ್ಸ್ ಸಂಸ್ಥೆ ರಾಜ್ ಕೋಟ್ ತಂಡಕ್ಕಾಗಿ ಸುರೇಶ್ ರೈನಾ ಅವರನ್ನು 12.5 ಕೋಟಿ ರು ನೀಡಿ ಖರೀದಿಸಿತ್ತು. ಒಟ್ಟಾರೆ ಚೆನ್ನೈ ಸೂಪರ್ ಕಿಂಗ್ಸ್ ನ 7 ಹಾಗೂ ರಾಜಸ್ಥಾನ್ ರಾಯಲ್ಸ್ ನ 3 ಆಟಗಾರರು ಮೊದಲಿಗೆ ರಾಜ್ ಕೋಟ್ ಹಾಗೂ ಪುಣೆ ತಂಡ ಪಾಲಾದರು.[ಐಪಿಎಲ್: ಕೊಹ್ಲಿ, ಧೋನಿ ಸಂಬಳ ವಿವರ ಬಹಿರಂಗ]

ಟೀಂ ಇಂಡಿಯಾದ ಪ್ರಮುಖ ಟಿ20 ಆಟಗಾರ ರವೀಂದ್ರ ಜಡೇಜ ಕೂಡಾ ಗುಜರಾತ್ ಲಯನ್ಸ್ ಪರ ಆಡುತ್ತಿದ್ದಾರೆ. ಫೆಬ್ರವರಿ 6ರಂದು ಬೆಂಗಳೂರಿನಲ್ಲಿ ಉಳಿದ ಆಟಗಾರರ ಆಯ್ಕೆ ಹರಾಜು ಮೂಲಕ ನಡೆಯಲಿದೆ.

ಹೊಸ ತಂಡದ ಪರಿಚಯ:
ತಂಡದ ಹೆಸರು: ಗುಜರಾತ್ ಲಯನ್ಸ್
ತಂಡದ ನಾಯಕ: ಸುರೇಶ್ ರೈನಾ (ಭಾರತ)
ತಂಡದ ಕೋಚ್: ಬ್ರಾಡ್ ಹಾಡ್ಜ್ (ಆಸ್ಟ್ರೇಲಿಯಾ)
ತಂಡದ ಟ್ವಿಟ್ಟರ್ ಖಾತೆ: @TheGujaratLions

ತಂಡದ ಫೇಸ್ ಬುಕ್ ಖಾತೆ: https://www.facebook.com/TheGujaratLions/?fref=ts
ತಂಡದ ಮಾಲೀಕರು: ಇಂಟೆಕ್ಸ್ ಟೆಕ್ನಾಲಜೀಸ್ ಲಿಮಿಟೆಡ್

ಈಗ ಧೋನಿ vs ರೈನಾ ಕದನ ಸೂಪರ್

ಈಗ ಧೋನಿ vs ರೈನಾ ಕದನ ಸೂಪರ್

ಐಪಿಎಲ್ 9 ಆಪ್ತ ಗೆಳಯರಾದ ಒಂದು ಕಾಲದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಧಾರ ಸ್ತಂಭಗಳಾಗಿದ್ದ ಧೋನಿ ಹಾಗೂ ರೈನಾ ಅವರು ಈ ಬಾರಿ ಹೊಸ ತಂಡಗಳ ನಾಯಕರಾಗಿ ಪರಸ್ಪರ ಕಾದಾಡಬೇಕಿದೆ. ರೈನಾಗೆ ಜಡೇಜ ಅವರ ಸಾಥ್ ಸಿಕ್ಕಿದೆ.

ಗುಜರಾತ್ ಲಯನ್ಸ್ ತಂಡದ ಲೋಗೋ

ಗುಜರಾತ್ ಲಯನ್ಸ್ ತಂಡದ ಲೋಗೋ ಹೀಗಿದೆ

ಸಂಭ್ರಮಗಳ ನಾಡಿನಿಂದ ಹೊಸ ತಂಡ

ಸಂಭ್ರಮಗಳ ನಾಡಿನಿಂದ ಹೊಸ ತಂಡ ಲಯನ್ಸ್ ಗೆ ನಿಮ್ಮ ಬೆಂಬಲ ಸೂಚಿಸಿ ಎಂದು ಟ್ವೀಟ್ ಮಾಡಿದ ಗುಜರಾತ್ ಲಯನ್ಸ್

ರೈನಾ ಅವರಿಗೆ ಒಲಿದ ನಾಯಕತ್ವ ಪಟ್ಟ

ರೈನಾ ಅವರಿಗೆ ಒಲಿದ ನಾಯಕತ್ವ ಪಟ್ಟ

ಸುರೇಶ್ ರೈನಾ (ಭಾರತ)ಅಲ್ಲದೆ ತಂಡದಲ್ಲಿರುವ ಪ್ರಮುಖ ಆಟಗಾರರು , ರವೀಂದ್ರ ಜಡೇಜ (ಭಾರತ), ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್) , ಜೇಮ್ಸ್ ಫಾಲ್ಕನರ್ (ಆಸ್ಟ್ರೇಲಿಯಾ), ಡ್ವಾಯ್ನೆ ಬ್ರಾವೋ (ವೆಸ್ಟ್ ಇಂಡೀಸ್)

ರೈಸಿಂಗ್ ಪುಣೆ ಸೂಪರ್ ಜೈಂಟ್ಸ್

ರೈಸಿಂಗ್ ಪುಣೆ ಸೂಪರ್ ಜೈಂಟ್ಸ್

ಪುಣೆ ಫ್ರಾಂಚೈಸಿಗೆ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ (ಆರ್​ಪಿಎಸ್​ಜಿ) ಹೆಸರಿಡಲಾಗಿದ್ದು, ಎಂಎಸ್ ಧೋನಿ ನಾಯಕರಾಗಿದ್ದಾರೆ. ಆಸ್ಟ್ರೇಲಿಯಾದ ನಾಯಕ ಸ್ಟೀವನ್ ಸ್ಮಿತ್, ದಕ್ಷಿಣ ಆಫ್ರಿಕಾದ ನಾಯಕ ಫಾಫ್ ಡು ಪ್ಲೆಸಿಸ್, ಆರ್ ಅಶ್ವಿನ್ ಹಾಗೂ ಅಜಿಂಕ್ಯ ರಹಾನೆರಂಥ ಪ್ರತಿಭಾವಂತರು ತಂಡದಲ್ಲಿದ್ದಾರೆ. ಉಳಿದ ಆಟಗಾರರನ್ನು ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಫೆ. 6ರಂದು ನಡೆಯಲಿರುವ ಹರಾಜಿನಲ್ಲಿ ಖರೀದಿಸಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The latest entrant in the cash rich Indian Premier League, team Rajkot has announced its official name as Gujarat Lions and also declared Suresh Raina as its captain in the ninth edition of the tournament.
Please Wait while comments are loading...