ಕೊಹ್ಲಿ ನಂತರ ರೈನಾ ಐಪಿಎಲ್ ನ ದಾಖಲೆ ರನ್ ಸರದಾರ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಕಾನ್ಪುರ, ಮೇ 20: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್ 9) ನಲ್ಲಿ ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ 4,000 ರನ್ ಪೂರೈಸಿದ್ದಾರೆ. ಮೇ 19ರಂದು ಕಾನ್ಪುರದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ 53 ರನ್ ಗಳಿಸಿ ಈ ಸಾಧನೆಗೈದರು. ಕಳೆದ ಎಲ್ಲಾ ಐಪಿಎಲ್ ಟೂರ್ನಿಗಳಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುತ್ತಿದ್ದರು.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಮ್ಯಾಚ್ ಫಿಕ್ಸಿಂಗ್ ಹಗರಣದದಿಂದಾಗಿ ಚೆನ್ನೈ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡವನ್ನು ಅಮಾನತ್ತುಗೊಳಿಸಿದ್ದರಿಂದ ಐಪಿಎಲ್ 2016 ನಲ್ಲಿ ಮೊದಲ ಬಾರಿಗೆ ಗುಜರಾತ್ ಲಯನ್ಸ್ ತಂಡವನ್ನು ರೈನಾ ಮುನ್ನಡೆಸುತ್ತಿದ್ದಾರೆ. [ಕೊಹ್ಲಿಯಿಂದ 4ನೇ ಶತಕ, 4 ಸಾವಿರ ರನ್ ಸರದಾರ!]

Suresh Raina completes 4000 runs in IPL, overtakes Kohli as all time highest-scorer

ಈವರೆಗೆ ನಡೆದ 9 ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಒಟ್ಟು 144 ಪಂದ್ಯಗಳನ್ನು ಆಡಿರುವ ರೈನಾ 33.93 ರನ್ ಸರಾಸರಿಯಲ್ಲಿ 4,038 ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. [ಕೊಹ್ಲಿಯನ್ನು ಬೆಚ್ಚಿಬೀಳಿಸಬಲ್ಲ ಬೌಲರ್ ಯಾರು?]

ಇನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಅವರು ಒಟ್ಟು 141 ಐಪಿಎಲ್ ಪಂದ್ಯಗಳಲ್ಲಿ 3,844 ರನ್ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ದಾಖಲೆಗಳ ವೀರ ವಿರಾಟ್ ಕೊಹ್ಲಿ 4,000 ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A day after Virat Kohli overtook him as first player to score 4000 runs, Gujarat Lions' skipper Suresh Raina on Thursday (May 19) too completed 4000 runs in the IPL.
Please Wait while comments are loading...