ಇರ್ಫಾನ್ ಗೆ ಅವಕಾಶ ನೀಡದ ಧೋನಿ ಮೇಲೆ ಗವಾಸ್ಕರ್ ಗರಂ

Posted By:
Subscribe to Oneindia Kannada

ನವದೆಹಲಿ, ಮೇ 19: ರೈಸಿಂಗ್ ಪುಣೆ ಸೂಪರ್‌ ಜೈಂಟ್ಸ್ ತಂಡದ ನಾಯಕ ಎಂಎಸ್ ಧೋನಿ ತನ್ನ ಬ್ಯಾಟಿಂಗ್ ಕೌಶಲಕ್ಕೆ ನ್ಯಾಯ ಒದಗಿಸಿಲ್ಲ. ವಿಶ್ವ ದರ್ಜೆಯ ಬೌಲರ್ ಇರ್ಫಾನ್ ಪಠಾಣ್‌ಗೂ ಟೂರ್ನಿಯಲ್ಲಿ ಸೂಕ್ತ ಅವಕಾಶ ನೀಡಿಲ್ಲ ಎಂದು ಟೆಸ್ಟ್ ಕ್ರಿಕೆಟ್‌ನ ಮಾಜಿ ನಾಯಕ್ ಸುನೀಲ್ ಗವಾಸ್ಕರ್ ಆರೋಪಿಸಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಕೂಡಾ ಪ್ರಶ್ನೆ ಮಾಡಿದ್ದರು.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಆದರೆ, ಇರ್ಫಾನ್ ಪಠಾಣ್ ಅವರಿಗೆ ಅವಕಾಶ ನೀಡಿದಿರುವುದರ ಬಗ್ಗೆ ಅನೇಕ ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವರ್ಷದ ಐಪಿಎಲ್‌ನಲ್ಲಿ ಕೇವಲ 2 ಪಂದ್ಯಗಳನ್ನು ಆಡಿ, 7 ರನ್ ಗಳಿಸಿದ್ದಾರೆ. ಇಡೀ ಟೂರ್ನಿಯಲ್ಲಿ ಕೇವಲ ಒಂದು ಓವರ್ ಬೌಲಿಂಗ್ ಮಾಡಿದ್ದಾರೆ.

IPL 9: Sunil Gavaskar slams MS Dhoni for not handling 'world-class bowler' Irfan Pathan well

ಆಲ್‌ರೌಂಡರ್ ಇರ್ಫಾನ್ ಪಠಾಣ್‌ಗೆ ಟೂರ್ನಿಯಲ್ಲಿ ಧೋನಿ ಸರಿಯಾದ ಅವಕಾಶ ನೀಡದೇ ಇರುವುದನ್ನು ಸೂಕ್ಷ್ಮವಾಗಿ ಗಮನಿಸಿರುವ ಗವಾಸ್ಕರ್, ಧೋನಿಯ ತಂತ್ರಗಾರಿಕೆಯ ಬಗ್ಗೆಯ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷದ ಐಪಿಎಲ್‌ನಲ್ಲಿ ಇರ್ಫಾನ್ ಪಠಾಣ್, ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದಾಗ ಅವರಿಗೆ ಅವಕಾಶ ನೀಡಿರಲಿಲ್ಲ. ಈ ವರ್ಷವೂ ಪುಣೆ ತಂಡದಲ್ಲಿ ಅವರನ್ನು ಕಡೆಗಣಿಸಲಾಗಿದೆ.

ಫಾಪ್ ಡು ಪ್ಲೆಸಿಸ್, ಸ್ಟೀವ್ ಸ್ಮಿತ್ ಹಾಗೂ ಮಿಚೆಲ್ ಮಾರ್ಷ್ ಟೂರ್ನಿಯಿಂದ ಹೊರ ನಡೆದ ಹಿನ್ನೆಲೆಯಲ್ಲಿ ಎಡಗೈ ದಾಂಡಿಗ ಪಠಾಣ್‌ರನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕಾಗಿತ್ತು ಎಂದು ಆಂಗ್ಲ ಪತ್ರಿಕೆಯೊಂದಕ್ಕೆ ಬರೆದಿರುವ ಅಂಕಣಬರಹದಲ್ಲಿ ಗವಾಸ್ಕರ್ ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former India skipper Sunil Gavaskar has criticised Rising Pune Supergiants' captain MS Dhoni for not handling 'world-class bowler' Irfan Pathan in the ongoing Indian Premier League (IPL) well.
Please Wait while comments are loading...